ಪೋಸ್ಟ್‌ಗಳು

07. ಇವರು ನಮ್ಮ ಹಿರಿಯರು

ಇಮೇಜ್
ನಾನು ಈ ಹಿಂದೆ ತಿಳಿಸಿದ್ದಂತೆ ಅಜ್ಜಂಪುರದಲ್ಲಿ ನಮ್ಮೊಡನಿದ್ದ ಕೆಲವು ಹಿರಿಯರ ಬಗ್ಗೆ ನನ್ನ ನೆನಪಿನಲ್ಲಿರುವ ಸಂಗತಿಗಳನ್ನು ಇಲ್ಲಿ ಹಂಚಿಕೊಳ್ಳುತ್ತಿರುವೆ. ಇವರಲ್ಲಿ ಅನೇಕರನ್ನು ನೀವು ನೋಡಿರಬಹುದು, ಒಡನಾಡಿರಬಹುದು. ಇಂಥ ನೆನಪುಗಳನ್ನು ಮೆಲುಕುಹಾಕಲು ಈ ಬಗೆಯ ಚಿತ್ರ - ವಿವರಗಳು ಸಹಾಯಕವಾಗುತ್ತವೆಯೆಂದು ಅನ್ನಿಸಿದ್ದರಿಂದ ಈ ಪ್ರಯತ್ನ. ನನ್ನ ಸಂಗ್ರಹದಲ್ಲಿರುವ ವ್ಯಕ್ತಿಗಳ ಚಿತ್ರಗಳಿಗೆ ಸಂಬಂಧಿಸಿದಂತೆ ಕೆಲವು ಸಾಲುಗಳನ್ನು ಬರೆದಿರುವೆ. ಇದನ್ನು ನೀವೂ ಮುಂದುವರೆಸಲಿ ಎಂಬುದು ನನ್ನ ಆಶಯ. ಇಲ್ಲಿರುವ ಹಿರಿಯರು ಯಾರೂ ದೊಡ್ಡ ಅಧಿಕಾರದ ಹುದ್ದೆಗಳಲ್ಲಿದ್ದ ಪ್ರಭಾವಶಾಲಿಗಳೇನಲ್ಲ. ಆದರೆ ತಾವು ನಡೆಸಿದ ಜೀವನಕ್ರಮದಿಂದ ನಮ್ಮಲ್ಲರಿಗೆ ಪ್ರೀತಿಪಾತ್ರರಾದವರು. ಸರಳ ಜೀವನ ನಡೆಸಿ ತಮ್ಮ ಪ್ರಭಾವವನ್ನು ನಮ್ಮ ತಲೆಮಾರಿನ ಮೇಲೆ ಉಳಿಸಿಹೋಗಿರುವಂಥವರು. ನಿಮ್ಮ ನೆನಪಿನ ಸಂಗ್ರಹದಲ್ಲೂ  ಅಜ್ಜಂಪುರದವರಾದ ಇಂಥ ಅನೇಕರು ಇರುತ್ತಾರೆ. ಅವರ ಬಗ್ಗೆ ಚಿತ್ರ ಸಹಿತ ನಿಮ್ಮ ನೆನಪುಗಳನ್ನು ದಾಖಲಿಸಲು ಇಲ್ಲೊಂದು ಅವಕಾಶವಿದೆ. ನಿಮಗೆ ಹಾಗೆ ಮಾಡಲು ಅವಕಾಶವಾಗದಿದ್ದಲ್ಲಿ, ಕೈಬರವಣಿಗೆಯಲ್ಲಿ ನಿಮ್ಮ ಬರಹ ಮತ್ತು ಚಿತ್ರದ ಪ್ರತಿಗಳನ್ನು ನನಗೆ ರವಾನಿಸಿ. ನಾನು ಅದನ್ನು ಪ್ರಕಟಿಸುವ ಕೆಲಸ ಮಾಡುತ್ತೇನೆ. ಶ್ರೀ ಬಿ. ಆರ್. ನರಸಿಂಹಮೂರ್ತಿ ಇವರು ಅಜ್ಜಂಪುರ ಸಮೀಪದ ಗ್ರಾಮ ಬಗ್ಗವಳ್ಳಿಯ ಶಾನುಭೋಗರಾಗಿದ್ದವರು. ಅಜ್ಜಂಪುರ ಬ್ರಾಹ್ಮಣ ಸಂಘದ ಸಂಸ್ಥಾಪಕ ...

