110. ವಿಶ್ವ ರಂಗಭೂಮಿ ದಿನಾಚರಣೆ : ಅಜ್ಜಂಪುರದ ಒಂದು ನೆನಪು
ಆತ್ಮೀಯ ಓದುಗರೇ, ಇಲ್ಲಿ ಅಜ್ಜಂಪುರದ ಹಳೆಯ ನೆನಪೊಂದನ್ನು ಮಿತ್ರ ಅಪ್ಪಾಜಿ ಜಿ.ಬಿ. ಇವರು ಸುಂದರವಾಗಿ ದಾಖಲಿಸಿದ್ದಾರೆ. ಸೂಕ್ಷ್ಮಗ್ರಾಹಿಗಳಿಗೆ ಮಾತ್ರ ಸಾಧ್ಯವಾಗುವ ಇಂಥ ಅನೇಕ ಸ್ಮರಣೆಗಳನ್ನು ಅಪ್ಪಾಜಿ ಈ ಹಿಂದೆಯೂ ನೀಡಿರುವುದುಂಟು. ಡಾ. ಶಿವರಾಮ ಕಾರಂತರು ಅಜ್ಜಂಪುರಕ್ಕೆ ಬಂದಾಗ ಅವರು ಊರಿನ ಕಲಾ ಸೇವಾ ಸಂಘದ ಬಗ್ಗೆ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಯಥಾರ್ಥವಾಗಿ ನೀಡಲಾಗಿದೆ. ಅಜ್ಜಂಪುರದ ಕಲಾವಿದ ಶ್ರೀ ಸಿದ್ದಪ್ಪನವರ ಬಗ್ಗೆಯೂ ನೆನಪುಗಳಿವೆ. ಅವು ಹಾಗೇ ಹಾರಿಹೋಗದಿರಲೆಂದು ಇಲ್ಲಿ ದಾಖಲಿಸಿರುವೆ. ಡಾ. ಶಿವರಾಮ ಕಾರಂತರು, ಕಲಾವಿದ ಜಿ.ಸಿ. ಸಿದ್ದಪ್ಪನವರು. ಇಂದು ವಿಶ್ವ ರಂಗಭೂಮಿ ದಿನಾಚರಣೆ : ಅಜ್ಜಂಪುರದ ಒಂದು ನೆನಪು ಪ್ರಖ್ಯಾತ ಕಾದಂಬರಿಕಾರ, ಪ್ರಖರ ಚಿಂತಕ ಕೋಟ ಶಿವರಾಮ ಕಾರಂತರಿಗೆ ಜ್ಞಾನಪೀಠ ಪ್ರಶಸ್ತಿ ಬಂದ ಹೊಸತರಲ್ಲಿ ನಾಡಿನಾದ್ಯಂತ ಬಿದರೆಯಿಂದ ಕೊಡಗಿನ ತನಕ ಜನರು ಸನ್ಮಾನ ಸಮಾರಂಭ ಏರ್ಪಡಿಸಿ, ಸಂಭ್ರಮಿಸಿದರು. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯ ನಮ್ಮೂರು ಅಜ್ಜಂಪುರದಲ್ಲಿ ಕೂಡ ಆಗ ಕಾರಂತರಿಗೆ ಸನ್ಮಾನ ನಡೆಯಿತು. ಅಜ್ಜಂಪುರದ ಹವ್ಯಾಸಿ ರಂಗ ಸಂಸ್ಥೆ ಕಲಾ ಸೇವಾ ಸಂಘದ ರಂಗಮಂದಿರದಲ್ಲಿ ಸನ್ಮಾನ. ನಮ್ಮೂರಿನ ಸಂಘಟಕರು ಪ್ರಾಸ್ತಾವಿಕ ಭಾಷಣದಲ್ಲಿ ನಮ್ಮ ಸಂಸ್ಥೆಯ ಜಗಜ್ಯೋತಿ ಬಸವೇಶ್ವರ ನಾಟಕದ ನೂರು ಪ್ರದರ್ಶನಗಳು ನಡೆದಿವೆ ಇತ್ಯಾದಿ ಅಭಿಮಾನದ ಮಾತುಗಳನ್ನು ಹೇಳಿಕೊಂಡರು. ಮೊದಲಿಗೆ ಕಲಾ ಸೇವಾ ಸಂಘದ ಹೆಸರಿನ ಜಾಡನ್ನೇ ಹಿಡಿ