ಪೋಸ್ಟ್‌ಗಳು

82. "ಬಾರ್ನ್ ಹೆಡ್ ಮಾಸ್ಟರ್" ಅಜ್ಜಂಪುರ ವೆಂಕಟೇಶಮೂರ್ತಿ

ಇಮೇಜ್
2018 ಓದುಗರೆಲ್ಲರಿಗೂ ಹೊಸವರ್ಷದ ಶುಭಾಶಯಗಳು ಶ್ರೀ ಎ. ವೆಂಕಟೇಶಮೂರ್ತಿಗಳು ಅತ್ಯುತ್ತಮ ಅಧ್ಯಾಪಕರಾಗಿ, ಪ್ರಾಂಶುಪಾಲರಾಗಿ ಕಳೆದ ಶತಮಾನದ 60-70ರ ದಶಕಗಳಲ್ಲಿ ತುಂಬ ಜನಪ್ರಿಯರು, ಆದರಣೀಯರೂ ಆಗಿದ್ದರು. ಅಜ್ಜಂಪುರದ ಶೈಕ್ಷಣಿಕ ಇತಿಹಾಸದ ಆರಂಭದ ದಿನಗಳಲ್ಲಿ ಶ್ರಮವಹಿಸಿ ದುಡಿದವರು.  ಉತ್ತಮ ಕಾರ್ಯಗಳನ್ನು ಮಾಡಿದವರನ್ನು ಸ್ಮರಿಸುವುದೇ ಅಪರೂಪ. ಅಂಥದರಲ್ಲಿ ಅವರ ನಿಧನಾನಂತರವೂ  ಸ್ಮರಣಸಂಚಿಕೆಯಲ್ಲಿ  ನೆನಪಿಸಿಕೊಂಡು ತಮ್ಮ ಕೃತಜ್ಞತೆಯನ್ನು ಹೇಳಿರುವುದನ್ನು ದಾಖಲಿಸಿರುವುದು ಅವರ ವ್ಯಕ್ತಿತ್ವದ ಪ್ರಭಾವವನ್ನು ಎತ್ತಿ ತೋರುವಂತಿದೆ.   ಇಂಥ ಸ್ಮರಣೀಯ ಹಿರಿಯರನ್ನು ಕುರಿತು, ನರಸಿಂಹರಾಜಪುರದ ಅವರ ವಿದ್ಯಾರ್ಥಿಗಳು ಹೊರತಂದಿರುವ ಸ್ಮರಣಸಂಚಿಕೆಯ ಪುಟವೊಂದನ್ನು ನಮ್ಮೊಂದಿಗೆ ಹಂಚಿಕೊಂಡಿರುವವರು,  ಈಗ ಬೆಂಗಳೂರಿನಲ್ಲಿ ನೆಲೆಸಿರುವ ಅವರ ಪುತ್ರಿ ಶ್ರೀಮತಿ ಗಾಯತ್ರಿ ಶಿವಸ್ವಾಮಿ.   “ ಅಂತರಜಾಲದಲ್ಲಿ ಅಜ್ಜಂಪುರ ” ಬ್ಲಾಗ್ ನ ಅಜ್ಜಂಪುರದ ಹಿರಿಯರ ಕುರಿತ ಲೇಖನಗಳನ್ನು ಓದಿ ಪ್ರಭಾವಿತರಾಗಿ,  ಚಿತ್ರ-ಮಾಹಿತಿಗಳನ್ನು ಒದಗಿಸಿದ್ದಾರೆ. ನಾನು ನಮ್ಮ ಓದುಗರಲ್ಲಿ ಸದಾ ಮಾಡಿಕೊಳ್ಳುತ್ತಿದ್ದ ಮನವಿಗೆ ಓರ್ವರಾದರೂ ಸ್ಪಂದಿಸಿದರೆನ್ನುವ ಸಂತೋಷ ನನ್ನದು. ಈ ವಿವರಣೆ ಇತರರಿಗೂ ಸ್ಫೂರ್ತಿ ನೀಡಲಿ ಎಂದು ಆಶಿಸುತ್ತೇನೆ. ಶಂಕರ ಅಜ್ಜಂಪುರ ಸಂಪಾದಕ, “ ಅಂತರಜಾಲದಲ್ಲಿ ಅಜ್ಜಂಪುರ...

