ಪೋಸ್ಟ್‌ಗಳು

ರಾಷ್ಟ್ರಪತಿ ಸ್ವರ್ಣಪದಕ ಪುರಸ್ಕೃತ - ಗೃಹ ರಕ್ಷಕ ದಳದ ಕಂಪೆನಿ ಕಮಾಂಡೆಂಟ್ ಹ. ಪುಟ್ಟಸ್ವಾಮಿ

ಇಮೇಜ್
ಅಜ್ಜಂಪುರದ ಸಾಧಕರ ಪರಿಚಯ ಈ ಬ್ಲಾಗ್ ನಲ್ಲಿ ಸತತವಾಗಿ ನಡೆಯುತ್ತಿದೆಯಷ್ಟೆ . ಅದಕ್ಕೆ ಇನ್ನೊಂದು ಗರಿಯಾಗಿ ರಾಷ್ಟ್ರಪತಿ ಸ್ವರ್ಣಪದಕ ಪುರಸ್ಕೃತ - ಗೃಹ ರಕ್ಷಕ ದಳದ ಕಂಪೆನಿ ಕಮಾಂಡೆಂಟ್ ಹ . ಪುಟ್ಟಸ್ವಾಮಿಯವರ ಸಾಧನೆ ಸ್ಮರಣಾರ್ಹ . ಹೀಗಾಗಿ ಅವರನ್ನು ಕುರಿತ ಪರಿಚಯ ಲೇಖನವನ್ನು ಆಸ್ಥೆಯಿಂದ ಸಿದ್ಧಪಡಿಸಿ ನನಗೆ ತಲುಪಿಸಿದವರು ಗೆಳೆಯ ಅಜ್ಜಂಪುರ ಮಲ್ಲಿಕಾರ್ಜುನ್ . ಅವರಂತೆಯೇ ಇತರರೂ ಕೂಡ ತಮ್ಮ ಸಂಪರ್ಕದಲ್ಲಿ ಬರುವ ಅಜ್ಜಂಪುರದ ಸಾಧಕರನ್ನು ಹೀಗೆಯೇ ಪರಿಚಯಿಸಲು ಈ ಬ್ಲಾಗ್ ಮುಕ್ತವಾಗಿದೆ . - ಶಂಕರ ಅಜ್ಜಂಪುರ ಅಜ್ಜಂಪುರವು ಸಾಂಸ್ಕೃತಿಕ , ಶೈಕ್ಷಣಿಕ , ಧಾರ್ಮಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ , ಕರ್ನಾಟಕದ ನಕ್ಷೆಯಲ್ಲಿ ಗುರುತಿಸಿಕೊಂಡಿದೆ . ಎಲ್ಲ ಊರುಗಳಂತೆ ಅಜ್ಜಂಪುರದಲ್ಲಿಯೂ ಗೃಹ ರಕ್ಷಕ ದಳ ಕಾರ್ಯನಿರ್ವಹಿಸಲು ಆರಂಭಿಸಿತು . ಈ ಸೇವೆಯ ಪರಿಚಯವಿರದ ಜನರೇ ಅಧಿಕವಾಗಿದ್ದ ಊರಿನಲ್ಲಿ , ಅದನ್ನು ತೀವ್ರವಾಗಿ ತೆಗೆದುಕೊಂಡು , ರಾಷ್ಟ್ರಪತಿಗಳ ಪದಕ ಪಡೆಯುವ ಮಟ್ಟಿಗಿನ ಸಾಧನೆಯನ್ನು ತೋರಿದವರು ಹ . ಪುಟ್ಟಸ್ವಾಮಿ . ಅಜ್ಜಂಪುರದ ಈ ಘಟಕವು ರಾಜ್ಯದಲ್ಲೇ ಶಿಸ್ತುಬದ್ಧ ಘಟಕವೆಂದು ಹೆಸರು ಪಡೆಯಲು ಶ್ರಮಿಸಿದ ಶಿಸ್ತಿನ ಸಿಪಾಯಿ ಹ . ಪುಟ್ಟಸ್ವಾಮಿಯವರ ಸೇವೆ ಮತ್ತು ...