06. ಶ್ರೀ ಶೆಟ್ರು ಸಿದ್ದಪ್ಪನವರು

ಇಮೇಜ್
ಇವರು ನಮ್ಮ ಹಿರಿಯರು ಮಾಲಿಕೆಯ ೫ ನೇ ಲೇಖನವಿದು. ನಿಮ್ಮ ಪ್ರತಿಕ್ರಿಯೆಗಳಿಗೆ ಸ್ವಾಗತ. ಇದೇ ಸೆಪ್ಟೆಂಬರ್ ನಲ್ಲಿ ಅಜ್ಜಂಪುರಕ್ಕೆ ಹೋಗುವ ಸಂದರ್ಭ ಒದಗಿತು. ಈ ಮೊದಲು ಬ್ಲಾಗ್‌ನಲ್ಲಿ ಸ್ಮರಿಸಬೇಕಿದ್ದ ಹೆಸರು ಶೆಟ್ರು ಸಿದ್ದಪ್ಪನವರದು. ಆದರೆ ಸಾಕಷ್ಟು ವಿವರಗಳು ದೊರೆಯದ ಕಾರಣ ಪ್ರಕಟಿಸಲು ಸಾಧ್ಯವಾಗಿರಲಿಲ್ಲ. ಇದೀಗ ಶೆಟ್ರು ಸಿದ್ದಪ್ಪನವರ ಮೊಮ್ಮಗ ಶ್ರೀ ಶಿವಶಂಕರ್ ರವರನ್ನು ಸಂದರ್ಶಿಸಿದೆ. ಇವರೊಂದಿಗೆ ವಿದ್ಯಾ ಇಲಾಖೆಯ ನಿವೃತ್ತ ಶಾಲಾ ಪರೀವೀಕ್ಷಕರಾದ ಶ್ರೀ ಶ್ರೀಕಂಠಯ್ಯನವರೂ, ಆಕಸ್ಮಿಕವಾಗಿ ಭೇಟಿಯಾದರು. ಇವರೀರ್ವರು ನೀಡಿದ ಮಾಹಿತಿ ನಿಮ್ಮ ಓದಿಗಾಗಿ ಇಲ್ಲಿದೆ.  - ಶಂಕರ ಅಜ್ಜಂಪುರ     ಶ್ರೀ ಶೆಟ್ರು ಸಿದ್ದಪ್ಪನವರು ಅವರು ಅಜಾತ ಶತ್ರು. ಅಜ್ಜಂಪುರದ ಸಮೀಪದ ಗ್ರಾಮ ಸೊಲ್ಲಾಪುರದಲ್ಲಿರುವ ಸಿದ್ಧರಾಮೇಶ್ವರನ ಪರಮಭಕ್ತರು. ಈ ಪ್ರದೇಶದ ಅತಿ ದೊಡ್ಡ ಕೃಷಿಕರು ಮತ್ತು ಕೃಷಿ ಉತ್ಪನ್ನಗಳ ವರ್ತಕರು. ಅವರ ನಿವಾಸ ಅಜ್ಜಂಪುರದ ರೇಲ್ವೇ ನಿಲ್ದಾಣದ ಎದುರಿಗೆ ಇದೆ. ಉತ್ತರ ಕರ್ನಾಟಕ ದೊಡ್ಡ ವಾಡೆಯನ್ನು ನೆನಪಿಸುವಂತಹ ವಾಸ್ತುಹೊಂದಿರುವ ಆ ಕಟ್ಟಡ ಅಜ್ಜಂಪುರದ ಪ್ರಮುಖ ಗುರುತು. ಕೃಷಿ, ವ್ಯಾಪಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಶೆಟ್ರು ಸಿದ್ದಪ್ಪನವರು ಎತ್ತರದ ಆಳು. ಗಿರಿಜಾ ಮೀಸೆ. ಕತ್ತು ಮುಚ್ಚುವ ಕಪ್ಪು ನೀಳ ಕೋಟು, ಕಚ್ಚೆಪಂಚೆ, ತಲೆಯಮೇಲೆ ದೊಡ್ಡದಾದ ಬಿಳಿಯ ಸರಿಗೆಯ ರುಮಾಲು, ಹಣೆಯ...

