ಪೋಸ್ಟ್‌ಗಳು

ಅಜ್ಜಂಪುರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ

ಇಮೇಜ್
ಆತ್ಮೀಯ ಓದುಗರೇ, ನಮ್ಮೂರಿನ ದೇವಾಲಯಗಳಿಗೆ ಜಾನಪದ ಕಥೆಗಳನ್ನು ಹೋಲುವಂಥ ಇಂತಹದೊಂದು ಇತಿಹಾಸವಿದೆಯೆನ್ನುವುದನ್ನು ತಿಳಿದದ್ದು ಇತ್ತೀಚೆಗೇ ಸರಿ. ಈ ಹಿಂದೆ ಪ್ರಕಟವಾದ ಅಜ್ಜಂಪುರದ ಬಸವಣ್ಣ ದೇವರ ಗುಡಿ ಸ್ಥಾಪಿತವಾದ ಬಗ್ಗೆ ಕೂಡ ಇಂಥದೇ ವಿವರಗಳಿದ್ದವು.   ಇವನ್ನು ಕೇಳಿತಿಳಿದ, ಅಂಥ ಸಂದರ್ಭಗಳಲ್ಲಿ ಹಾಜರಿದ್ದ ಕೆಲವರಾದರೂ ಊರಿನಲ್ಲಿರಬಹುದು. ಅವೆಲ್ಲ ಇತಿಹಾಸವಾಗುವುದು ಸಾಕಷ್ಟು ಕಾಲ ಕಳೆದ ನಂತರವೇ ಸರಿಯಷ್ಟೆ. ಅಜ್ಜಂಪುರದ ಬೀರಲಿಂಗೇಶ್ವರನಿಗೆ ಸಂಬಂಧಿಸಿದಂಥ ಅಂಥದೊಂದು ರೋಚಕ ಪ್ರಸಂಗವನ್ನು ಗೆಳೆಯ ಅಪೂರ್ವ ಇಲ್ಲಿ ನಮೂದಿಸಿದ್ದಾರೆ.  ಅವರು ಸಾಕಷ್ಟು ಜನರನ್ನು ಸಂದರ್ಶಿಸಿ, ಇದಕ್ಕೊಂದು ಅಧಿಕೃತತೆಯಿದೆಯೆಂದು ಮನವರಿಕೆಯಾದ ನಂತರವೇ, ಪರಿಷ್ಕರಿಸಿ ರಚಿಸಿದ್ದಾರೆ. ಅವರ ಬದ್ಧತೆಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ. ಅಂತೆಯೇ ಮಾಹಿತಿ ಸಹಕಾರ, ಹಾಗೂ  ಚಿತ್ರಗಳನ್ನು ಒದಗಿಸಿದ ಅಜ್ಜಂಪುರದ   ಶ್ರೀ ಎನ್. ರೇವಣ್ಣ,  ಶ್ರೀ ವೆಂಕಟರಾಯಪ್ಪ, ಮತ್ತು ಶ್ರೀ ರಮೇಶ್ ಇವರೆಲ್ಲರಿಗೂ ಧನ್ಯವಾದಗಳು.  - ಶಂಕರ ಅಜ್ಜಂಪುರ  ದೂರವಾಣಿ : 99866 72483 -------------------------------------------------------------------------------------------------------------------------------- CdÓA¥ÀÄgÀzÀ ²æÃ ©ÃgÀ°AUÉñÀégÀ zÉêÀ¸ÁÜ£À ±ÀvÀªÀiÁ£ÀzÀ »A...