81. ಅಜ್ಜಂಪುರ ಬಸವಣ್ಣ ದೇವರ ಗುಡಿಯ ಶತಮಾನೋತ್ಸವ

ಇಮೇಜ್
ಅಜ್ಜಂಪುರದಲ್ಲಿ ಕೋಟೆಯ ಆಂಜನೇಯ ದೇವಾಲಯವಿರುವಂತೆ, ಪೇಟೆಯಲ್ಲಿನ ಬಸವಣ್ಣದೇವರ ಗುಡಿ ಕೂಡ ಪ್ರಾಚೀನವಾದುದು. ಈ ದೇವಾಲಯದ ಬಗ್ಗೆ ಹಿಂದೆ ಒಂದು ಲೇಖನವನ್ನು ಪ್ರಕಟಿಸಲಾಗಿದೆ. ಈ ಬಸವಣ್ಣ ದೇವರ ಗುಡಿಯ ಶತಮಾನೋತ್ಸವವನ್ನು ಕಳೆದ ತಿಂಗಳ 23ರಂದು ಆಚರಿಸಿದ್ದನ್ನು ದಾಖಲಿಸಲು ಇಲ್ಲಿ  ಪುನರ್ ಪ್ರಸ್ತಾಪಿಸಲಾಗಿದೆ.   ದೇವಾಲಯವು ಪ್ರಾಚೀನವೆನ್ನಲು ಅದರ ಸಂರಚನೆಯನ್ನು ನೋಡಿದರೆ ತಿಳಿಯುವಂತಿದೆ. ವಿಜಯನಗರೋತ್ತರ ಕಾಲದಲ್ಲಿ ರಚನೆಯಾದ ಈ ಮಂದಿರವನ್ನು ಶುದ್ಧ ಗ್ರಾನೈಟ್ ಶಿಲೆಯನ್ನು ಬಳಸಿ ಕಟ್ಟಲಾಗಿದೆ.  ಇಲ್ಲಿರುವ ಬಸವಣ್ಣ ದೇವರ ವಿಗ್ರಹ, ರುದ್ರ ಹಾಗೂ ವೀರಭದ್ರ ಶಿಲ್ಪಗಳನ್ನು 1932ರಲ್ಲಿ ಸ್ಥಾಪಿಸಲಾಯಿತಾದರೂ, ಮಂದಿರ ಮಾತ್ರ ಅದಕ್ಕೂ ಹಿಂದಿನದೇ ಆಗಿದೆ. ರುದ್ರ ಹಾಗೂ ವೀರಭದ್ರ ವಿಗ್ರಹಗಳಿಗೆ ಆರುನೂರು ವರ್ಷಗಳ ಇತಿಹಾಸವಿದೆಯೆಂದು ತಿಳುವಳಿಕೆ. ಕೋಟೆಯಲ್ಲಿ ನೆಲೆಗೊಂಡಿದ್ದ ವೀರಭದ್ರ ಮತ್ತು ರುದ್ರ ದೇವರ ವಿಗ್ರಹಗಳು, ಕಾಲಾಂತರದಲ್ಲಿ ಪೂಜಾದಿಗಳಿಲ್ಲದೆ, ಸೊರಗಿದವು. ಇದನ್ನು ಗಮನಿಸಿದ ಊರ ಹಿರಿಯರಾದ ಶೆಟ್ರ ಸಿದ್ದಪ್ಪನವರು, ಕುಪ್ಪಾಳು ಸಿದ್ದರಾಮಣ್ಣ, ಗಂಗಣ್ಣ, ನಿರ್ವಾಣಶೆಟ್ಟರ ಹಾಲಪ್ಪ, ಜವಳಿ ನಾಗಪ್ಪ, ಗುರುಪಾದಪ್ಪರ ಮಲ್ಲಯ್ಯ, ಭಂಗಿ ಮರುಳಪ್ಪ ಮುಂತಾದವರು, ಈ ದೇವಾಲಯದ ಜೀರ್ಣೋದ್ಧಾರ ಕಾರ್ಯವನ್ನು ಆರಂಭಿಸಿದರು. ತತ್ಪರಿಣಾಮವಾಗಿ, ಕೋಟೆಯಲ್ಲಿದ್ದ ಈ ಎರಡು ವಿಗ್ರಹಗಳನ್ನು ತಂದು ೧೯೩...