05. ಶ್ರೀ ಎ. ಸೀತಾರಾಮ ಭಟ್ಟರು

ಇಮೇಜ್
ಶ್ರೀ ಎ. ಸೀತಾರಾಮ ಭಟ್ಟರು " ಇವರು ನಮ್ಮ ಹಿರಿಯರು" ಮಾಲಿಕೆಯಲ್ಲಿನ ನಾಲ್ಕನೆಯ ಲೇಖನವಿದು. ೫೦-೬೦ರ ದಶಕದಲ್ಲಿ ಅಜ್ಜಂಪುರದ ಧಾರ್ಮಿಕ , ರಾಜಕೀಯ ಕ್ಷೇತ್ರಗಳಲ್ಲಿ ಕೆಲಸಮಾಡಿದ ಈ ಹಿರಿಯರು ತಮ್ಮ ಸರಳ ಜೀವನ ಶೈಲಿಯಿಂದ ಜನರ ಮನಸ್ಸನ್ನು ಗೆದ್ದವರು. ಇಂದಿನ ರಾಜಕೀಯಕ್ಕೆ ಹೋಲಿಸಿದರೆ , ಅವರದು ರಾಜಕೀಯವೇ ಅಲ್ಲ. ಅವರಿಗೆ ಅದೊಂದು ಜನಸಂಪರ್ಕದ ಮಾಧ್ಯಮವಾಗಿದ್ದಿತು. ಅವರ ವಿಶೇಷ ಶೈಲಿ , ಉಡುಪು ಮತ್ತು ರಾಜಕೀಯ ಚಟುವಟಿಕೆಗಳನ್ನು ಮಿತ್ರ ಮಂಜುನಾಥ ಅಜ್ಜಂಪುರ ಇಲ್ಲಿ ನೆನಪಿಸಿಕೊಂಡಿದ್ದಾರೆ. ಶ್ರೀ ಸೀತಾರಾಮಭಟ್ಟರ ಪರಿಚಯವಿರುವ ಜನರು ಇದನ್ನು ನಿಶ್ಚಿತವಾಗಿ ಆನಂದಿಸುವರು. ನಮ್ಮೂರಿನ "ಕುಲಪುರೋಹಿತ"ರೆಂಬ ಅಭಿದಾನವಿದ್ದ ಸೀತಾರಾಮ ಭಟ್ಟರು ನಿಜಕ್ಕೂ ವಿಶಿಷ್ಟ ವ್ಯಕ್ತಿತ್ವ ಉಳ್ಳವರು. ನಗುಮುಖ , ಒಂದಿಷ್ಟು ತುಂಟತನ , ಸರಳತೆ ಅವರ ವ್ಯಕ್ತಿತ್ವದ ಗುಣಲಕ್ಷಣಗಳಾಗಿದ್ದವು.   ನಿಜವಾಗಿಯೂ ಅವರೊಬ್ಬ Born Leader. ಇವತ್ತಿನ ಪರಿಭಾಷೆಯಲ್ಲಿ ಅವರೊಬ್ಬ Crowd Puller. 1950 ಮತ್ತು 1960 ರ ದಶಕಗಳಲ್ಲಿ , ಅವರು ಊರಿನ ಎಲ್ಲ ಸಾರ್ವಜನಿಕ ಕಾರ್ಯಕ್ರಮಗಳ ಅವಿಭಾಜ್ಯ ಅಂಗವಾಗಿದ್ದರು. ಅಜ್ಜಂಪುರದಲ್ಲಿ ಅತಿ ಹೆಚ್ಚು ಸಮುದಾಯಗಳಿರುವುದು ವಿಶೇಷವೇ. ಲಿಂಗಾಯತರು , ಕುರುಬರು ಹೆಚ್ಚು ಜನ ಇದ್ದರು ಎಂದರೂ ಬ್ರಾಹ್ಮಣ , ಆರ್ಯವೈಶ್ಯ , ಮರಾಠ , ಭಾವಸಾರ ಕ್ಷತ್ರಿಯ ,  ದೇವಾಂಗ , ವಿಶ್ವಕರ್ಮ , ಹೀಗೆ ಅನೇಕ ಜಾತಿಗಳ...