ಹೀಗೊಂದು ಕದನದ ಕಥೆ

ಇಮೇಜ್
ಓದುಗರೆಲ್ಲರಿಗೂ ನೂತನ  ವರ್ಷದ ಶುಭಾಶಯಗಳು   ಶ್ರೀ ಎಮ್. ಚಂದ್ರಪ್ಪ       ಶ್ರೀ ಚಂದ್ರಪ್ಪ ಮಾಸ್ತರರು ಅಜ್ಜಂಪುರದವರು. ಮಾಧ್ಯಮಿಕ ಶಾಲೆಯ ಅಧ್ಯಾಪಕರಾಗಿ ನಿವೃತ್ತರಾಗಿರುವ ಅವರು ಕಲೆ, ಸಾಹಿತ್ಯ, ನಾಟಕ, ಇತಿಹಾಸಗಳಲ್ಲಿ ಅಭಿರುಚಿಯುಳ್ಳವರು. ಅವರೀಗ ಕೊಡಗಿನ ಕುಶಾಲನಗರದಲ್ಲಿ ವಿಶ್ರಾಂತ ಜೀವನ ನಡೆಸುತ್ತಿದ್ದು, ಇಂದಿಗೂ ಬರವಣಿಗೆ, ಸಾಹಿತ್ಯದ ಅಧ್ಯಯನಗಳನ್ನು ಜೀವಂತವಾಗಿಟ್ಟುಕೊಂಡಿದ್ದಾರೆ. ಯೌವನದಲ್ಲಿ  ತುಂಬ ಸ್ಫುರದ್ರೂಪಿಯಾಗಿ, ಬಟ್ಟೆ-ಬರೆಗಳ ಬಗ್ಗೆ ವಿಶೇಷ ಆಸ್ಥೆ ಹೊಂದಿದ್ದ ಈ ಮಾಸ್ತರರು ಇಂದಿಗೂ ಅದೇ ಚೈತನ್ಯ, ಉತ್ಸಾಹಗಳಿಂದ ಇರುವರೆನ್ನುವುದು ಈ ಲೇಖನದೊಂದಿಗೆ ತಲುಪಿದ ಅವರ ಚಿತ್ರ ನೋಡಿದಾಗ ನನಗೆ ಅನ್ನಿಸಿತು.      ಅಜ್ಜಂಪುರ-ತರೀಕೆರೆಗಳ  ನಡುವೆ ಕ್ಷುಲ್ಲಕ ಕಾರಣಕ್ಕಾಗಿ ಆರಂಭವಾಗಿದ್ದ ಕದನದ ನೆನಪುಗಳು ನನ್ನ ವಯಸ್ಸಿನ ಅಜ್ಜಂಪುರದ ಗೆಳೆಯರ ಮನದಲ್ಲಿ ಅಸ್ಪಷ್ಟವಾಗಿಯಾದರೂ ಉಳಿದಿರುತ್ತದೆಯೆಂದು ಭಾವಿಸುತ್ತೇನೆ. ಅಂಥದೊಂದು ಘಟನೆಯನ್ನು ಹತ್ತಿರದಿಂದ ನೋಡಿದ್ದ ಮಾಸ್ತರರು ತಮ್ಮ ನೆನಪಿನ ಖಜಾನೆಯಿಂದ ಹೆಕ್ಕಿ ತೆಗೆದು ಇಲ್ಲಿ ನೀಡಿದ್ದಾರೆ. ಇಂದು ಗುಂಪು ಘರ್ಷಣೆಯೆಂದು ಸಾಮಾನ್ಯೀಕರಿಸಬಹುದಾದ ಆ ಘಟನೆಗೆ "ಯುದ್ಧ"ವೆಂಬ ಪದ ಚಾಲ್ತಿಯಲ್ಲಿದ್ದುದಷ್ಟೇ ಅಲ್ಲ, ಯುದ್ಧದ ರೋಷಾವೇಶ, ದ್ವೇಷ, ಆತಂಕಗಳನ್ನು ನಮ್ಮ ೧೨-೧೩ರ ವಯೋಮಾನದಲ್ಲಿ ಅನುಭವಿಸಿದ್ದ...

