128) ಅಪರೂಪದ ವೈದ್ಯ ಡಾ. ನಾಗರಾಜ್
ಐದು ದಶಕಗಳ ಸಾರ್ಥಕ ಸೇವೆ - ಅಪೂರ್ವ ಅಜ್ಜಂಪುರ ಅಜ್ಜಂಪುರದ ಜಿ.ಎಂ. ಬಸಪ್ಪನವರ ಕಿರಾಣಿ ಅಂಗಡಿ ಬೆಂಚಿನ ಮೇಲೆ ಬ್ರಿಟಿಷ್ ಜೇಮ್ಸ್ ಬಾಂಡ್ ಸಿನೆಮಾ ಖ್ಯಾತಿಯ ಶಾನ್ ಕಾನರಿಯಂತೆ(Sean Connery) ದಟ್ಟ ಹಾಗೂ ದಪ್ಪವಾದ ಕಪ್ಪುಹುಬ್ಬಿನ ಒಬ್ಬ ವ್ಯಕ್ತಿ ಕುಳಿತಿದ್ದರು. ಬಿಳಿವರ್ಣದ ಅವರಿಗೆ ಅವರ ವಿಶಿಷ್ಟ ಹುಬ್ಬುಗಳು ಎರಡು ಕಮಾನುಗಳ ಆಕಾರದಲ್ಲಿ ದೃಷ್ಟಿಬೊಟ್ಟುಗಳಂತೆ ಎದ್ದು ಕಾಣಿಸುತ್ತಿದ್ದವು. ಪೂರ್ಣ ಮುಖಕ್ಷೌರ ಮಾಡಿಕೊಂಡಿದ್ದ ಆ ವ್ಯಕ್ತಿ ಅಚ್ಚ ಬಿಳಿ ಬಣ್ಣದ ತುಂಡು ತೋಳಿನ ಅಂಗಿ ಮತ್ತು ಕಡು ಛಾಯೆಯ ಪ್ಯಾಂಟ್ ಧರಿಸಿದ್ದರು . ಒಂದು ಮಳಿಗೆಯನ್ನು ತಮ್ಮ ಕ್ಲಿನಿಕ್ಕಿಗಾಗಿ ಬಾಡಿಗೆ ಪಡೆಯಲು ಬಸಪ್ಪನವರ ಬಳಿ ಬಂದಿದ್ದರು. ಅವರ ಜೊತೆ ದಾವಣಗೆರೆಯಿಂದ ಒಬ್ಬ ವ್ಯಕ್ತಿ (ಶೆಟ್ರು ಸಿದ್ದಪ್ಪನವರ ಸಂಬಂಧಿಯಂತೆ) ಬಂದಿದ್ದರು. ಬೆಂಚಿನ ಮೇಲೆ ಕುಳಿತಿದ್ದ ವ್ಯಕ್ತಿಯೇ ಬಿ.ಎಸ್. ನಾಗರಾಜ್. ಅವರು ದಾವಣಗೆರೆಯಲ್ಲಿ ಎಂ.ಬಿ.ಬಿ. ಎಸ್. ಮಾಡಿ ಕೆಲವೇ ವರ್ಷಗಳಾಗಿದ್ದವು. ಶೆಟ್ಟರ ಸಂಬಂಧಿಯಾದ ವ್ಯಕ್ತಿಯು ನಿಮ್ಮ ಮಳಿಗೆಯನ್ನು ನಾಗರಾಜ್ ಡಾಕ್ಟರಿಗೆ ಬಾಡಿಗೆ ಕೊಡಿ ಎಂದು ಶಿಫಾರಸು ಮಾಡಿದರು. ಈ ಹಿಂದೆ ಅದೇ ಮಳಿಗೆಯಲ್ಲಿ ಡಾ.ರಾಮಪ್ಪ ಎಂಬುವವರು ಕ್ಲಿನಿಕ್ ತೆರೆದಿದ್ದರು. ಹಾಗಾಗಿ ಕಿರಾಣಿ ಅಂಗಡಿ ಮತ್ತು ಪಕ್ಕದ ಮಳಿಗೆಗಳ ಮಾಲೀಕರಾದ ಜಿ.ಎಂ. ಬಸಪ್ಪನವರು ಕೂಡಲೇ ಒಪ್ಪಿದ್ದರು. ಅವರಿಗೆ ಕ