80. ಅನನ್ಯ ಪ್ರತಿಭೆಯ ರಂಗಕರ್ಮಿ - ಎ.ಎಸ್. ಕೃಷ್ಣಮೂರ್ತಿ

ಇಮೇಜ್
ಆತ್ಮೀಯ ಓದುಗರೇ, ಎಲ್ಲರಿಗೂ 62ನೇ ಕರ್ನಾಟಕ ರಾಜ್ಯೋತ್ಸವದ ಶುಭಾಶಯಗಳು. ಕನ್ನಡದ ಬೆಳವಣಿಗೆಯಲ್ಲಿ ಭಾಷೆಯ ಬಳಕೆ ಮತ್ತು ಸಂವಹನಗಳಿಗೆ ಪ್ರಾಮುಖ್ಯತೆಯಿದೆಯಷ್ಟೆ. ಈ ನಿಟ್ಟಿನಲ್ಲಿ "ಅಂತರಜಾಲದಲ್ಲಿ ಅಜ್ಜಂಪುರ" ಬ್ಲಾಗ್ ಮೂಲಕ  ನನ್ನೂರು ಅಜ್ಜಂಪುರದ ಸಾಧಕರು,  ದೇವಾಲಯಗಳು, ಆಚರಣೆಗಳು, ಹಬ್ಬ-ಹರಿದಿನಗಳು, ಸಂಘ-ಸಂಸ್ಥೆಗಳು ಮುಂತಾದ ವಿಶೇಷಗಳ ಹಲವು ಆಯಾಮಗಳನ್ನು ದಾಖಲಿಸುವ ಕಾರ್ಯವು ನನ್ನ ಅನೇಕ ಮಿತ್ರರ ಸಹಾಯ ಸಹಕಾರಗಳಿಂದ ಕಳೆದ ಏಳು ವರ್ಷಗಳಿಂದ ನಿರಂತರವಾಗಿ ನಡೆಯುತ್ತಿದೆ. ನೀವು ಕೂಡ ಊರಿನ ಅನೇಕ ವಿಶೇಷಗಳ ಬಗ್ಗೆ, ವ್ಯಕ್ತಿಗಳ ಬಗ್ಗೆ, ಸಂಘ-ಸಂಸ್ಥೆಗಳ ಬಗ್ಗೆ ಚಿತ್ರಸಹಿತ ಮಾಹಿತಿಯನ್ನು ಕೆಳಕಂಡ ಈ-ಮೇಲ್ ವಿಳಾಸಕ್ಕೆ ಕಳಿಸಿ ಸಹಕರಿಸಲು ಕೋರುತ್ತೇನೆ. ಪ್ರಸ್ತುತ ರಾಜ್ಯೋತ್ಸವದ  ಈ ಸಂಚಿಕೆಯಲ್ಲಿ ಅಜ್ಜಂಪುರದ ಪ್ರಸಿದ್ಧ ರಂಗಕರ್ಮಿ ಶ್ರೀ ಎ.ಎಸ್. ಕೃಷ್ಣಮೂರ್ತಿಯವರನ್ನು ಕುರಿತಂತೆ ಲೇಖನ-ಚಿತ್ರಗಳನ್ನು ಪ್ರಕಟಿಸಲಾಗಿದೆ.  ವಂದನೆಗಳೊಡನೆ. - ಶಂಕರ ಅಜ್ಜಂಪುರ ಸಂಪಾದಕ, ಅಂತರಜಾಲದಲ್ಲಿ ಅಜ್ಜಂಪುರ ಬ್ಲಾಗ್ ಈ-ಮೇಲ್ ವಿಳಾಸ -shankarajp@gmail.com ದೂರವಾಣಿ - 99866 72483 ----------------------------------------------------------------------------------------------------------------------------------------------------------...

