ಪೋಸ್ಟ್‌ಗಳು

ಇತಿಹಾಸದ ಪುಟ ಸೇರಿದ ಅಜ್ಜಂಪುರದ ಖಾದಿ ಗ್ರಾಮೋದ್ಯೋಗ ಭಂಡಾರ

ದೇಶದ ಎಲ್ಲ ಚಿಕ್ಕ ಹಳ್ಳಿ, ಪಟ್ಟಣ, ನಗರಗಳಂತೆ ಸ್ವಾತಂತ್ರ್ಯ ಸಂಗ್ರಾಮದ ವಿಷಯದಲ್ಲಿ ಅಜ್ಜಂಪುರದ ಮೇಲೆ ಕೂಡ ಅದರ ಪ್ರಭಾವವಿತ್ತು. ಹೀಗಾಗಿಯೇ ಆ ಚಳವಳಿಯಲ್ಲಿ ಅಜ್ಜಂಪುರದ ಅನೇಕರು ಭಾಗವಹಿಸಿದರು. ಶ್ರೀ ಸುಬ್ರಹ್ಮಣ್ಯ ಶೆಟ್ಚರು ಅಜ್ಜಂಪುರದ ಮಟ್ಟಿಗೆ ಆ ದಿನಗಳಲ್ಲಿ ಸ್ಥಳೀಯ ಗಾಂಧಿಯೇ ಆಗಿದ್ದರು ಎಂದರೆ ಅತಿಶಯೋಕ್ತಿಯಲ್ಲ. ಅವರ ಮಾತಿಗೆ ಆ ಮಟ್ಟಿನ ಮನ್ನಣೆಯಿತ್ತು. ಗಾಂಧೀಜಿಯವರ ಚಿಂತನೆಗಳಲ್ಲಿ ಸ್ವಾವಲಂಬನೆ, ಖಾದಿ, ಕೃಷಿಗೆ ಬೆಂಬಲ ಮುಂತಾದ ಅನೇಕ ಸಂಗತಿಗಳು ಸೇರಿದ್ದವಷ್ಟೇ. ಅದರಲ್ಲಿ ಖಾದಿ ತಯಾರಿಕೆ ಮತ್ತು ಅದರ ಬಳಕೆ ಬಗ್ಗೆ ಅಜ್ಜಂಪುರದಲ್ಲಿ ಸ್ವಾತಂತ್ರ್ಯ ಪೂರ್ವ ಮತ್ತು ಸ್ವಾತಂತ್ರ್ಯಾನಂತರ ಕೂಡ ಸಾಕಷ್ಟು ಕೆಲಸಗಳು ನಡೆದವು. ನಾನು ಶಿವಮೊಗ್ಗೆಯಲ್ಲಿ ನೆಲೆಸಿದ ನಂತರ ನಿಧಾನವಾಗಿ ನನ್ನ ಬಡಾವಣೆಯ ಜನರ ಪರಿಚಯವಾಗುತ್ತಾ ಬಂದಿತು. ಆ ಹಂತದಲ್ಲಿ ಶ್ರೀ ಹುಚ್ಚಪ್ಪ ಎನ್ನುವವರ ಪರಿಚಯವೂ ಆಯಿತು. ನನ್ನ ಪರಿಚಯ ಹೇಳಿಕೊಳ್ಳುವಾಗ ನಾನು ಅಜ್ಜಂಪುರದವನು ಎಂದು ಹೇಳಿದ್ದೇ ತಡ, ಅವರ ಪ್ರತಿಕ್ರಿಯೆಯಲ್ಲಿ ತುಂಬ ಉತ್ಸಾಹ ಮೂಡಿದ್ದು ಕಾಣಿಸಿತು. ಅವರು ಹೇಳಿದರು – “ ಸ್ವಾಮೀ, ನಾನು ಕೂಡ ಅಜ್ಜಂಪುರದಲ್ಲಿ ಖಾದಿ ಮಂಡಲಿಯಲ್ಲಿ ಕೆಲಸದಲ್ಲಿದ್ದವ. ಅಂದಿನ ದಿನಗಳನ್ನು ನೆನೆಸಿಕೊಳ್ಳುವುದೇ ಒಂದು ಸಂತಸ, ಏಕೆಂದರೆ, ಯಾವ ಕೈಗಾರಿಕೆಯೂ ಇರದಿದ್ದ ನಿಮ್ಮ ಊರಿನಲ್ಲಿ ನಮ್ಮ ಖಾದಿ ಸಂಸ್ಥೆಯೊಂದೇ ಹೇಳಿಕೊಳ್ಳಬಹುದಾಗಿದ್ದ ಒಂದು ಕೈಗಾರಿಕೆ. ಅದೀಗ ನಶಿಸಿ ಹ...

