ಪೋಸ್ಟ್‌ಗಳು

ಅಜ್ಜಂಪುರ - ಪಟ್ಟಣದಿಂದ ಗ್ರಾಮವಾದ ಪರಿ !

ಇಮೇಜ್
ಆತ್ಮೀಯರೇ, ಬೆಳವಣಿಗೆಯೆನ್ನುವುದು ಯಾವಾಗಲೂ ಊರ್ಧ್ವಮುಖವಾಗಿದ್ದು, ಅವನತಿಯೆನ್ನುವುದ ಕೆಳಮುಖವೆಂದು ವಾಡಿಕೆಯಲ್ಲಿದ್ದರೆ, ಅಜ್ಜಂಪುರದ ಪುರಸಭೆಯ ಪರಿಸ್ಥಿತಿಯನ್ನು ಹೀಗೆ ವಿವೇಚಿಸಲಾಗದಂಥ ವಿಚಿತ್ರ ಸಂದರ್ಭವಿದೆ. ಇದಕ್ಕೆ ಉದಾಹರಣೆಯಾಗಿ ಈ ಸಂಚಿಕೆಯಲ್ಲಿ ಅಜ್ಜಂಪುರದ ಪುರಸಭೆಯು ಗ್ರಾಮಪಂಚಾಯಿತಿಯಾಗಿ ಪರಿವರ್ತಿತವಾದ ವಿಚಿತ್ರ ಆದರೂ ಸತ್ಯವಾದ ಸಂಗತಿಯ ಬಗ್ಗೆ ಮಿತ್ರ ಜಿ.ಬಿ. ಅಪ್ಪಾಜಿ (ಅಪೂರ್ವ) ಇವರು ಬರೆದ ಲೇಖನವಿದೆ. ಇಂಥ ಪರಿಸ್ಥಿತಿಗೆ ಬದಲಾದ ಸರಕಾರದ ನೀತಿಯೇ ಕಾರಣವೆನ್ನಬಹುದಾದರೂ, ಅದು ಪ್ರಗತಿಗೆ ಮಾರಕವೆನ್ನುವಂತಾದರೆ ಒಪ್ಪುವುದಾದರೂ ಹೇಗೆ. ಇದನ್ನು ವಿರೋಧಿಸುವ ಇಚ್ಛಾಶಕ್ತಿ, ಕ್ರಿಯಾಶಕ್ತಿಗಳು ಇನ್ನಾದರೂ ಮೂಡಿಬರಲೆನ್ನುವ ಆಶಯ ಇಲ್ಲಿದೆ. - ಶಂಕರ ಅಜ್ಜಂಪುರ  ---------------------------------------------------------------------------------------------------------------------------------------------------------------------------------------------------------------------------------------------------- ಅಜ್ಜಂಪುರ ಪುರಸಭೆಯು ಪೌರಸಭಾ ಆಡಳಿತ ವ್ಯವಸ್ಥೆಯಿಂದ ಗ್ರಾಮ ಪಂಚಾಯಿತಿಯಾಗಿ ಮಾರ್ಪಾಟು ಹೊಂದಿದ್ದು ವಿಚಿತ್ರವೇ ಆದರೂ ವಾಸ್ತವ ಸಂಗತಿಯಾಗಿದೆ. ಇದನ್ನು ಆಡಳಿತಾತ್ಮಕ ತೊಡಕು ಎಂದು ಸುಲಭವಾಗಿ ತಳ್ಳಿಹಾಕುವಂಥದಲ್ಲ. ಏಕೆಂದರೆ ಗ್ರಾಮ ಪ...

