102. ಅಜ್ಜಂಪುರದಲ್ಲಿ ವಾಲೀಬಾಲ್ ಪಂದ್ಯ ವರದಿ ಮತ್ತು ಸಮಾಜ ಸೇವಕಿ ಬೂಬಮ್ಮ
64ನೇ ಕನ್ನಡ ರಾಜ್ಯೋತ್ಸವದ ಶುಭಾಶಯಗಳು
ಅಜ್ಜಂಪುರವು ಕಲೆಗೆ ಹೆಸರುವಾಸಿಯಾಗಿರುವಂತೆಯೇ, ಕ್ರೀಡಾ ಚಟುವಟಿಕೆಗಳಲ್ಲೂ ಮುಂದೆ ಇದ್ದ ದಿನಗಳಿದ್ದವು. ಅಂಥದೊಂದು ಸ್ಮರಣೆ ಇಲ್ಲಿದೆ. ಅಜ್ಜಂಪುರದ ಕಲಾಸೇವಾ ಸಂಘ ಶಾಲೆಯಲ್ಲಿ ಕನ್ನಡ ಉಪಾಧ್ಯಾಯರಾಗಿದ್ದ ಶ್ರೀ ಜಿ.ಟಿ. ಶ್ರೀಧರ ಶರ್ಮಾ ಅವರು ಅಜ್ಜಂಪುರದಲ್ಲಿ ಪತ್ರಿಕೋದ್ಯಮವನ್ನು ನೆಲೆಗೊಳಿಸಲು ನೆರವಾದವರು.
ಅವರ ಪತ್ನಿ ಶ್ರೀಮತಿ ರೋಹಿಣಿ ಶರ್ಮಾ ಇವರ ಲೇಖನಗಳು ಈಗಾಗಲೇ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಅಜ್ಜಂಪುರದಲ್ಲಿದ್ದ ಶವ ಸಂಸ್ಕಾರಕ್ಕೆ ನೆರವಾಗುತ್ತಿದ್ದ ಬೂಬಮ್ಮ ಇವರ ಬಗ್ಗೆ ಬರೆದಿರುವ ಲೇಖನವೂ ಇಲ್ಲಿದೆ.
ಇವರ ಪುತ್ರ ಶ್ರೀ ಆರ್ಯಮಿತ್ರ ಕೂಡ ಲೇಖಕರು. ಅಜ್ಜಂಪುರಕ್ಕೆ ಸಂಬಂಧಿಸಿದ ಅನೇಕ ಬರಹಗಳನ್ನು ತಮ್ಮ ಸಂಗ್ರಹದಿಂದ ನೀಡಿ ಸಹಕರಿಸುತ್ತಿದ್ದಾರೆ, ಶ್ರೀಧರ ಶರ್ಮರ ಪುತ್ರಿ ಆತ್ಮಾ ಕೂಡ ಪತ್ರಿಕೋದ್ಯಮದ ವಿದ್ಯಾರ್ಥಿಯಾಗಿದ್ದು, ಅವರ ಕೆಲ ಬರಹಗಳು ಮುಂದೆ ಮೂಡಿಬರಲಿವೆ.
ಕಳೆದ ದಿನಗಳ ನೆನಪೇ ಚೆಂದ ಎನ್ನುವಂತೆ ಇವನ್ನು ಮತ್ತೆ ಸ್ಮರಿಸಲೆಂದು ಶ್ರೀ ಆರ್ಯಮಿತ್ರ ನೀಡಿರುವ ಪ್ರಕಟಿತ ಲೇಖನಗಳ ಚಿತ್ರಗಳನ್ನು ಇಲ್ಲಿ ಪ್ರಕಟಿಸಲಾಗಿದೆ.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