ಅಮೃತಮಹಲ್ ಕಾವಲು ಉಳಿಸಿ - ಅವಿರತ ಹೋರಾಟದ ಕ್ರೋಢೀಕೃತ ವರದಿ - ಭಾಗ 2

ಇಮೇಜ್
ಸಚಿವ ಟಿ . ಬಿ. ಜಯಚಂದ್ರರಿಂದ ಪರಿಸ್ಥಿತಿಯ ಪರಿಶೀಲನೆ   ಈ ತಳಿ ಅಭಿವೃದ್ಧಿ ಕೇಂದ್ರಕ್ಕೆ ಅತಿ ಜರೂರಾಗಿ ಬೇಕಿರುವ ಹೆಚ್ಚುವರಿ ಸಿಬ್ಬಂದಿ, ವಾಹನಗಳು, ಪಶು ಆಸ್ಪತ್ರೆಗಳ ಆರಂಭ, ಮೇವು ಬೆಳೆಯಲು ವ್ಯವಸ್ಥೆ, ಒತ್ತುವರಿಯಾಗಿರುವ ಜಮೀನುಗಳನ್ನು ಬಿಡಿಸಿಕೊಳ್ಳುವುದು, ವಸತಿ ಗೃಹಗಳ ಪುನರ್ ನಿರ್ಮಾಣ, ಭ್ರಷ್ಟ ಕಾವಲುಗಾರ ಸಿಬ್ಬಂದಿಯ ಸುಧಾರಣೆ, ಘನೀಕೃತ ವೀರ್ಯ ಬ್ಯಾಂಕ್ ಸ್ಥಾಪನೆ ಮುಂತಾದ ಹಲವಾರು ಮುಖ್ಯ ಸುಧಾರಣೆಗಳ ಬಗ್ಗೆ ಅವರು ಪ್ರಸ್ತಾಪಿಸಿದರು. ಇದಕ್ಕೆ ಸಾರ್ವಜನಿಕರ, ಸಿಬ್ಬಂದಿಯ ಬೆಂಬಲವನ್ನೂ ಕೋರಿದರು. ಇದೆಲ್ಲವೂ ಕಾರ್ಯಗತವಾಗುವವರೆಗೆ ತಾವು ಕಡೂರಿನಲ್ಲಿ ವಾಸಿಸುತ್ತ ಕಾರ್ಯಾಚರಣೆ ನಡೆಸುವುದಾಗಿಯೂ ತಿಳಿಸಿದರು. ಇದೇ ಹಂತದಲ್ಲಿ ನಿವೃತ್ತ ನಿರ್ದೇಶಕರಾದ ಡಾ. ಟಿ.ಎಸ್. ಕೃಷ್ಣಮೂರ್ತಿಯವರನ್ನು ಸಂಪರ್ಕಿಸಿ, ಅವರ ಅನುಭವದ ಬೆಳಕಿನಲ್ಲಿ ಕೈಗೊಳ್ಳಬಹುದಾದ ಸುಧಾರಣೆಗಳ ಬಗ್ಗೆ ಚರ್ಚಿಸಿದರು. ಅದರಂತೆ ಡಾ. ಕೃಷ್ಣಮೂರ್ತಿಯವರೂ ಸೂಕ್ತವಾಗಿ ಸ್ಪಂದಿಸಿ ಅಗತ್ಯ ಸಲಹೆಗಳನ್ನು ನೀಡಿದರು.  ಇದೆಲ್ಲ ಆಗಿ ಒಂದು ತಿಂಗಳೂ ಸಂದಿರಲಿಲ್ಲ. ಡಿಸೆಂಬರ್ ವೇಳೆಗೆ, ಹೊಸದಾಗಿ ನಿಯುಕ್ತರಾಗಿದ್ದ ಡಾ. ರಾಮಚಂದ್ರರ ಕಾರ್ಯವೈಖರಿ ಬಯಲಿಗೆ ಬಂದಿತು. ಊದುವುದನ್ನು ಬಿಟ್ಟು ಬಡಿಯುವುದನ್ನು ತೆಗೆದುಕೊಂಡಂತಾಯಿತು ಸಂಸ್ಥೆಯ ಪರಿ. ಹಿಂದಿದ್ದ ಡಾ. ಸುರೇಶ್, ಅಜ್ಜಂಪುರದಲ್ಲಿಯಾದರೂ ಇರುತ್ತಿದ್ದರು. ಡಾ. ರಾಮಚಂದ್ರ ಕಡೂರಿನಿಂದ ಓಡಾಡಿಕೊ...