ಅಜ್ಜಂಪುರದಲ್ಲಿ ಕಾರ ಹಬ್ಬದ ಸಂಪ್ರದಾಯ

ಇಮೇಜ್
ಆತ್ಮೀಯರೇ, ನಾನೀಗ ಅಮೆರಿಕೆಗೆ ಬಂದು ತಿಂಗಳಾಯಿತು. ಇನ್ನೂ ಆರು ತಿಂಗಳು ಇಲ್ಲಿಯೇ ಇರುತ್ತೇನೆ.  ಹೀಗೆ ಬರುವ ಮುನ್ನ ಅಜ್ಜಂಪುರಕ್ಕೆ ಸಂಬಂಧಿಸಿದ ಈ ಬ್ಲಾಗ್ ಮಾಹಿತಿಯ ಕೊರತೆಯಿಂದಾಗಿ ನಿಲ್ಲಬಾರದೆಂದು ಅಪೇಕ್ಷಿಸಿ, ಓದುಗರು ತಮ್ಮ ಅನುಭವಗಳನ್ನು, ಮಾಹಿತಿಗಳನ್ನು ಹಂಚಿಕೊಳ್ಳಲು ಆಗೀಗ ಕೋರುತ್ತಿರುತ್ತೇನೆ. ಕೆಲವರನ್ನು ವೈಯುಕ್ತಿಕವಾಗಿಯೂ ಕೋರಿದ್ದೇನೆ. ನನ್ನ ಉದ್ದೇಶವನ್ನು ಗಮನಿಸಿ, ಬ್ಲಾಗ್ ನಿಲ್ಲಬಾರದೆಂಬ ಪ್ರೀತಿಯೊಂದಿಗೆ ಗೆಳೆಯ ಅಪ್ಪಾಜಿ (ಅಪೂರ್ವ) ಅಜ್ಜಂಪುರದ ಮಿಡಲ್ ಸ್ಕೂಲ್ ಹಿಂಭಾಗದಲ್ಲಿರುವ ಕರಿ ಕಲ್ಲುಗಳ ಬಗ್ಗೆ ಲೇಖನವನ್ನು ಕಳಿಸಿದ್ದಾರೆ. ನಾನು ಬಾಲ್ಯದಲ್ಲಿ ಇವುಗಳನ್ನು ನೋಡಿದಾಗ, ಅವು ನೆಲದಿಂದ ನಾಲ್ಕು ಅಡಿಗಳ ಎತ್ತರವಿರುವಂತೆ ಕಾಣುತ್ತಿದ್ದವು. ಬಾಲ್ಯ ಸಹಜ ಕುತೂಹಲದಿಂದ ಈ ಕಲ್ಲುಗಳನ್ನು ಇಲ್ಲೇಕೆ ನಿಲ್ಲಿಸಿದ್ದಾರೆ ಎಂದು ಕೇಳಿದ್ದಕ್ಕೆ, ಕೆಲವು ಹಿರಿಯರು ಅವು ಊರ ಬಾಗಿಲಿನ ಸಂಕೇತವೆಂದೂ, ಕೋಟೆಯ ಆರಂಭದಲ್ಲೇ ಇರುವದರಿಂದ ಅವಗಳಿಗೆ ಬಲಿ ನೀಡುವ ಪದ್ಧತಿಯೂ ಇದ್ದಿರಬಹುದೆಂದು, ತಮಗೆ ತಿಳಿದ, ತಾವು ಊಹಿಸಿದ ಸಂಗತಿಗಳನ್ನು ತಿಳಿಸಿದ್ದು ನೆನಪಿದೆ. ಆದರೆ ಅವಾವೂ ಅಲ್ಲ, ಅವು ಕೃಷಿ ಚಟುವಟಿಕೆಯ ಆರಂಭಕ್ಕೆ ಪೂಜಿಸಲಾಗುವ ಸಾರ್ವಜನಿಕ ಕುರುಹು ಎಂದೂ, ಅವಕ್ಕೆ ಪ್ರತಿವರ್ಷ ನಡೆಯುವ ಪೂಜಾ ಸಂಪ್ರದಾಯಗಳ ವಿವರಗಳನ್ನು ಇಲ್ಲಿ ನೀಡಿದ್ದಾರೆ.  ಈ ಆಚರಣೆ ಕರ್ನಾಟಕದ ವಿವಿಧ ಪ್ರದೇಶಗಳಲ್ಲಿ ಬೇರೆ ಬೇರೆ ರೀತಿಯಲ್ಲ...