79. ಗ್ರಾಮದೇವತೆಯ ಆಪ್ತ ಕಾರ್ಯದರ್ಶಿ - ಅಸಾದಿ

ಇಮೇಜ್
ಆತ್ಮೀಯ ಓದುಗರೇ, ಎಲ್ಲರಿಗೂ ದೀಪಾವಳೀ ಹಬ್ಬದ ಶುಭಾಶಯಗಳು. ನವರಾತ್ರಿ ಮುಗಿದಿದೆ, ದೀಪಾವಳೀ ಆರಂಭವಾಗಲಿದೆ. ನಾಡಿನ ಎರಡು ಈ ಮಹಾಪರ್ವಗಳಲ್ಲಿ ದೇವಿಯ ಆರಾಧನೆಯದೇ ಸಿಂಹಪಾಲು. ಅಕ್ಟೋಬರ್ ತಿಂಗಳ ಈ ಸಂಚಿಕೆಯಲ್ಲಿ ಶ್ರೀಮತಿ ರೋಹಿಣೀ ಶರ್ಮಾ ಇವರು ಬಹಳ ಹಿಂದೆಯೇ ದಾಖಲಿಸಿದ ಲೇಖನ ಗ್ರಾಮದೇವತೆಯ ಆಪ್ತಕಾರ್ಯದರ್ಶಿ ಅಸಾದಿ ಯನ್ನು ಪ್ರಕಟಿಸಲಾಗಿದೆ.  ಮರೆಯಾದ ಒಂದು ಸಂಸ್ಕೃತಿಯ ಭಾಗವನ್ನು ಇಲ್ಲಿ ಲೇಖಕಿ ನೆನಪು ಮಾಡಿಕೊಂಡಿದ್ದಾರೆ. ಅಜ್ಜಂಪುರದಲ್ಲಿ ಅಸಾದಿಯ ಮಾತುಗಳನ್ನು ಕೇಳಿದವರು, ದೇವಿಯನ್ನು ನಿಂದಾಸ್ತುತಿಯ ಮೂಲಕ ಅರ್ಚಿಸುತ್ತಿದ್ದ ಆತನ ಭಕ್ತಿಯ ಪರಾಕಾಷ್ಠತೆಯನ್ನು ಕಂಡವರು ಇನ್ನೂ ಇದ್ದಾರೆ.  ಜಾನಪದ ಸಂಪ್ರದಾಯದ ಪೂಜಾ ಪದ್ಧತಿಗಳಲ್ಲಿ ಬೈಗುಳವೇ ಅರ್ಚನೆಯ ಮಂತ್ರದಂತೆ ಇರುತ್ತಿದ್ದ ದಿನಗಳಿದ್ದವು. ಚರ್ಮದ ತಮಟೆ, ಹಲಗೆ ವಾದ್ಯಗಳನ್ನು ರಸ್ತೆಬದಿಯಲ್ಲಿ ಒಣಹುಲ್ಲಿಗೆ ಬೆಂಕಿ ಹಚ್ಚಿ ಕಾಯಿಸಿ ಬಡಿಯುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಈಗ ಸಿಂಥೆಟಿಕ್ ಪ್ಲಾಸ್ಟಿಕ್ ಹಾಳೆಯ ಹೊದಿಕೆಯುಳ್ಳ ಡ್ರಮ್ ಗಳು ಬಂದಿವೆ. ಅವೂ ಅಬ್ಬರದ ನಾದವನ್ನು ಮೂಡಿಸುತ್ತವೆಯಾದರೂ, ಚರ್ಮದ ವಾದ್ಯಗಳ ಹದವಾದ ಶಬ್ದ ಮೂಡಿಬರುವುದಿಲ್ಲ. ಇದೆಲ್ಲ ಕಾಲದ ಬದಲಾವಣೆ ಮತ್ತು ಅಗತ್ಯಗಳಿರಬಹುದು. ಅವುಗಳ ನೆನಪನ್ನು ದಾಖಲಿಸಿಡಲು ಇರುವ ಈ ವೇದಿಕೆಯಲ್ಲಿ ನಿಮ್ಮ ನೆನಪುಗಳನ್ನು ಹಂಚಿಕೊಳ್ಳಬಹುದು. ಅಂಥ ಕಾರ್ಯಗಳು ನಡೆಯಲಿ ಎಂದು ಆಶಿಸುತ್ತ, ಅಜ್ಜಂಪುರದ ...