04. ಸ್ವಾತಂತ್ರ್ಯಯೋಧ, ಸಮಾಜ ಸುಧಾರಕ, ಶ್ರೀ ಸುಬ್ರಹ್ಮಣ್ಯ ಶೆಟ್ಟರು

ಇಮೇಜ್
ಅಜ್ಜಂಪುರದ ಇತಿಹಾಸದಲ್ಲಿ ಯಾರೂ ಮರೆಯಲಾರದ, ಮರೆಯಬಾರದ ಹೆಸರೆಂದರೆ ಶ್ರೀ ಸುಬ್ರಹ್ಮಣ್ಯ ಶೆಟ್ಟರದು.ಶ್ರೀಯುತ ಎಸ್. ಸುಬ್ರಹ್ಮಣ್ಯ ಶೆಟ್ಟರು ಹುಟ್ಟಿದ್ದು 2.2.1910. ಕಳೆದ ವರ್ಷವೇ ಅವರ ಶತಮಾನೋತ್ಸವ ವರ್ಷ ಆಚರಿಸಲ್ಪಟ್ಟಿತು. ಅವರು ನಿಧನರಾದುದು 12.06.1973 ರಂದು. ಕುಳ್ಳು ಆಕೃತಿ, ಸದಾ ಖಾದಿಧಾರಿ, ತಲೆಯ ಮೇಲೊಂದು ಗಾಂಧಿ ಟೋಪಿ. ಮರೆಯಲಾಗದ ಮಂದಹಾಸ. ಸದಾ ಚಟುವಟಿಕೆಯ, ಸಾಮಾಜಿಕ ಚಿಂತನೆಯ ಕಳಕಳಿಯುಳ್ಳ ಅವರಂಥ ಹಿರಿಯರು ಸರ್ವದಾ ಸ್ಮರಣೀಯರು. ವರ್ತಕರಾಗಿ, ಸಮಾಜ ಸುಧಾರಕರಾಗಿ, ನೈತಿಕ ಮೌಲ್ಯಗಳನ್ನು ಪ್ರತಿಪಾದಿಸುತ್ತಿದ್ದ ಅವರ ಜೀವನ ತೆರೆದಿಟ್ಟ ಪುಸ್ತಕದಂತಿತ್ತು. ಅಜ್ಜಂಪುರದ ಸಾರ್ವಜನಿಕ ಜೀವನದಲ್ಲಿ ತಾವು ನಂಬಿದ ಮೌಲ್ಯಗಳನ್ನು ಯಾವ ಅಬ್ಬರ-ಆವುಟಗಳಿಲ್ಲದೆ ಜನರಲ್ಲಿ ಬಿತ್ತಿಹೋದ ಅವರ ಶತಮಾನೋತ್ಸವದ ಸಂದರ್ಭದಲ್ಲಿ  ಶ್ರೀ ಸುಬ್ರಹ್ಮಣ್ಯ ಶೆಟ್ಟರನ್ನು ಗೆಳೆಯ ಮಂಜುನಾಥ ಅಜ್ಜಂಪುರ ನೆನಪಿಸಿಕೊಂಡಿದ್ದಾರೆ. ಅವರ ಬರಹ ಇಲ್ಲಿದೆ, ನಿಮಗಾಗಿ. ನಾವೆಲ್ಲ ಚಿಕ್ಕವರಿದ್ದಾಗ, ನಾವು ಯಾವ ಊರಿಗೇ ಹೋಗಲಿ, ಅಜ್ಜಂಪುರ ಎಂದೊಡನೆ, ಜನ ಶಿವಾನಂದಾಶ್ರಮವನ್ನು, ಕಲಾ ಸೇವಾ ಸಂಘವನ್ನು, ಸುಬ್ರಹ್ಮಣ್ಯ ಶೆಟ್ಟರನ್ನು ನೆನಪು ಮಾಡಿಕೊಳ್ಳುತ್ತಿದ್ದರು. ಶೆಟ್ಟರ ವ್ಯಕ್ತಿತ್ವವೇ ಅಂಥದು. ಊರಿನ ಜನಸಂಖ್ಯೆಯಲ್ಲಿ ಒಂದೆರಡು ಶತಾಂಶಗಳ ಪ್ರಾತಿನಿಧ್ಯವೂ ಇರದ, ಇಂದಿನ ಪರಿಭಾಷೆಯಲ್ಲಿ ಮೈನಾರಿಟಿ ಕಮ್ಯುನಿಟಿ ಎನ್ನಬಹುದಾದ ವ್ಯಾಪಾರಿ ಸಮುದಾಯದಲ್ಲಿ ಹ...