ಪ್ರತಿಷ್ಠೆಯ ಪ್ರಶ್ನೆಯಾದ ಪ್ರತಿಷ್ಠಾಪನಾ ಪ್ರಸಂಗ !

ಇಮೇಜ್
ಈ ಹಿಂದೆ ಅಜ್ಜಂಪುರದ ಬಸವೇಶ್ವರ ದೇವಾಲಯದ ಬಗ್ಗೆ ಒಂದು ಲೇಖನ ಪ್ರಕಟವಾಗಿದೆ. ಅದರಲ್ಲಿ ನಮೂದಿಸಿರುವಂತೆ ದೇವಾಲಯದ ಪ್ರತಿಷ್ಠಾಪನೆಯ ಕಾರ್ಯ ೧೯೩೨ರಲ್ಲಿ ನಡೆಯಿತು. ಈ ಕಾರ್ಯವು ನಡೆಯಬೇಕಾದ ಸಂದರ್ಭದಲ್ಲಿ ಉಂಟಾದ ಚಿಕ್ಕ ಗೊಂದಲದ ಮಾಹಿತಿ ಇತ್ತೀಚೆಗೆ ದೊರೆಯಿತು. ಎಲ್ಲೆಡೆಯೂ ಇದೆಲ್ಲ ಸಾಮಾನ್ಯವೇ ಸರಿ. ಅಜ್ಜಂಪುರದ ಬೆಳವಣಿಗೆಗೆ ಕಾರಣರಾದ ಹಿರಿಯರು ಶ್ರೀ ಶೆಟ್ಟರ ಶಿದ್ದಪ್ಪನವರು.  ಅವರ ಬರವಣಿಗೆಯ ಶೈಲಿಯನ್ನು ಆನಂದಿಸುವ ಜತೆಗೆ, ವಿಷಯ ಪ್ರತಿಪಾದನೆಯಲ್ಲಿ ಖಾಚಿತ್ಯದ ದೃಷ್ಟಿಯಿಂದ ೧೯೩೨ ರ  ಅವರ ಪತ್ರ ಮಹತ್ವದ್ದೆನ್ನಿಸಿ, ಅದನ್ನಿಲ್ಲಿ ನೀಡಲಾಗಿದೆ. ಗೆಳೆಯ, ಲೇಖಕ ಮಿತ್ರ ಅಪೂರ್ವ ಇವರ ಸಂಗ್ರಹದಲ್ಲಿ ದೊರೆತ ಶ್ರೀ ಶೆಟ್ಟರ ಶಿದ್ದಪ್ಪನವರ ಪತ್ರದ ಯಥಾ ನಕಲನ್ನು ಹಾಗೆಯೇ ಪ್ರಸ್ತುತಪಡಿಸಲಾಗಿದೆ. “ ಧರ್ಮಸಂಮಂಧಿ ಶ್ರೀ ಬಸವೇಶ್ವರ ವೀರಭದ್ರ ಸ್ವಾಮಿಯವರ ಪ್ರತಿಷ್ಠಾಪನ ಆಮಂತ್ರಣ ಪತ್ರಿಕಾ ಪ್ರಿಂಟು ಮಾಡಿ ಹಂಚಿರುವ ವ್ಯವಸ್ಥಾಪಕರು ಕಾರ್ಯದರ್ಶಿಗಳು ಇವರಿಗೆ – ಈ ಕೆಳಗೆ ಸಹಿ ಮಾಡಿರುವವರು ಸೂಚಿಸುವುದೇನೆಂದರೆ – ತಾ ೮-೧೧-೩೨ರಿಂದ ತಾ. ೧೧-೧೧-೩೨ರವರೆಗೆ ಶ್ರೀಮನ್ ಮಹಾರಾಜ ನಿರಂಜನ  ಜಗದ್ಗುರು ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರು ಆಗಮನ ಮಹೋತ್ಸವದ ಅಧ್ಯಕ್ಷತೆಯಲ್ಲಿ ನೆರವೇರಿಸುವ ಕಾರ್ಯಕ್ರಮದ ಸದರಿ ಆಹವಾನಪತ್ರಿಕೆಯು ಶ್ರೀ ಕಂನ್ಯಕಾಪರಮೇಶ್ವರಿ ಪ್ರಿಂಟಿಸುವವರ ಚಿತ್ರದುರ್ಗದಲ್ಲಿ ಪ್ರೆಸ್ಸಿನಲ್ಲಿ ಪ್ರಿಂಟಾ...