ಮಹಾರಾಜರ ಕಟ್ಟೆ !

ಇಮೇಜ್
  ಅಜ್ಜಂಪುರದ ಶೆಟ್ಟರ ಸಿದ್ಧಪ್ಪನವರ ಪ್ರೌಢಶಾಲೆ, ಕಾಲೇಜು ಆಗಿ ಪರಿವರ್ತನೆಯಾಗಿ ಅರ್ಧ ಶತಮಾನವೇ ಕಳೆದಿದೆ. ಈ ಭವ್ಯ ಕಟ್ಟಡವನ್ನು ಪ್ರವೇಶಿಸುತ್ತಿದ್ದಂತೆಯೇ ಪ್ರಾಂಗಣದಲ್ಲಿ  ಸಿಮೆಂಟಿನಿಂದ ರಚಿಸಿದ ಒಂದು ಕಟ್ಟೆ ಕಾಣುತ್ತದೆ. ಶಾಲೆಯ ಕಟ್ಟಡದ ಸುತ್ತಮುತ್ತ ಅಭಿವೃದ್ಧಿಗೆಂದು ಇದುವರೆಗೆ ಅನೇಕ ಕಾಮಗಾರಿಗಳು ನಡೆದಿವೆಯಾದರೂ, ಕಟ್ಟಡದ ಮುಂಭಾಗವನ್ನು ವಿರೂಪಗೊಳಿಸದೇ, ಅಲ್ಲಿರುವ ಕಟ್ಟೆಯನ್ನು ತೆಗೆಯದೇ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಈ ಕಟ್ಟೆಯೊಡನೆ ಶಾಲೆಗೊಂದು ಭಾವನಾತ್ಮಕ ಸಂಬಂಧವಿದೆ.  ಮಹಾರಾಜರ ಕಟ್ಟೆ ! ಅದೆಂದರೆ ಅಜ್ಜಂಪುರದ ಪುರಸಭೆಯು 1960ರಲ್ಲಿ ಕುಡಿಯುವ ನೀರು ಸರಬರಾಜಿನ ಉದ್ಘಾಟನೆಗೆಂದು ಅಂದಿನ ಮೈಸೂರು ಮಹಾರಾಜರಾಗಿದ್ದ ಶ್ರೀ ಜಯಚಾಮರಾಜೇಂದ್ರ ಒಡೆಯರ್ ಅವರನ್ನು ಆಹ್ವಾನಿಸಿತ್ತು. ಆ ಸಂದರ್ಭದಲ್ಲಿ ಮಹಾರಾಜರು ಉನ್ನತ ಸ್ಥಾನದಲ್ಲಿ ಕಂಗೊಳಿಸಬೇಕೆಂಬ ಉದ್ದೇಶದಿಂದ ಈ ಕಟ್ಟೆಯನ್ನು ನಿರ್ಮಿಸಲಾಯಿತು. ಮಹಾರಾಜರು ಅದರ ಮೇಲೆ ನಿಂತು ತಮ್ಮ ಭಾಷಣವನ್ನು ಮಾಡಿದರು. ಆ ಸವಿನೆನಪಿಗೆಂದು ಅದನ್ನು ಇಂದಿಗೂ ಹಾಗೆಯೇ ಉಳಿಸಿಕೊಳ್ಳಲಾಗಿದೆ. ಇದೇ ಸಂದರ್ಭದಲ್ಲಿ ಊರಿನ ಪ್ರಮುಖರು, ಗಣ್ಯರು ಮಹಾರಾಜರನ್ನು ಸ್ವಾಗತಿಸಿದ್ದರು. ಅವರೆಲ್ಲ ಅಂದಿನ ಸಾಂಪ್ರದಾಯಿಕ ಉಡುಗೆಯಲ್ಲಿ ಕಾಣಿಸಿಕೊಂಡಿರುವ ಅಪೂರ್ವ ಚಿತ್ರವನ್ನು ಅಜ್ಜಂಪುರದ ಹಿರಿಯರಾದ ಶ್ರೀ ಸತ್ಯನಾರಾಯಣ ಶೆಟ್ಟರು ಕಾಪಿಟ್ಟಿದ್ದಾರೆ.  ಇತ್ತೀ...