78. ಹೋಳಿಗೆ ಪರೇವು

ಇಮೇಜ್
ಆತ್ಮೀಯ ಓದುಗರೇ, ಪರೇವಿನ ಕುರಿತಾಗಿ ಈ ಹಿಂದೆ ಒಂದು ಲೇಖನ ಪ್ರಕಟವಾಗಿದೆ. ಈ ತಿಂಗಳಿನಲ್ಲಿ ಶರನ್ನವರಾತ್ರಿಯ ಸಮಯದಲ್ಲಿ   ಪರೇವನ್ನು ಆಚರಿಸುವುದರಿಂದ  ಸಾಮಯಿಕವಾಗಿರುತ್ತದೆಂದು ಈ ಲೇಖನವನ್ನು ಪ್ರಕಟಿಸಲಾಗಿದೆ. ಲೇಖಕಿ ಶ್ರೀಮತಿ ಎಸ್. ರೋಹಿಣಿ ಶರ್ಮಾ ಇವರು ಓದುಗರಿಗೆ ಪರಿಚಿತರು. ಅವರು ಅಜ್ಜಂಪುರದಲ್ಲೇ ನೆಲೆಸಿದ್ದವರು. ಊರಿನ ಹಬ್ಬ-ಹರಿದಿನಗಳನ್ನು ಹತ್ತಿರದಿಂದ ಅವಲೋಕಿಸಿ, ಅವುಗಳ ಮಹತ್ವ, ಆಚರಣೆಯ ಸೌಂದರ್ಯ ಮುಂತಾದವನ್ನು ವಿವರವಾಗಿ ವಿಶ್ಲೇಷಿಸಿದ್ದಾರೆ. ವಿಶೇಷವೆಂದರೆ, ಎರಡು-ಮೂರು ದಶಕಗಳ ಹಿಂದೆ ತೆಗೆದ ಚಿತ್ರಗಳನ್ನೂ ಸಂಗ್ರಹಿಸಿಟ್ಟು ನೀಡಿರುವುದರಿಂದ ಈ ಲೇಖನ ಇನ್ನಷ್ಟು ಮಾಹಿತಿಪೂರ್ಣವಾಗಿದೆ. ಇದಕ್ಕೆಂದು ಶ್ರಮಿಸಿದ ಅವರ ಪುತ್ರ ಶ್ರೀ ಆರ್ಯಮಿತ್ರ ಹಾಗೂ ಲೇಖನವನ್ನು ಬಳಸಿಕೊಳ್ಳಲು ಅನುಮತಿ ನೀಡಿರುವುದಕ್ಕೆ ಲೇಖಕಿಗೆ ನಮ್ಮ ಕೃತಜ್ಞತೆಗಳು ಸಲ್ಲುತ್ತವೆ. ನಿಮ್ಮ ಅಭಿಪ್ರಾಯ, ಅನಿಸಿಕೆಗಳನ್ನು ಬ್ಲಾಗ್ ನ ಕಮೆಂಟ್ ಅಂಕಣದಲ್ಲಿ ನಮೂದಿಸಲು ಕೋರುತ್ತೇನೆ. ಶಂಕರ ಅಜ್ಜಂಪುರ ಸಂಪಾದಕ ಸಂಪರ್ಕ - ದೂರವಾಣಿ - 99866 72483 ಇ-ಮೇಲ್ - shankarajp@gmail.com ----------------------------------------------------------------------------------------------------------------------------------------------------------------------------------------------...