03. ಇವರು ನಮ್ಮ ಹಿರಿಯರು

ಇಮೇಜ್
ಆತ್ಮೀಯರೇ, ಈ ಮಾಲಿಕೆಯಲ್ಲಿ ಎರಡನೇ ಕಂತಿನ ಲೇಖನ ಇಲ್ಲಿದೆ. ಇದೇ ರೀತಿ ನಿಮಗೆ ಪರಿಚಯವಿರುವ ಅಜ್ಜಂಪುರದ ಹಿರಿಯರ ಬಗೆಗೆ ಬರೆದು ಕಳಿಸಲು ಕೋರುತ್ತೇನೆ. ಇದರೊಂದಿಗೆ ಚಿತ್ರಗಳೂ ಇರಲಿ.   ಶ್ರೀ ಆರ್. ಕೃಷ್ಣಭಟ್ಟರು ಆರ್ಕೆ ಎಂದೇ ಜನಪ್ರಿಯರಾಗಿದ್ದ ಶ್ರೀ ಆರ್. ಕೃಷ್ಣಭಟ್ಟರು ಅಜ್ಜಂಪುರದ ಪ್ರೌಢಶಾಲೆಯಲ್ಲಿ ಅಧ್ಯಾಪಕರಾಗಿದ್ದರು. ಅವರಿಗೆ ಕನ್ನಡದಂತೆಯೇ ಸಂಸ್ಕೃತದಲ್ಲೂ ಪ್ರೌಢಿಮೆಯಿತ್ತು. ಉತ್ತಮ ವೇದವಿದರಾಗಿದ್ದರು.  ತಲೆಯ ಮೇಲೆ ರುಮಾಲು, ಕಚ್ಚೆ ಪಂಚೆ, ಕೈಯಲ್ಲೊಂದು ಕೊಡೆ ಹಿಡಿದು ಗಂಭೀರವದನರಾಗಿ ಶಾಲೆಗೆ ಹೋಗುತ್ತಿದ್ದ ದೃಶ್ಯ ನೆನಪಿಗೆ ಬರುತ್ತದೆ. ತಲೆಗೆ ಪೇಟ ಧರಿಸುತ್ತಿದ್ದ ಸಂಪ್ರದಾಯಕ್ಕೆ ಬಹುಶಃ ಅಜ್ಜಂಪುರದ ಕೊನೆಯ ಪ್ರತಿನಿಧಿ ಎಂದುಕೊಳ್ಳುತ್ತೇನೆ. ದುರಾದೃಷ್ಟವೆಂದರೆ ಆಗೆಲ್ಲ ಕನ್ನಡಕ್ಕೆಂದೇ ಪರಿಣತರಾದವರು ಇರುತ್ತಿದ್ದರೂ, ಅವರ ಜ್ಞಾನವನ್ನು ಹಂಚಿಕೊಳ್ಳಲು , ಹರಡಲು ಬೇಕಿದ್ದ ವಾತಾವರಣ ಆಗ ಇರಲಿಲ್ಲ. ಈಗೆಲ್ಲ ಕನ್ನಡದ ಆಭಿಮಾನದ ಮಾತನಾಡುತ್ತೇವೆ. ಆದರೆ ಹಾಗೆ ಮಾಡದೆಯೂ ಕನ್ನಡದ ಬಗ್ಗೆ ಆಸಕ್ತಿ ಬೆಳೆಯುವಂತೆ ಮಾಡಿದವರಲ್ಲಿ ಆರ್ಕೆ ಕೂಡ ಒಬ್ಬರು.   * * * * * * * ಶ್ರೀ ಕೋಟೆ ಅನಂತರಾಯರು ಕೋಟೆ ಆಂಜನೇಯ ದೇವಾಲಯದ ಅರ್ಚಕರಾಗಿದ್ದ ಶ್ರೀ ಕೋಟೆ ಅನಂತರಾಯರ ಹೆಸರಿನಲ್ಲಿ ಕೋಟೆಯಿದೆಯಾದರೂ ಅವರು ಇದ್ದದ್ದು ಪೇಟೆಯಲ್ಲಿ. ಬ್ರಾಹ್ಮಣ್ಯ, ಪೂಜೆ, ಆಚರಣೆಗಳಲ್ಲಿ ತುಂಬ ಶ್ರದ್ಧಾ...

