122. ಅಪೂರ್ವ ಅಜ್ಜಂಪುರ - ಸಾಧನೆಗೆ ಸಂದ ಗೌರವ

ಅಪ್ಪಾಜಿ ಅಜ್ಜಂಪುರ (ಕಾವ್ಯನಾಮ - ಅಪೂರ್ವ) ನನ್ನ ಆತ್ಮೀಯ ಮಿತ್ರರು. ನನ್ನ ಸಂಪಾದಕತ್ವದಲ್ಲಿ ಪ್ರಕಟವಾಗುತ್ತಿರುವ 'ಅಂತರಜಾಲದಲ್ಲಿ ಅಜ್ಜಂಪುರ' ಬ್ಲಾಗಿನ ಅನೇಕ ಲೇಖನಗಳನ್ನು ಅವರು ವಿಷಯ ಸಂಗ್ರಹಿಸಿ ಬರೆದು ಸಹಕರಿಸಿದ್ದಾರೆ. 

ಇತ್ತೀಚೆಗಷ್ಟೇ ಅವರ ಕಥಾ ಕವನ ಸಂಕಲನ  'ಒಂದಷ್ಟು ಕತೆಗಳು, ಕವಿತೆಗಳು' ಅಜ್ಜಂಪುರದಲ್ಲಿ ಬಿಡುಗಡೆಯಾಯಿತು. ಸಾಹಿತ್ಯಕ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ಜಿಲ್ಲಾ ಪತ್ರಿಕೆಗಳು ಮತ್ತು ರಾಜ್ಯ ಪತ್ರಿಕೆಗಳಲ್ಲಿ ಲೇಖನಗಳನ್ನು ಪ್ರಕಟಿಸಿದ್ದಾರೆ.  

ಸೂಕ್ಷ್ಮ ಸಂವೇದನೆಯ ಅಭಿವ್ಯಕ್ತಿಯು ಅವರ ಕವಿತೆಗಳಲ್ಲಿ ಎದ್ದು ಕಾಣುತ್ತದೆ. ವಿಶೇಷತಃ ಅಲ್ಲಮನ ವಚನಗಳ ಅವರ ವಿಶ್ಲೇಷಣೆ ನನಗೆ ತುಂಬ ಮೆಚ್ಚಿನ ಸಂಗತಿ. 

ಅವರಿಗೆ ಸಂಬಂಧಿಸಿದಂತೆ 2023ರ ಹೊಸ ಸಂಗತಿ ಎಂದರೆ ಅವರು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಅಜ್ಜಂಪುರ ಶಾಖೆಯ ಅಧ್ಯಕ್ಷರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಇದು ನಿಜಕ್ಕೂ ಅವರ ಸೇವೆ ಮತ್ತು ಅಭಿರುಚಿಗೆ ಸಂದ ಗೌರವವೆಂದೇ ತಿಳಿಯುತ್ತೇನೆ. ಅವರಿಗೆ ಹಾರ್ದಿಕ ಅಭಿನಂದನೆಗಳು.

ಕಾಮೆಂಟ್‌ಗಳು

ಕಾಮೆಂಟ್‌‌ ಪೋಸ್ಟ್‌ ಮಾಡಿ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

124 ಮೃತ್ತಿಕೆಯೊಳಗಣ ಅಪರೂಪದ ವಜ್ರ _ ಗೌ.ಮ. ಉಮಾಪತಿ ಶಾಸ್ತ್ರೀ

125. ಆದರ್ಶ ಅಧ್ಯಾಪಕ ಶ್ರೀ ನಾಗರಾಜ್ ಎಂ.ಎನ್.

126. ಅಪೂರ್ವ ಕಥೆ ಕವನಗಳ ಅವಲೋಕನ