77. ಕ್ವಿಟ್ ಇಂಡಿಯಾ ಚಳವಳಿ - ಕಮ್ಮತಿಗೆ ಚನ್ನಬಸಪ್ಪನವರ ನೆನಪುಗಳು

ಇಮೇಜ್
ಇವರು ನಮ್ಮ ಊರಿನ ಹಿರಿಯರು. ಕಮ್ಮತಿಗೆ ಚನ್ನಬಸಪ್ಪ. ವೃತ್ತಿಯಿಂದ ಕಿರಾಣಿ ವ್ಯಾಪಾರದಾರರಾಗಿದ್ದರೂ, ಸಾಹಿತ್ಯ, ವಿಚಾರವಾದ, ಧಾರ್ಮಿಕ ನಿಷ್ಠೆ, ವೈಜ್ಞಾನಿಕ ವಿಚಾರಧಾರೆ ಮುಂತಾಗಿ ಅವರ ಆಸಕ್ತಿಗಳು ಹಲವು ಕಡೆ ಹಂಚಿಹೋಗಿದ್ದವು. ಹೆಚ್ಚಿನ ವಿದ್ಯಾಭ್ಯಾಸವಿಲ್ಲದಿದ್ದರೂ, ವೈಚಾರಿಕವಾಗಿ ಚಿಂತಿಸಿ ತಮ್ಮ ಸ್ಪಷ್ಟ ಅಭಿಪ್ರಾಯಗಳನ್ನು ನಮೂದಿಸುತ್ತಿದ್ದ ಚನ್ನಬಸಪ್ಪ ಕೇವಲ ತಮ್ಮ ಸಮುದಾಯದಲ್ಲಿ ಮಾತ್ರ ಪ್ರಸಿದ್ಧರಾಗಿರದೇ, ಇಡೀ ಊರಿನ ಗಮನ ಸೆಳೆದವರು. ಈ ಹಿಂದೆ ಪ್ರಕಟಿಸಿರುವ ಗೌ.ರು. ಓಂಕಾರಯ್ಯನವರ ನೆನಪುಗಳಂತೆಯೇ, ಅಜ್ಜಂಪುರದ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಅಜ್ಜಂಪುರದಲ್ಲಿ ನಡೆದ ಚಟುವಟಿಕೆಗಳ ಸಂಗ್ರಹಯೋಗ್ಯ   ಲೇಖನದ ಮುದ್ರಿತ ಅವತರಣಿಕೆಯನ್ನು ಮಿತ್ರ ಅಪೂರ್ವ ಬಸು ಹುಡುಕಿ ನಿಮ್ಮ ಓದಿಗೆಂದು ಇಲ್ಲಿ ನೀಡಿದ್ದಾರೆ. ಅವರಿಗೆ ಕೃತಜ್ಞತೆಗಳು.  ಶಂಕರ ಅಜ್ಜಂಪುರ ಸಂಪಾದಕ ದೂರವಾಣಿ - 99866 72483 ಇ-ಮೇಲ್ - shankarajp@gmail.com ---------------------------------------------------------------------------------------------------------------------------------------- --------------------------- ಕಮ್ಮತಿಗೆ ಚನ್ನಬಸಪ್ಪ ಅಜ್ಜಂಪುರದಲ್ಲಿ ವರ್ತಕರಾಗಿದ್ದವರು. ಅವರು ಜನಿಸಿದ್ದು 12-01-1917ರಲ್ಲಿ.  ಈ ವರ್ಷದವರೆಗೆ ಬದುಕಿದ್ದಿದ್ದರೆ ನೂರ...