7 ಹಳ್ಳಿ, 18 ಮಾಗಣಿ, ಅಜ್ಜಂಪುರ ಸೀಮೆ !

ಇಮೇಜ್
ಶೀರ್ಷಿಕೆ ಸೇರಿಸಿ ಏಪ್ರಿಲ್ 23 ರಿಂದ ಮೇ 1ರವರೆಗೆ ಅಜ್ಜಂಪುರಕ್ಕೆ ಏಳು ಕಿ.ಮೀ. ದೂರದಲ್ಲಿರುವ ಪುಟ್ಟ ಗ್ರಾಮ ಸೊಲ್ಲಾಪುರದಲ್ಲಿ ಶ್ರೀ ಸಿದ್ಧರಾಮೇಶ್ವರ ಜಾತ್ರೆಯ ಸಂಭ್ರಮ. ನನ್ನ 18-20 ವಯಸ್ಸಿನ ವರೆಗೂ ಅಜ್ಜಂಪುರದಲ್ಲೇ ಇದ್ದೆನಾದರೂ, ಒಮ್ಮೆಯೂ ಇಲ್ಲಿಗೆ ಹೋಗಲಾಗಿರಲಿಲ್ಲ. ಆದರೆ ಪ್ರತಿ 12 ವರ್ಷಕ್ಕೆ ನಡೆಯುವ ಈ ಜಾತ್ರೆಗೆ ಅಜ್ಜಂಪುರವೇ ಸೀಮೆಯೆಂಬ ಅಂಶ ತಿಳಿದದ್ದು ಇತ್ತೀಚೆಗೆ. ನನ್ನ ಗುರುಗಳಾದ ಚಂದ್ರಪ್ಪ ಮಾಸ್ತರರು ದೂರದ ಕುಶಾಲನಗರದಿಂದ ಫೋನ್ ಮಾಡಿ ಈ ಜಾತ್ರೆಯ ವಿವರಗಳನ್ನು ತಿಳಿಸಿ, ನೀನು ಅಲ್ಲಿಗೆ ಹೋಗಿ ನೋಡಿಕೊಂಡು ಬಾ ಎಂದಿದ್ದರು. ಹೀಗಾಗಿ ಗೆಳೆಯ ಅಪ್ಪಾಜಿಯೊಡನೆ ಸೊಲ್ಲಾಪುರಕ್ಕೆ ತೆರಳಿ, ಅಲ್ಲಿನ ಹಿರಿಯರನ್ನು ಸಂದರ್ಶಿಸಿ, ಸಂಗ್ರಹಿಸಿದ ವಿವರಗಳನ್ನು ಇಲ್ಲಿ ನೀಡಿದ್ದೇನೆ.  ಉಯ್ಯಾಲೆ ಮಂಟಪ ಅಜ್ಜಂಪುರ ಮೂಲತಃ ಕೃಷಿ ಪ್ರಧಾನ ಜೀವನಶೈಲಿಯನ್ನು ಹೊಂದಿರುವಂಥದು. ಸ್ವಾಭಾವಿಕವಾಗಿ ಇಲ್ಲಿನ ಕೃಷಿ ಸಂಬಂಧಿತ ಆಚರಣೆಗಳ, ಕಲೆಗಳ ಮೂಲಸತ್ವ ಹಾಗೆಯೇ ಉಳಿದುಬಂದಿದೆ. ಮನುಷ್ಯರಿಗೆ ಇರುವ ಸಾಮುದಾಯಿಕ ಸಂಬಂಧಗಳಂತೆಯೇ, ಇಂಥ ಆಚರಣೆಗಳ ಮೂಲಕ ಸಾಂಪ್ರದಾಯಿಕ ಸಂಬಂಧಗಳ ಕಾರಣದಿಂದ ಊರುಗಳ ನಡುವೆಯೂ ಬಂಧುತ್ವ, ಹೊಂದಾಣಿಕೆಗಳನ್ನು ಸಿದ್ಧರಾಮಣ್ಣನು ರೂಢಿಸಿರುವುದು ಆತನ ವಿಶಾಲ ದೃಷ್ಟಿಗೆ ಸಾಕ್ಷಿಯಾಗಿದೆ. ಇದಕ್ಕೆ ಉದಾಹರಣೆಯಾಗಿ, ಸೊಲ್ಲಾಪುರದ ಶ್ರೀ ಸಿದ್ಧರಾಮೇಶ್ವರ ಜಾತ್ರೆಯ ಆಚರಣೆಯಲ್ಲಿಯೂ ಈ ಅಂಶಗಳು ಗೋಚರಿ...