ಅಮೃತಮಹಲ್ ಕಾವಲು ಉಳಿಸಿ -ಅವಿರತ ಹೋರಾಟದ ಕ್ರೋಢೀಕೃತ ವರದಿ ಸಂಗ್ರಹ - ಭಾಗ ೧

ಇಮೇಜ್
ಅಮೃತಮಹಲ್  ತಳಿ  ಸಂವರ್ಧನಾ ಕೇಂದ್ರ, ಅಜ್ಜಂಪುರ ಎಲ್ಲರಿಗೂ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು  ಈ ಲೇಖನ ಸರಣಿ ಮೂರು ಸಂಚಿಕೆಗಳಲ್ಲಿದೆ. ಅಜ್ಜಂಪುರದಲ್ಲಿರುವ ಯುವ ಪತ್ರಕರ್ತ ಶ್ರೀ ಎನ್. ವೆಂಕಟೇಶ ಹಾಗೂ ಅಮೃತಮಹಲ್ ಕಾವಲು ಉಳಿಸಿ ಹೋರಾಟ ಸಮಿತಿಯವರ ಅವಿರತ ಶ್ರಮ ಮತ್ತು ಹೋರಾಟದ ಫಲವಾಗಿ ಅಜ್ಜಂಪುರದ ಅಮೃತಮಹಲ್ ಪಶು ಸಂವರ್ಧನಾ ಕ್ಷೇತ್ರದ ಅಸ್ತಿತ್ವ ನಾಶವಾಗದಂಥ ನೆಲೆ ಕಂಡಿದೆ. ಡಾ. ಟಿ.ಎಸ್. ಕೃಷ್ಣಮೂರ್ತಿಯವರ ಕಳಕಳಿಯುಕ್ತ ಸಲಹೆ ತಮ್ಮ  ಸಗಣಿಯ ರಾಶಿಯಲ್ಲೇ ಮಲಗಿರುವ ಗೋ-ಕುಲ ಈ ಸಂಸ್ಥೆಯನ್ನು ಅಷ್ಟುದ್ದ ಹೆಸರು ಹಿಡಿದು ಯಾರೂ ಕರೆಯುವುದಿಲ್ಲ, ಬದಲಾಗಿ ಫಾರಂ ಎನ್ನುವುದೇ ಹೆಚ್ಚು ಬಳಕೆಯಲ್ಲಿದೆ. ಫಾರಂನ ಬಗ್ಗೆ ನನಗೆ ಮೊದಲಿನಿಂದಲೂ ಕುತೂಹಲ ಮತ್ತು ಪ್ರೀತಿ. ಏಕೆಂದರೆ ಬಾಲ್ಯದಲ್ಲಿ ಅಲ್ಲಿನ ಅಮೃತಮಹಲ್ ತಳಿಯ ಹಸುಗಳ ಹಾಲನ್ನು ಕುಡಿದೇ ಬೆಳೆದವರು ನಾವೆಲ್ಲ. ಅದರ ಉತ್ತುಂಗ ಸ್ಥಿತಿಯಿದ್ದುದು 60-70ರ ದಶಕಗಳಲ್ಲಿ. ಆಗ ಈ ಕೇಂದ್ರದ ವ್ಯವಸ್ಥಾಪಕರಾಗಿದ್ದ ಶ್ರೀ ಟಿ. ಎಸ್. ಕೃಷ್ಣಮೂರ್ತಿಯವರು ಅದನ್ನು ವ್ಯವಸ್ಥಿತ ರೂಪದಲ್ಲಿಟ್ಟಿದ್ದರು. ಮೊಲ ಸಾಕಾಣಿಕೆಯಂಥ ಹೊಸ ಆಯಾಮವನ್ನು ಅಜ್ಜಂಪುರಕ್ಕೆ ಪರಿಚಯಿಸಿದರು. ಸರಕಾರದಿಂದ ದೊರೆಯುತ್ತಿದ್ದ ಅನುದಾನದಲ್ಲಿ ತಮ್ಮಿಂದ ಸಾಧ್ಯವಿದ್ದುದನ್ನೆಲ್ಲ ಪ್ರಾಮಾಣಿಕವಾಗಿ ಮಾಡಿದರು. ತಮ್ಮ ವೃತ್ತಿ ಮತ್ತು ಸಂಸ್ಥೆಯ ಬಗ್ಗೆ ಅವರಿಗೆ ಭಾವನಾತ್ಮಕ ಸಂಬಂಧಗ...