76. ಭಾರತ ಬಿಟ್ಟು ತೊಲಗಿ - ಗೌ.ರು. ಓಂಕಾರಯ್ಯನವರ ನೆನಪುಗಳು

ಇಮೇಜ್
ಆತ್ಮೀಯ ಓದುಗರೇ, ಎಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ಕಳೆದ ಆರು ವರ್ಷಗಳ ಈ ಬ್ಲಾಗಿನ ಸಂಚಿಕೆಗಳಲ್ಲಿ ಮಧ್ಯಂತರ ಲೇಖನವನ್ನು ಪ್ರಕಟಿಸಿಲ್ಲ ಎನ್ನಬಹುದು. ಆದರೆ ಈ ವರ್ಷ, ಹಿರಿಯರೂ, ವಿದ್ಯಾಭಿಮಾನಿ ಶಿಕ್ಷಕರು, ಲೇಖಕರು, ಪುಸ್ತಕಗಳ ಪ್ರಕಾಶಕರು ಮುಂತಾಗಿ ಹಲವು ವಿಶೇಷಣಗಳಿಗೆ ನಿಜವಾಗಿ ಅರ್ಹರಾಗಿರುವ ನಮ್ಮ ತಲೆಮಾರಿನ ಗುರುಗಳಾದ ಶ್ರೀ ಗೌ.ರು. ಓಂಕಾರಯ್ಯ ನವರ ಲೇಖನ ನಿಮಗಾಗಿ ಇಲ್ಲಿದೆ. ಅವರು ಪ್ರಕಟಿಸಿರುವ ಎರಡು ಪುಸ್ತಕಗಳ ಚಿತ್ರಗಳಿವೆ. ವಿಶೇಷವೆಂದರೆ ಇವುಗಳಲ್ಲಿ ಒಂದಕ್ಕೆ ಅಜ್ಜಂಪುರದಲ್ಲಿದ್ದ ಗೀತಾ ಪ್ರಿಂಟರ್ಸ್ ಮಾಲೀಕರು ಹಾಗೂ ಸಾಹಿತ್ಯಾಭಿಮಾನಿ ಶ್ರೀ ಎ.ಪಿ. ನಾಗರಾಜಶೆಟ್ಟರು ಬರೆದಿರುವ ಹಿನ್ನುಡಿಯೂ ಇದೆ. ಹಾಗಾಗಿ ಇದು ಸ್ವಾತಂತ್ರ್ಯೋತ್ಸವದ ವಿಶೇಷ ಸಂಚಿಕೆ. ಸದಾ ಹಸನ್ಮುಖ, ವಿದ್ಯಾರ್ಥಿಗಳನ್ನು ಕಂಡರೆ ಅಪರಿಮಿತ ಪ್ರೀತಿ, ದಯಾಗುಣಗಳ ಸಾಕಾರವಾಗಿರುವ ಈ ಗುರುಗಳು ಇಂದಿಗೂ ಬದಲಾಗದೇ ಹಾಗೆಯೇ ಇದ್ದಾರೆ. ಅರ್ಧ ಶತಮಾನಗಳ ನಂತರ ಮಿತ್ರ ಅಪೂರ್ವ ಬಸು ಅವರ ಮೂಲಕ ಫೋನ್ ನಲ್ಲಿ ಅವರ ಸಂಪರ್ಕ ಸಾಧ್ಯವಾದುದಕ್ಕೆ, ನನಗೆ ಅತೀವ ಸಂತೋಷವಿದೆ.  ಇತ್ತೀಚೆಗೆ ಪ್ರಧಾನಿ ಮೋದಿ, ಭಾರತ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ತಮ್ಮ ನೆನಪುಗಳನ್ನು ದಾಖಲಿಸಲು ನೀಡಿದ ಕರೆಗೆ ಸಕ್ರಿಯರಾಗಿ ಸ್ಪಂದಿಸಿರುವ ಗೌ.ರು. ಓಂಕಾರಯ್ಯನವರ ಅಮಿತ ಉತ್ಸಾಹವನ್ನು ಎಲ್ಲರೂ ಮೆಚ್ಚುತ್ತಾರೆ. ಅವರು ಈ ಸಂದರ್ಭಕ್ಕೆಂದು ಬರೆದ ಲೇಖನವನ್ನು ...