01. ಅಂತರಜಾಲದಲ್ಲಿ ಅಜ್ಜಂಪುರ

ಅಜ್ಜಂಪುರದ ಆತ್ಮೀಯ ಬಂಧುಗಳೇ ಇದು ನನ್ನ ಹೊಸ ಬ್ಲಾಗ್. ದಶಕಗಳ ಹಿಂದೆ ತರೀಕೆರೆ ಅಂಚೆವಾರ್ತೆಯ ಸಂಪಾದಕ ಶ್ರೀ ಅಂಚೆ ನಾಗಭೂಷಣರನ್ನು ಭೇಟಿಮಾಡಿದ್ದಾಗ ಅವರೊಂದು ವಿಷಯ ಪ್ರಸ್ತಾಪಿಸಿದ್ದರು. ಅದು ನಾನು ಅಜ್ಜಂಪುರದ ಕೋಟೆ ಆಂಜನೇಯ ದೇವಾಲಯದ ಪುನರ್ ಪ್ರತಿಷ್ಠಾಪನೆಯ ಸಂದರ್ಭ. ಆಗ ನಾನು ಈ ದೇವಾಲಯ ಬೆಳೆದು ಬಂದ ಹಾದಿಯನ್ನು ಚಿತ್ರ ಮತ್ತು ಮಾಹಿತಿಗಳ ಸಹಿತವಾದ ಒಂದು ಗಣಕ ಪ್ರಾತ್ಯಕ್ಷಿಕೆಯನ್ನು ನೀಡಿದ್ದೆ. ಆ ಯತ್ನವನ್ನು ಗುರುತಿಸಿ, ಬೆಂಬಲಿಸಿ ಅಂಚೆ ನಾಗಭೂಷಣರು ಹೀಗೆ ಹೇಳಿದ್ದರು: "ಒಂದು ಊರಿನ ಇತಿಹಾಸವನ್ನು ದಾಖಲಿಸುವಲ್ಲಿ ಇಂತಹ ಪ್ರಯತ್ನಗಳು ಸ್ವಾಗತಾರ್ಹ. ಇದೇ ರೀತಿ ನೀವು ಅಜ್ಜಂಪುರದಲ್ಲಿ ಬಾಳಿ ಬದುಕಿದ ಹಿರಿಯರ ಚಿತ್ರ-ಮಾಹಿತಿಗಳನ್ನು ಒಂದೆಡೆ ಸಂಗ್ರಹಿಸುವಂತಾದರೆ ಅದಕ್ಕೆ ಮಹತ್ವ ಬರುತ್ತದೆ. ಈ ಕೆಲಸವನ್ನು ಸ್ಥಳೀಕರು ಮಾಡಿದಲ್ಲಿ ಅದಕ್ಕೆ ಹೆಚ್ಚಿನ ವಜನು ಬರುತ್ತದೆ". ಇದಲ್ಲದೆ ನಾನು ಸಂಪಾದಿಸುತ್ತಿರುವ ನಮ್ಮ ಕುಲದೇವತೆ ಶ್ರೀ ಕಾಲಭೈರವನ ಬ್ಲಾಗ್ (Link : kalabhiaravablogspot.com ) ನಲ್ಲಿ ಅಜ್ಜಂಪುರದ ಹಿರಿಯರಾದ ಶ್ರೀ ಭೈರಾಭಟ್ಟರ ಭಾವಚಿತ್ರ ಸಹಿತ ಒಂದು ಲೇಖನವನ್ನು ಪ್ರಕಟಿಸಿದ್ದೆ. ಅದನ್ನು ನೋಡಿದ ನನ್ನ ಮಿತ್ರ ಅಜ್ಜಂಪುರ ಮಂಜುನಾಥ ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಾಗ ಅಜ್ಜಂಪುರದ ನೆನಪಿನ ಮೆರವಣಿಗೆಯಿದು ಎಂಬ ಪ್ರತಿಕ್ರಿಯೆಯನ್ನು ವ್ಯಕ್ತಪಡಿಸಿದರು. ಇದು ಕೂಡ ಅಜ್ಜಂಪುರವನ್ನು ಅಂತರಜಾಲದಲ್...