ಶಿಕ್ಷಕ - ಶಾಸಕ ಶ್ರೀ ಪಿ. ತಿಪ್ಪಯ್ಯ

ಇಮೇಜ್
ಅತ್ಮೀಯ ಓದುಗರೇ, ಅಜ್ಜಂಪುರದ ಇತ್ತೀಚಿನ ಯುವ ಸಾಧಕರನ್ನು ಕುರಿತು ಪರಿಚಯಿಸುವ ಆಶಯವಿದೆಯಾದರೂ, ಹಿರಿಯರ ಬಗ್ಗೆ ಬರೆಯುವುದು, ತಿಳಿಯಬೇಕಾದುದು ಇನ್ನೂ ಇದೆಯೆನ್ನುವುದು ಕೂಡ ಸಂತಸದ ಸಂಗತಿಯೇ ಸರಿ. ಹೀಗಾಗಿ, ಈ ಸಂಚಿಕೆಯಲ್ಲಿ ಅಜ್ಜಂಪುರದ ಸಭ್ಯ, ಸರಳ ರಾಜಕಾರಣಿ ಮತ್ತು ಶಿಕ್ಷಕರಾದ ಶ್ರೀ ಪಿ. ತಿಪ್ಪಯ್ಯನವರನ್ನು ಕುರಿತ ಲೇಖನವಿದೆ. ಇದನ್ನು ಯುವ ಮಿತ್ರ ಮಲ್ಲಿಕಾರ್ಜುನ ಅಜ್ಜಂಪುರ ಅವರು ತಿಪ್ಪಯ್ಯನವರ ಪುತ್ರ ಶ್ರೀ ಉಮಾಶಂಕರ್ ಅವರನ್ನು ಸಂಪರ್ಕಿಸಿ, ವಿವರಗಳನ್ನು ಸಂಗ್ರಹಿಸಿ ಇಲ್ಲಿ ನೀಡಿದ್ದಾರೆ. ಅವರ ಆಸಕ್ತಿ ಹೆಚ್ಚಿನದು. ಇದೇ ರೀತಿ ಓದುಗ ಬಳಗದಲ್ಲಿರುವ ಮಿತ್ರರು ತಮ್ಮ ಗಮನಕ್ಕೆ ಬರುವ ವಿಶೇಷ ಸಂಗತಿಗಳನ್ನು. ನೆನಪುಗಳನ್ನು ಹಂಚಿಕೊಳ್ಳಲು ಕೋರುತ್ತೇನೆ.  -ಶಂಕರ ಅಜ್ಜಂಪುರ ಶಿಕ್ಷಕ - ಶಾಸಕ ಶ್ರೀ ಪಿ. ತಿಪ್ಪಯ್ಯ ಇಂದು ಸಾಹಿತಿಗಳು ರಾಜಕಾರಣಕ್ಕೆ ಬರಬೇಕೇ ಬೇಡವೇ ಎಂಬ ಬಗ್ಗೆ ಸಾಕಷ್ಟು ಚರ್ಚೆ ನಡೆಯುತ್ತಿದೆ. ಸಾಹಿತಿಗಳು ರಾಜಕೀಯಕ್ಕೆ ಬಂದರೆ , ರಾಜಕಾರಣವು ಕೆಡುವುದಕ್ಕಿಂತ , ಸಾಹಿತಿಗಳು ಕೆಟ್ಟು ಹೋಗುತ್ತಾರೆ ಎಂಬ ಕಾಳಜಿ ವ್ಯಕ್ತವಾಗುತ್ತಿದೆ. ಹೀಗಾಗಿಯೇ ಅವರು ದೂರವಿದ್ದರೆ ಒಳಿತು ಎಂಬ ಭಾವ ಸಮಾಜದಲ್ಲಿ ನೆಲೆ ನಿಂತಿದೆ.   ಡಾ. ಸರ್ವಪಲ್ಲಿ ರಾಧಾಕೃಷ್ಣನ್ ರಾಷ್ಟ್ರಪತಿಯಾಗುವುದಕ್ಕಿಂತ ಮುಂಚೆ ಉಪನ್ಯಾಸಕ ರಾಗಿದ್ದವರು.   ಶಿಕ್ಷಣ ಕ್ಷೇತ್ರದಲ್ಲಿದ್ದ    ಅವರ...