ಅಜ್ಜಂಪುರದ ಬಸವಣ್ಣ ದೇವರ ಗುಡಿ

ಇಮೇಜ್
ಎಲ್ಲರಿಗೂ 2016 - ಹೊಸ ವರ್ಷದ ಶುಭಾಶಯಗಳು  ಈ ಲೇಖನದ ಹೊಳಹು ಮೂಡಿದ್ದು ಅಜ್ಜಂಪುರದ ಹಿರಿಯ ಪತ್ರಕರ್ತರಾದ ಶ್ರೀ ಜಿ.ಬಿ. ಮಲ್ಲಿಕಾರ್ಜುನ ಸ್ವಾಮಿಯವರಿಂದ. ಒಮ್ಮೆ ಅವರೊಂದಿಗೆ ಅಜ್ಜಂಪುರದಲ್ಲಿರುವ ದೇವಾಲಯಗಳ ಬಗ್ಗೆ ಮಾತನಾಡುತ್ತಿದ್ದಾಗ, ಅವರು ಈಗ ಅಜ್ಜಂಪುರದ ಪೇಟೆಬೀದಿಯಲ್ಲಿ ನೆಲೆಗೊಂಡಿರುವ ಬಸವಣ್ಣನ ದೇವಾಲಯವು ಹಿಂದೆ ಕೋಟೆ ಪ್ರದೇಶದಲ್ಲಿತ್ತು ಎಂಬ ಅಪರೂಪದ ಸಂಗತಿಯನ್ನು ಹೊರಗೆಡಹಿದ್ದರು. ಬಹಳ ಕಾಲ ಅದರ ವಿವರಗಳು ದೊರೆಯಲಿಲ್ಲವಾಗಿ ಹಾಗೇ ನೆನೆಗುದಿಯಲ್ಲಿತ್ತು. ನನ್ನ ಮಿತ್ರ ಅಪೂರ್ವ (ಅಪ್ಪಾಜಿ)ಯನ್ನು ಈ ಬಗ್ಗೆ ಸಂಪರ್ಕಿಸಿದಾಗ, ಅವರು ಆಸ್ಥೆತಳೆದು, ಈ ದೇವಾಲಯದ ಚಿತ್ರ ಮತ್ತು ಲೇಖನದ ವಿವರಗಳನ್ನು ಕಳಿಸಿದರು. ನಾನು ಪದೇ ಪದೇ ವಿನಂತಿಸುತ್ತಿರುವಂತೆ, ಊರಿನಲ್ಲಿರುವವರು ಅಪೂರ್ವರಂತೆಯೇ ಆಸಕ್ತಿ ತಳೆದು ಚಿತ್ರ-ಮಾಹಿತಿಗಳನ್ನು ಕಳಿಸುವಂತಾದರೆ, ಈ ಬ್ಲಾಗ್ ನ್ನು ಅಜ್ಜಂಪುರದ ಬಗ್ಗೆ ಮಾಹಿತಿ ಕಣಜವನ್ನಾಗಿಸಬಹುದು. ಹಾಗೆ ಆದೀತೆಂದು ನನ್ನ ಆಶಯ. ಬ್ಲಾಗ್ ಆರಂಭವಾದಂದಿನಿಂದ ಬೆಂಬಲಿಸುತ್ತಿರುವ ಅಜ್ಜಂಪುರ ಮಂಜನಾಥ, ಮಲ್ಲಿಕಾರ್ಜನ ಅಜ್ಜಂಪುರ, ಬಿ.ಎನ್. ಮಾಧವರಾವ್ ಇವರ ಕೊಡುಗೆಯನ್ನೂ ಕೃತಜ್ಞತೆಯಿಂದ ಸ್ಮರಿಸುತ್ತೇನೆ. ರುದ್ರದೇವರು ಮತ್ತು ವೀರಭದ್ರದೇವರು ದಕ್ಷಪ್ರಜಾಪತಿಯ ಯಜ್ಞಕಾಲದಲ್ಲಿ ಅವತರಣಗೊಂಡ ಶಿವನ ಉಗ್ರರೂಪವೆನ್ನುವುದು ಪೌರಾಣಿಕ ಐತಿಹ್ಯ. ಈ ಕಥಾನಕವನ್ನು ಒಳಗೊಂಡಿರುವ ಜಾನಪದ ಕಲೆ ವೀರಗಾಸೆ ನಮ್ಮೂರ ವಿಶೇಷಗಳಲ್ಲಿ...