ಜ್ಞಾನ ಭಂಡಾರ

ಇಮೇಜ್
ಅಜ್ಜಂಪುರದ ಶ್ರೀ ಸತ್ಯನಾರಾಯಣ ಶೆಟ್ಟರ ಬಗೆಗೆ ಅನೇಕ ವಿವರಗಳು ಈ ಬ್ಲಾಗ್ ನಲ್ಲಿ ಪ್ರಕಟವಾಗಿವೆ. ಇಲ್ಲಿ ಅವರ ಕೃತಿ "ಜ್ಞಾನ ಭಂಡಾರ" ದ ಬಗ್ಗೆ ಪ್ರಸ್ತಾಪಿಸಲಾಗಿದೆ. ಇದಕ್ಕೆ ಕಾರಣವೆಂದರೆ ಶ್ರೀ ಶೆಟ್ಟರು ಪುಸ್ತಕ ಪ್ರಕಾಶನದಲ್ಲಿ ಬಹುಶಃ ಹೆಚ್ಚು ಜನ ಯೋಚಿಸಿರಲಾರದ ಉಪಾಯವೊಂದನ್ನು ಕಾರ್ಯಗತಗೊಳಿಸುವುದಷ್ಟೇ ಅಲ್ಲದೆ, ಪ್ರಕಾಶನ ತಂತ್ರಕ್ಕೆ ಹೊಸ ಆಯಾಮವೊಂದನ್ನು ನೀಡಿದ್ದಾರೆ. ಅದೂ ಈ ಶತಮಾನದಲ್ಲಿ ಎನ್ನುವುದು ಆಶ್ಚರ್ಯಕಾರಿಯಾದುದು. ಹಿಂದೆಲ್ಲ ಶಾಲಾ ಪತ್ರಿಕೆಗಳನ್ನು ಕೈಬರಹದಲ್ಲೇ ತರುವ ಪದ್ಧತಿಯಿತ್ತು. ಅಂಥ ಕೈ ಬರಹದ ಶಾಲಾ ವಾರ್ಷಿಕ ಪತ್ರವನ್ನು ಹಿಂದಿನ ಶತಮಾನದ 60ರ ದಶಕದಲ್ಲಿ ಅಜ್ಜಂಪುರ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಶ್ರೀ ಎನ್. ಎಸ್. ಅನಂತರಾವ್ ಸಂಪಾದಿಸಿದ್ದರು. ಅವರು ಹಾಗೆ ಮಾಡುವಲ್ಲಿ ಅನೇಕ ಅಂಶಗಳನ್ನು ಗಮನದಲ್ಲಿರಿಸಿಕೊಂಡಿರುತ್ತಿದ್ದರು. ಮೊದಲನೆಯದು ಮುದ್ರಣ ವೆಚ್ಚವನ್ನು ಭರಿಸುವುದು ಅಂದಿನ ದಿನಗಳಲ್ಲಿ ಕಷ್ಟಕರವಾಗಿರುತ್ತಿತ್ತು. ಎರಡನೆಯದು, ಶಾಲಾ ವಿದ್ಯಾರ್ಥಿಗಳು ತಮ್ಮ ಆಯ್ಕೆಯ ವಿಷಯವನ್ನು ಚೆನ್ನಾಗಿ ಅಧ್ಯಯನ ಮಾಡಿ ಬರೆಯಬೇಕಾದ ಜವಾಬ್ದಾರಿಯನ್ನು ಹೊರಬೇಕಾಗಿದಿದ್ದುದರಿಂದ, ಗುಣಮಟ್ಟದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವಂತೆ ಇರುತ್ತಿರಲಿಲ್ಲ. ಮೂರನೆಯದಾಗಿ ಉತ್ತಮ ಹಸ್ತಾಕ್ಷರ ಹೊಂದಿಲ್ಲದ ವಿದ್ಯಾರ್ಥಿಗಳು ಕೂಡ, ಈ ಕಾರಣಕ್ಕೆಂದು ತಮ್ಮ ಬರವಣಿಗೆಯನ್ನು ಸುಧಾರಿಸಿಕೊಳ್ಳುವ ಅಗತ್ಯವ...