75. ಸ್ವಾತಂತ್ರ್ಯ ಹೋರಾಟದಲ್ಲಿ ಅಜ್ಜಂಪುರದ ಪಾತ್ರ

ಇಮೇಜ್
ಆತ್ಮೀಯರೇ, ಎಲ್ಲರಿಗೂ 69ನೇ ಸ್ವಾತಂತ್ರ್ಯೋತ್ಸವದ ಶುಭಾಶಯಗಳು ದೇಶದ ಎಲ್ಲ ಊರುಗಳಂತೆಯೇ ನಮ್ಮೂರು ಅಜ್ಜಂಪುರದಲ್ಲೂ ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದಂತೆ ಹಲವಾರು ಚಟುವಟಿಕೆಗಳು ನಡೆದವು. ಅಜ್ಜಂಪುರದಲ್ಲಿ ಅಖಿಲ ಭಾರತ ಕಾಂಗ್ರೆಸ್ ಅಧಿವೇಶನ ನಡೆದಿತ್ತು ಎನ್ನುವುದು ಎಷ್ಟು ಜನರಿಗೆ ತಿಳಿದಿದೆ. ಈ ಸಂದರ್ಭದಲ್ಲಿ ಅದರಲ್ಲಿ ಭಾಗವಹಿಸಿ, ನಡೆದ ಘಟನೆಗಳನ್ನು ಈ ಸಂಚಿಕೆಯಲ್ಲಿ ದಾಖಲಿಸಲಾಗಿದೆ.   ಊರು ಈಗಿನಷ್ಟೂ ಇರದ ಆ ದಿನಗಳಲ್ಲಿ, ಇದ್ದಷ್ಟು ಕೆಲವೇ ಜನರು ಸ್ವಾತಂತ್ರ್ಯ ಚಳವಳಿಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ತಮ್ಮಿಂದಾದ ಕಾರ್ಯಗಳನ್ನು ನಿರ್ವಹಿಸಿದರು. ಅಂಥ ಹಿರಿಯರಲ್ಲಿ ಕೆಲವರು ಇಂದಿಗೂ ನಮ್ಮ ನಡುವೆ ಇದ್ದಾರೆನ್ನುವುದೇ ಸಂತಸದ ಸಂಗತಿ.  ಆ ದಿನಗಳ ನೆನಪನ್ನು ಲೇಖನದ ರೂಪದಲ್ಲಿ ದಾಖಲಿಸಿದವರು ಅಜ್ಜಂಪುರದ ಪುರಸಭಾಧ್ಯಕ್ಷರೂ, ಚಲನಚಿತ್ರಮಂದಿರದ ಮಾಲಕರಾಗಿದ್ದ ಉದ್ಯಮಿ ಶ್ರೀ ಟಿ. ಕೃಷ್ಣೋಜಿ ರಾವ್ ಚವ್ಹಾಣ್. ಅವರು ತರೀಕೆರೆಯ ಜನಪ್ರಿಯ ದೈನಿಕ ಅಂಚೆವಾರ್ತೆಗೆ ಬರೆದ ಲೇಖನವು ಮೂರು ದಶಕಗಳ   ನಂತರ ನಮ್ಮ-ನಿಮ್ಮ ಕೈಸೇರಲು ಕಾರಣರಾದವರು ಶ್ರೀಮತಿ ರೋಹಿಣಿ ಶರ್ಮಾ. ಆಗ ಬರೆದ ಲೇಖನವನ್ನೇ ಈಗ ಇತಿಹಾಸವೆನ್ನುತ್ತೇವೆ. ಸ್ವಾತಂತ್ರ್ಯಕ್ಕಾಗಿ ಇವರೊಡನೆ ಇದ್ದು ಭಾಗವಹಿಸಿದ, ಸುಬ್ರಹ್ಮಣ್ಯ ಶೆಟ್ಟರ ಬೆಂಬಲಕ್ಕೆ ಸದಾ ಕಾಲವೂ ಇರುತ್ತಿದ್ದ ಸೀತಾರಾಮಭಟ್ಟರನ್ನು ಕೃಷ್ಣೋಜಿರಾಯರು...