ಅಜ್ಜಂಪುರ ಜಿ ಸೂರಿ

ಇಮೇಜ್
ನಾನು ಈ ಬ್ಲಾಗ್ ನ್ನು ಆರಂಭಿಸಿದಾಗಿನಿಂದ ಹಲವರು ಅಜ್ಜಂಪುರ ಸೂರಿಯವರ ಬಗ್ಗೆ ನೀವೇಕೆ ಇನ್ನೂ ಲೇಖನ ಪ್ರಕಟಿಸಿಲ್ಲ ಎಂದು ಅನೇಕರು  ನನ್ನನ್ನು ಕೇಳುತ್ತಿದ್ದರು. ನಾನು ಅಜ್ಜಂಪುರದಲ್ಲಿ ಇದ್ದ ಸಮಯದಲ್ಲಿ ಅವರ ಅನುವಾದಿತ ಕಥೆ-ಕಾದಂಬರಿಗಳ ಬಗ್ಗೆ ಕೇಳುತ್ತಿದ್ದೆನಾದರೂ,  ಅವರನ್ನು ಭೇಟಿಮಾಡಿ ಮಾತನಾಡುವಷ್ಟು ಸಂಪರ್ಕವಿರಲಿಲ್ಲ. ನಮ್ಮೂರಿನ ಹೆಸರನ್ನು ತಮ್ಮ ಸಾಹಿತ್ಯ ಚಟುವಟಿಕೆಗಳಿಂದ ಜನರ ಮನಸ್ಸಿನಲ್ಲಿ ಮೂಡಿಸಿದ ಸೂರಿಯವರ ಬಗ್ಗೆ ಬರೆಯಬೇಕೆಂಬುದು  ಅನೇಕ ವರ್ಷಗಳ ಆಶಯ. ಮುಂದೆ, ಮಿತ್ರ ಮಲ್ಲಿಕಾರ್ಜುನರು, ಸೂರಿಯವರ ಪುತ್ರನನ್ನು ಸಂಪರ್ಕಿಸಿ ಮಾಹಿತಿ ಕೊಡುವುದಾಗಿಯೂ ತಿಳಿಸಿದ್ದರು. ಕಾರಣಾಂತರಗಳಿಂದ ಅದು ಸಾಧ್ಯವಾಗಲಿಲ್ಲ. ಅವರ ಬಗ್ಗೆ ಅಂತರ್ಜಾಲದಲ್ಲಿ ಹುಡುಕುತ್ತಿದ್ದಾಗ ದೊರೆತ ಸವಿವರ-ಸಚಿತ್ರ ಮಾಹಿತಿಗಿಂತ ಹೆಚ್ಚಿನದೇನೂ ಬೇಕಿರಲಿಲ್ಲ. ಹೀಗಾಗಿ ಕಣಜದಲ್ಲಿ ದೊರೆತ ಈ ಲೇಖನವನ್ನು ಕೃತಜ್ಞತಾಪೂರ್ವಕವಾಗಿ ಇಲ್ಲಿ ಪ್ರಕಟಿಸಿರುವೆ.  - ಶಂಕರ ಅಜ್ಜಂಪುರ  ಕವಿ , ವಚನಕಾರ , ಕಾದಂಬರಿಕಾರ , ಅನುವಾದಕ ಎಲ್ಲಕ್ಕಿಂತ ಹೆಚ್ಚಾಗಿ ಸಹೃದಯ ಸಾಹಿತಿ ಎನಿಸಿಕೊಂಡಿದ್ದ ಜಿ. ಸೂರ್ಯನಾರಾಯಣರವರು ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನ ಅಜ್ಜಂಪುರದಲ್ಲಿ 1939 ರ ಏಪ್ರಿಲ್‌ 17 ರಂದು. ತಂದೆ   ಗೋವಿಂದಪ್ಪನವರು ಮತ್ತು ತಾಯಿ ಪಾರ್ವತಮ್ಮನವರು. ತಂದೆಯವರದು ಮೂಲತಃ ಬಳೆಮಾ...