ಅಮೃತಮಹಲ್ ಕಾವಲು ಉಳಿಸಿ - ಅವಿರತ ಹೋರಾಟದ ಕ್ರೋಡೀಕೃತ ವರದಿ - ಭಾಗ 3

ಇಮೇಜ್
ಇದು "ಅಮೃತಮಹಲ್ ಕಾವಲು  ಉಳಿಸಿ" ಹೋರಾಟದ ಇದುವರೆಗಿನ ವರದಿಯ ಕೊನೆಯ ಕಂತು. ಇಷ್ಟಾಗಿಯೂ ಹೋರಾಟ ತಾರ್ಕಿಕ ಅಂತ್ಯವನ್ನೇನೂ ಕಂಡಿಲ್ಲ. ಆದರೆ ರಾಜ್ಯದ ಹೆಮ್ಮೆಯ ಜಾನುವಾರು ತಳಿ ಸಂವರ್ಧನಾ ಕೇಂದ್ರವು ತನ್ನ ಸ್ಥಾಪಿತ ಉದ್ದೇಶಕ್ಕೆಂದು ಮುಂದುವರೆಯಬೇಕೆಂಬ ಕಳಕಳಿ ಹೋರಾಟಗಾರರದು. ಅವರ ಯತ್ನ ಯಶಸ್ವಿಯಾಗಲೆಂದು ಹಾರೈಸೋಣ.   ಈ ಎಲ್ಲ ವರದಿಗಳನ್ನೂ ದಿನಾಂಕ ಸಹಿತ , ಚಿತ್ರ-ಸಹಿತ ಅನುಕ್ರಮಣಿಕೆಯಲ್ಲಿ ಕಳಿಸಿದ ಪವಿತ್ರಾ ಪ್ರಿಂಟರ್ಸ್ ನ ಮಾಲಕ ಹಾಗೂ ವಿಜಯ ಕರ್ನಾಟಕ ದಿನಪತ್ರಿಕೆಯ ಸ್ಥಳೀಯ ವರದಿಗಾರ ಶ್ರೀ ವೆಂಕಟೇಶ್ ರಿಗೆ ಧನ್ಯವಾದಗಳು. ಈ ಬ್ಲಾಗ್ ನಲ್ಲಿ ಅಜ್ಜಂಪುರದ ಎಲ್ಲ ಬೆಳವಣಿಗೆಗಳನ್ನು ದಾಖಲಿಸಲು ಅವಕಾಶವಿದೆ. ಲೇಖಕರು ತಮ್ಮ ಬರಹಗಳನ್ನು   shankarajp@gmail.com   ಈ ವಿಳಾಸಕ್ಕಾಗಲೀ , ದೂರವಾಣಿ ಸಂಖ್ಯೆ 99866 72483 ಇಲ್ಲಿಗಾಗಲೀ ತಿಳಿಸಲು ಕೋರುತ್ತೇನೆ. -ಶಂಕರ ಅಜ್ಜಂಪುರ --------------------------------------------------------------------------------------------------------------------------------------------------------------------------------------------- ಈ ಸಭೆಯಲ್ಲಿ ಅಂದು ಹಾಜರಿದ್ದ ಕೇಂದ್ರದ ಉಪ ನಿರ್ದೇಶಕ , ಡಾ. ಸುರೇಶ್ , ನಿರ್ದೇಶಕ ಡಾ. ರಂಗನಾಥ್ , ಸಮಾಜ ಸೇವಕ ಜಿ. ಚನ್ನಪ್ಪ , ಉಪನ್ಯಾಸಕ ಅರವಿಂದ ಐರಣಿ , ...

