ಶ್ರೀ ಶಂಕರಾನಂದ ಸ್ವಾಮೀಜಿ

ಆತ್ಮೀಯರೇ,
ನಿಮ್ಮೆಲ್ಲರ ಸತತ ಪ್ರೋತ್ಸಾಹದಿಂದ ಈ ಬ್ಲಾಗ್ ಐದನೇ ವರ್ಷವನ್ನು ಪೂರೈಸಿದೆ. ಓದುಗರೆಲ್ಲರಿಗೆ ಧನ್ಯವಾದಗಳು. ತಿಂಗಳಿಗೆ ಒಂದು ಲೇಖನದಂತೆ ಮಾತ್ರ ಪ್ರಕಟಿಸಲು ಸಾಧ್ಯವಾಗಿದೆ. ಏಕೆಂದರೆ ಊರಿನ ಬಗ್ಗೆ, ಅಲ್ಲಿನ ಇತಿಹಾಸ, ವಿಶೇಷ ಘಟನೆಗಳ ಬಗ್ಗೆ ಆಸಕ್ತಿ ತಳೆದು ಮಾಹಿತಿಗಳನ್ನು ನೀಡುವಂತಾದರೆ ಇನ್ನಷ್ಟು ಮಾಹಿತಿ ಸಂಗ್ರಹವಾಗುತ್ತಿತ್ತು. ಕೆಲವರಾದರೂ ಈ ನಿಟ್ಟಿನಲ್ಲಿ ಸಹಕಾರ ನೀಡುತ್ತಿರುವರು. ಅವರೆಲ್ಲರಿಗೂ ಧನ್ಯವಾದಗಳು.
ಈಗ ಪ್ರಕಟವಾಗಿರುವ 60ನೆಯ ಲೇಖನವನ್ನು ಸ್ವಪ್ರೇರಣೆಯಿಂದ ರಚಿಸಿ, ಮಾರ್ಚ್ ತಿಂಗಳ ಈ ಸಂಚಿಕೆಯನ್ನು ವಿಶಿಷ್ಟವಾಗಿಸಿರುವವರು ಅಜ್ಜಂಪುರದ ಹಿರಿಯರಾದ ಶ್ರೀ ಸತ್ಯನಾರಾಯಣ ಶ್ರೇಷ್ಠಿಯವರು. ಅವರು ಅಜ್ಜಂಪುರದ ಬ್ಲಾಗ್ ನ ಮೇಲಣ ಅಭಿಮಾನದಿಂದ, ಅಜ್ಜಂಪುರದ ಶಿವಾನಂದಾಶ್ರಮದ ಶಂಕರಾನಂದ ಸ್ವಾಮೀಜಿಯವರನ್ನು ಕುರಿತಂತೆ ತಮ್ಮ ನೆನಪುಗಳನ್ನು ದಾಖಲಿಸಿದ್ದಾರೆ. ನನ್ನ ಈ ಯತ್ನವನ್ನು ಆರಂಭದಿಂದಲೂ ಬೆಂಬಲಿಸಿ, ಸ್ಫೂರ್ತಿಯುತ ನುಡಿಗಳನ್ನಾಡಿ ಹರಸಿರುವ, ಶ್ರೀ ಶ್ರೇಷ್ಠಿಯವರು ಬರೆದಿರುವ ಈ ಬರವಣಿಗೆಯನ್ನು, ಯಥಾವತ್ತಾಗಿ ಹಾಗೆಯೇ ಪ್ರಕಟಿಸಿರುವೆ. ಇದಕ್ಕೆ ಕಾರಣಗಳೆಂದರೆ ಅವರ ಮುದ್ದಾದ, ತಪ್ಪುಗಳಿಲ್ಲದ, ಮುದ್ರಣ ಸದೃಶವಾದ ಬರವಣಿಗೆ, ಭಾಷಾ ಶೈಲಿ ಮತ್ತು ಗೀತಾಕೈಂಕರ್ಯದ ಬಗೆಗಿನ ಅವರ ಶ್ರದ್ಧೆ. 94ರ ವಯಸ್ಸಿನಲ್ಲಿ ಅಪರಿಮಿತ ಜೀವನೋತ್ಸಾಹದಿಂದ ಮುನ್ನಡೆಯುತ್ತಿರುವ ಅವರು ನಮ್ಮೆಲ್ಲರಿಗೂ ಚೈತನ್ಯದಾಯಕರು, ಸ್ಫೂರ್ತಿದಾತರು. ಕರ್ತವ್ಯದ ಬಗೆಗಿನ ಅವರ ಕಾಳಜಿ ಮತ್ತು ಶ್ರದ್ಧೆಗಳು ಅನುಕರಣೀಯ. ಅವರಿಗೆ ಅಭಿನಂದನೆಗಳನ್ನು ತಿಳಿಸಬಯಸುವವರು 9141111708  ಈ ಸಂಖ್ಯೆಯಲ್ಲಿ ಸಂಪರ್ಕಿಸಬಹುದು.

- ಶಂಕರ ಅಜ್ಜಂಪುರ
ದೂರವಾಣಿ - 99866 72483




ನಿರೂಪಣೆ - ಶ್ರೀ ಸತ್ಯನಾರಾಯಣ ಶ್ರೇಷ್ಠಿ
ದೂರವಾಣಿ 9141111708 


ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

95. ಲಾವಣ್ಯ ಕವಿರತ್ನ ರಾಯಸಂ ಶ್ರೀ ಸಿ.ಬಿ.ಹಣ್ಣೆ ಸಂಜೀವಯ್ಯ

126. ಅಪೂರ್ವ ಕಥೆ ಕವನಗಳ ಅವಲೋಕನ

ಅಜ್ಜಂಪುರ ಸೀತಾರಾಂ