ಋಜುತ್ವ - ಕಠಿಣ ಪರಿಶ್ರಮಗಳ ಸಂಕೇತ ಎ.ಪಿ.ನಾಗರಾಜ ಶೆಟ್ಟರು.

ಇಮೇಜ್
ಅಜ್ಜಂಪುರದಲ್ಲಿ ಮುದ್ರಣ ಕ್ಷೇತ್ರದ ಮೊದಲಿಗರು ಶ್ರೀ ಎ.ಪಿ. ನಾಗರಾಜಶೆಟ್ಟರು. ಸದಾ ಖಾದಿಧಾರಿಯಾಗಿರುತ್ತಿದ್ದ ಅವರು ಎಂದಿಗೂ ರಾಜಕೀಯದ ಪ್ರವೇಶವನ್ನೇ ಮಾಡಲಿಲ್ಲ. ಖಾದಿ ಅವರಿಗೆ ಸ್ವಾವಲಂಬನೆಯ ಸಂಕೇತ ಮಾತ್ರವಾಗಿತ್ತು. ಉದ್ಯಮ, ಕಲೆ, ಪತ್ರಕರ್ತ, ಸಾಹಿತ್ಯಾಭಿಮಾನಿ, ಸಂಘಟಕ ಮುಂತಾಗಿ ಹಲವು ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶ್ರೀ ನಾಗರಾಜಶೆಟ್ಟರು ಉದ್ಯೋಗನಿಮಿತ್ತವಾಗಿ ಸಮೀಪದ ನರಸಿಂಹರಾಜಪುರದಲ್ಲೂ ಕೆಲಕಾಲ ವಾಸವಿದ್ದರು. ಅಲ್ಲಿನ ಕರ್ನಾಟಕ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾತ್ರವಹಿಸಿದರು. ಅವರು ಯುವಕರಾಗಿದ್ದಾಗ ನಡೆಯುತ್ತಿದ್ದ ಸ್ವಾತಂತ್ರ್ಯ ಹೋರಾಟದ ಮೌಲ್ಯಗಳನ್ನು ಜೀವನವಿಡೀ ಪಾಲಿಸಿಕೊಂಡು ಬಂದ ಈ ಹಿರಿಯ ಚೇತನದ ಬಗ್ಗೆ, ಅಜ್ಜಂಪುರದ ಗೆಳೆಯ ಚಿಂತಕ, ಲೇಖಕ ಅಪೂರ್ವ ಅವರ ಸ್ಮರಣೆ ಇಲ್ಲಿದೆ, ನಿಮಗಾಗಿ.  -ಶಂಕರ ಅಜ್ಜಂಪುರ ನಾಗರಾಜ ಶೆಟ್ಟರ ಮಂಡಿ ,  ಮುದ್ರಣಾಲಯಗಳು ನಮ್ಮ ಮನೆಯೆದುರಿಗೇ ಇದ್ದುದರಿಂದ ನಾನು ಅವರನ್ನು ತುಂಬ ಶೈಶವದಿಂದಲೇ ಬಲ್ಲೆ. ಅವರ ಮಗ ಮಂಜುನಾಥ ಅಜ್ಜಂಪುರ - ನನ್ನ ಆಪ್ತಸ್ನೇಹಿತನಾಗುವುದಕ್ಕೆ ತುಂಬ ಮುಂಚೆಯೇ ,  ನನಗೆ ಅವರ ವ್ಯವಸ್ಥಿತ ಜೀವನಶೈಲಿಯ ಪರಿಚಯವಾಗಿತ್ತು. ಅವರ ತಂದೆ ಫಣಿಯಪ್ಪ ಶೆಟ್ಟರು ಜವಳಿ ವ್ಯಾಪಾರಿಯಾಗಿ ,  ಅಡಿಕೆ ಚೇಣಿ ಇತ್ಯಾದಿ ಮಾಡಿದಂತಹವರು. ನೂರು ವರ್ಷಗಳ ಹಿಂದೆಯೇ ಮದ್ರಾಸಿನಿಂದ ರಾಮಾಯಣ - ಮಹಾಭಾರತ - ಭಾಗವತಗಳ ಕನ್...