ಅಜ್ಜಂಪುರದ ಶ್ರೀ ಬೀರಲಿಂಗೇಶ್ವರ ದೇವಸ್ಥಾನ

ಇಮೇಜ್
ಆತ್ಮೀಯ ಓದುಗರೇ, ನಮ್ಮೂರಿನ ದೇವಾಲಯಗಳಿಗೆ ಜಾನಪದ ಕಥೆಗಳನ್ನು ಹೋಲುವಂಥ ಇಂತಹದೊಂದು ಇತಿಹಾಸವಿದೆಯೆನ್ನುವುದನ್ನು ತಿಳಿದದ್ದು ಇತ್ತೀಚೆಗೇ ಸರಿ. ಈ ಹಿಂದೆ ಪ್ರಕಟವಾದ ಅಜ್ಜಂಪುರದ ಬಸವಣ್ಣ ದೇವರ ಗುಡಿ ಸ್ಥಾಪಿತವಾದ ಬಗ್ಗೆ ಕೂಡ ಇಂಥದೇ ವಿವರಗಳಿದ್ದವು.   ಇವನ್ನು ಕೇಳಿತಿಳಿದ, ಅಂಥ ಸಂದರ್ಭಗಳಲ್ಲಿ ಹಾಜರಿದ್ದ ಕೆಲವರಾದರೂ ಊರಿನಲ್ಲಿರಬಹುದು. ಅವೆಲ್ಲ ಇತಿಹಾಸವಾಗುವುದು ಸಾಕಷ್ಟು ಕಾಲ ಕಳೆದ ನಂತರವೇ ಸರಿಯಷ್ಟೆ. ಅಜ್ಜಂಪುರದ ಬೀರಲಿಂಗೇಶ್ವರನಿಗೆ ಸಂಬಂಧಿಸಿದಂಥ ಅಂಥದೊಂದು ರೋಚಕ ಪ್ರಸಂಗವನ್ನು ಗೆಳೆಯ ಅಪೂರ್ವ ಇಲ್ಲಿ ನಮೂದಿಸಿದ್ದಾರೆ.  ಅವರು ಸಾಕಷ್ಟು ಜನರನ್ನು ಸಂದರ್ಶಿಸಿ, ಇದಕ್ಕೊಂದು ಅಧಿಕೃತತೆಯಿದೆಯೆಂದು ಮನವರಿಕೆಯಾದ ನಂತರವೇ, ಪರಿಷ್ಕರಿಸಿ ರಚಿಸಿದ್ದಾರೆ. ಅವರ ಬದ್ಧತೆಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ. ಅಂತೆಯೇ ಮಾಹಿತಿ ಸಹಕಾರ, ಹಾಗೂ  ಚಿತ್ರಗಳನ್ನು ಒದಗಿಸಿದ ಅಜ್ಜಂಪುರದ   ಶ್ರೀ ಎನ್. ರೇವಣ್ಣ,  ಶ್ರೀ ವೆಂಕಟರಾಯಪ್ಪ, ಮತ್ತು ಶ್ರೀ ರಮೇಶ್ ಇವರೆಲ್ಲರಿಗೂ ಧನ್ಯವಾದಗಳು.  - ಶಂಕರ ಅಜ್ಜಂಪುರ  ದೂರವಾಣಿ : 99866 72483 -------------------------------------------------------------------------------------------------------------------------------- CdÓA¥ÀÄgÀzÀ ²æÃ ©ÃgÀ°AUÉñÀégÀ zÉêÀ¸ÁÜ£À ±ÀvÀªÀiÁ£ÀzÀ »A...