ಪೂರ್ಣ ಬೆಳಗುವ ಮುನ್ನ ಆರಿತೇ ಜ್ಯೋತಿ !

ಇಮೇಜ್
ಆತ್ಮೀಯ ಓದುಗರೇ ,  "ಎಲ್ಲರಿಗೂ ಜಯ ನಾಮ ಸಂವತ್ಸರದ ಶುಭಾಶಯಗಳು" ಅಜ್ಜಂಪುರದ ಪುರಪ್ರಮುಖರಲ್ಲಿ ಓರ್ವರಾದ  ಶ್ರೀ ಸುಬ್ರಹ್ಮಣ್ಯ ಶೆಟ್ಟರ ಪುತ್ರ ಶ್ರೀ ರಾಜಗೋಪಾಲ ಗುಪ್ತ ಇತ್ತೀಚೆಗೆ ಎಂದರೆ   ದಿನಾಂಕ   19-12-2013 ರಂದು ತಮ್ಮ 66 ನೇ ವಯಸ್ಸಿನಲ್ಲಿ ನಿಧನರಾದರು. ಅವರು ಅಜ್ಜಂಪುರದ ಸಾಮಾಜಿಕ ವಲಯದಲ್ಲಿ   ತಮ್ಮ ತಂದೆಯವರ ಹೆಸರಿನ ಬಲಕ್ಕಿಂತ ಹೆಚ್ಚಾಗಿ , ತಮ್ಮ ಸೌಮ್ಯ ಸ್ವಭಾವ ಮತ್ತು ತೋರುತ್ತಿದ್ದ ಸಾಮಾಜಿಕ   ಕಾಳಜಿಗಳಿಂದಾಗಿ ಗಮನಾರ್ಹ ವ್ಯಕ್ತಿಯಾಗಿದ್ದರು. ಅವರನ್ನು ಸಮೀಪದಿಂದ ನೋಡಿಬಲ್ಲ , ಒಡನಾಡಿಯಾಗಿದ್ದ ಗೆಳೆಯ ಶ್ರೀ   ಅಜ್ಜಂಪುರ ಮಂಜುನಾಥ ಹಾಗೂ ಅಜ್ಜಂಪುರದ ಪವಿತ್ರ ಪ್ರಿಂಟರ್ಸ್ ಮಾಲಕ  ಮತ್ತು  ಪತ್ರಕರ್ತರಾದ ಶ್ರೀ ಎನ್. ವೆಂಕಟೇಶ್ ಇವರೀರ್ವರೂ ತಮ್ಮ ಪದಶ್ರದ್ಧಾಂಜಲಿಯನ್ನು ಈ ಲೇಖನಗಳಲ್ಲಿ ದಾಖಲಿಸಿದ್ದಾರೆ.   - ಶಂಕರ ಅಜ್ಜಂಪುರ ನಮ್ಮೆಲ್ಲರ ಪ್ರೀತಿಯ ಅಣ್ಣ ರಾಜಗೋಪಾಲ ಇನ್ನಿಲ್ಲ ,   ಎನ್ನುವುದನ್ನು ಜೀರ್ಣಿಸಿಕೊಳ್ಳುವುದು ಕಷ್ಟವಾಗುತ್ತದೆ. ಹಾಗೆ ನೋಡಿದರೆ ,   ಅವನ ಜೀವನವೇ ಒಂದು ಸವಾಲು. ತುಂಬ ಪ್ರತಿಭಾವಂತರಾದ -ಕ್ರಿಯಾಶೀಲರಾದ - ಚೈತನ್ಯಶೀಲರಾದ ,   ತಂದೆ-ತಾಯಿಯ ಏಕೈಕ ಪುತ್ರ ಎನ್ನುವುದು ಸಹ ಸವಾಲೇ. ಉದ್ಯಮಶೀಲತೆಯ - ಚಟುವಟಿಕೆಯ - ಕಲಾಪೋಷಕರಾದ - ರಾಜಕಾರಣಿಯೂ ಆದ ಸುಬ್ರಹ್ಮಣ್ಯ ಶೆಟ್ಟರ ...

ರಾಷ್ಟ್ರಪತಿ ಸ್ವರ್ಣಪದಕ ಪುರಸ್ಕೃತ - ಗೃಹ ರಕ್ಷಕ ದಳದ ಕಂಪೆನಿ ಕಮಾಂಡೆಂಟ್ ಹ. ಪುಟ್ಟಸ್ವಾಮಿ

ಇಮೇಜ್
ಅಜ್ಜಂಪುರದ ಸಾಧಕರ ಪರಿಚಯ ಈ ಬ್ಲಾಗ್ ನಲ್ಲಿ ಸತತವಾಗಿ ನಡೆಯುತ್ತಿದೆಯಷ್ಟೆ . ಅದಕ್ಕೆ ಇನ್ನೊಂದು ಗರಿಯಾಗಿ ರಾಷ್ಟ್ರಪತಿ ಸ್ವರ್ಣಪದಕ ಪುರಸ್ಕೃತ - ಗೃಹ ರಕ್ಷಕ ದಳದ ಕಂಪೆನಿ ಕಮಾಂಡೆಂಟ್ ಹ . ಪುಟ್ಟಸ್ವಾಮಿಯವರ ಸಾಧನೆ ಸ್ಮರಣಾರ್ಹ . ಹೀಗಾಗಿ ಅವರನ್ನು ಕುರಿತ ಪರಿಚಯ ಲೇಖನವನ್ನು ಆಸ್ಥೆಯಿಂದ ಸಿದ್ಧಪಡಿಸಿ ನನಗೆ ತಲುಪಿಸಿದವರು ಗೆಳೆಯ ಅಜ್ಜಂಪುರ ಮಲ್ಲಿಕಾರ್ಜುನ್ . ಅವರಂತೆಯೇ ಇತರರೂ ಕೂಡ ತಮ್ಮ ಸಂಪರ್ಕದಲ್ಲಿ ಬರುವ ಅಜ್ಜಂಪುರದ ಸಾಧಕರನ್ನು ಹೀಗೆಯೇ ಪರಿಚಯಿಸಲು ಈ ಬ್ಲಾಗ್ ಮುಕ್ತವಾಗಿದೆ . - ಶಂಕರ ಅಜ್ಜಂಪುರ ಅಜ್ಜಂಪುರವು ಸಾಂಸ್ಕೃತಿಕ , ಶೈಕ್ಷಣಿಕ , ಧಾರ್ಮಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ತನ್ನದೇ ಆದ ವಿಶಿಷ್ಟ ಛಾಪನ್ನು ಮೂಡಿಸಿ , ಕರ್ನಾಟಕದ ನಕ್ಷೆಯಲ್ಲಿ ಗುರುತಿಸಿಕೊಂಡಿದೆ . ಎಲ್ಲ ಊರುಗಳಂತೆ ಅಜ್ಜಂಪುರದಲ್ಲಿಯೂ ಗೃಹ ರಕ್ಷಕ ದಳ ಕಾರ್ಯನಿರ್ವಹಿಸಲು ಆರಂಭಿಸಿತು . ಈ ಸೇವೆಯ ಪರಿಚಯವಿರದ ಜನರೇ ಅಧಿಕವಾಗಿದ್ದ ಊರಿನಲ್ಲಿ , ಅದನ್ನು ತೀವ್ರವಾಗಿ ತೆಗೆದುಕೊಂಡು , ರಾಷ್ಟ್ರಪತಿಗಳ ಪದಕ ಪಡೆಯುವ ಮಟ್ಟಿಗಿನ ಸಾಧನೆಯನ್ನು ತೋರಿದವರು ಹ . ಪುಟ್ಟಸ್ವಾಮಿ . ಅಜ್ಜಂಪುರದ ಈ ಘಟಕವು ರಾಜ್ಯದಲ್ಲೇ ಶಿಸ್ತುಬದ್ಧ ಘಟಕವೆಂದು ಹೆಸರು ಪಡೆಯಲು ಶ್ರಮಿಸಿದ ಶಿಸ್ತಿನ ಸಿಪಾಯಿ ಹ . ಪುಟ್ಟಸ್ವಾಮಿಯವರ ಸೇವೆ ಮತ್ತು ...