ಪೋಸ್ಟ್‌ಗಳು

16. ಕುಸಿಯುತ್ತಿರುವ ಅಮೃತ ಸೌಧ

ಇಮೇಜ್
ಅಜ್ಜಂಪುರದ  ಅಮೃತಮಹಲ್  ಪಶು ಸಂವರ್ಧನಾ ಕೇಂದ್ರ    ಇತಿಹಾಸ ಮತ್ತು ವಾಸ್ತವ ಅಜ್ಜಂಪುರದಲ್ಲಿರುವ ಅಮೃತ ಮಹಲ್  ಪಶು  ಸಂವರ್ಧನಾ   ಕೇಂದ್ರವು ನಮ್ಮ ದೇಶದ ಸಂದರ್ಭದಲ್ಲಿ ವಿಶಿಷ್ಟವಾದುದು.  ಅಜ್ಜಂಪುರದ ಅಮೃತಮಹಲ್ ಪಶು ಸಂವರ್ಧನಾ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಡಾ. ಟಿ.ಎಸ್. ಕೃಷ್ಣಮೂರ್ತಿ, (ನಿವೃತ್ತ ಜಂಟಿ ನಿರ್ದೇಶಕರು, ಪಶುಪಾಲನಾ ಇಲಾಖೆ) ಗಳನ್ನು ಕಳೆದ ಡಿಸೆಂಬರ್ ನಲ್ಲಿ ಬೆಂಗಳೂರಿನ ಮತ್ತೀಕೆರೆಯ ಅವರ ನಿವಾಸದಲ್ಲಿ ಸಂದರ್ಶಿಸಿ, ಸಂಗ್ರಹಿಸಿದ ಮಾಹಿತಿಗಳನ್ನು ಇಲ್ಲಿ ನೀಡಿದ್ದೇನೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ಕಾರ್ಯಾಲಯದಲ್ಲಿ ಕೆಲಸಮಾಡುತ್ತಿದ್ದಂತೆಯೇ, ಊರಿನ ಪ್ರಗತಿ ಮತ್ತು ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ತಮ್ಮ ಕಾರ್ಯಕ್ಷೇತ್ರದಲ್ಲಿ ಹೊಂದಿರುವ ಪರಿಣತಿಯು ವೃತ್ತಿಯ ಅವಶ್ಯಕತೆ ಇರಬಹುದಾದರೂ,  ತಮ್ಮ ಇಲಾಖೆಯು,  ರೈತರೊಡನೆ ಹೊಂದಿದ್ದ   ಸಂಬಂಧವು  ಸಾಮಾಜಿಕ ಆರೋಗ್ಯಕ್ಕೆ ಪೂರಕವಾಗಿ ಹೇಗಿತ್ತೆಂಬುದನ್ನು ನಿರೂಪಿಸಿದರು. ರೈತರಿಂದ ಇಲಾಖೆಯು ಕಲಿಯುವುದಷ್ಟೇ ಅಲ್ಲ, ರೈತರು ಈ ಇಲಾಖೆ ತಮ್ಮದೆಂಬ ಭಾವನೆ ಬೆಳೆಯಲು, ಹಿಂದಿನ ಸರಕಾರಗಳ ನೀತಿಯಿತ್ತು, ಅವುಗಳಲ್ಲಿ ಅಡಗಿದ ವಿಶಾಲ ಭಾವನೆಯನ್ನು ಅವರಿಗೆ ಮನವರಿಕೆ ಮಾಡಿಸಲು, ತಮ್ಮ ಆಡಳಿತಾವಧಿಯಲ್ಲಿ ಹೇಗೆಲ್ಲ ಕೆಲಸಮಾಡಲಾಯಿತೆಂದು ವಿವರಿಸಿದ...

15. ಆದರ್ಶ ಶಿಕ್ಷಕ ಶ್ರೀ ಎನ್. ಎಸ್. ಅನಂತರಾವ್

ಇಮೇಜ್
ಶ್ರೀ ಎನ್. ಎಸ್. ಅನಂತರಾವ್ ಕುಳ್ಳನೆಯ ನಿಲುವು , ಕಾಲೇಜಿಗೆ ಹೊರಟಾಗ ಖಾದೀ ಸೂಟು , ಮಿಕ್ಕಂತೆ ಸರಳ ಉಡುಪು , ಸದಾ ಚಿಂತನೆಯಲ್ಲಿ ತೊಡಗಿರುವಂಥ ಮುಖಭಾವ , ವಿದ್ಯಾರ್ಥಿಗಳನ್ನು ಕಂಡರೆ ಅಕ್ಕರೆಯ ಜತೆಗೆ , ಅವರು ಕಲಿಯಬೇಕಾದಷ್ಟನ್ನು ಕಲಿಯುತ್ತಿಲ್ಲವಲ್ಲ ಎಂಬ ಕಳಕಳಿ. ಇದು ನಮ್ಮೂರಿನ ಪ್ರೌಢಶಾಲೆಯ ನಿವೃತ್ತ ಮಖ್ಯೋಪಾಧ್ಯಾಯರಾಗಿದ್ದ  ನಲ್ಲೂರು ಶ್ರೀನಿವಾಸರಾವ್ ಅನಂತರಾವ್ ಅವರ ಬಾಹ್ಯಚರ್ಯೆ. ಅವರು ಗಾಂಧೀವಾದಿ. ಅಹಿಂಸೆಯಲ್ಲಿ ತುಂಬ ನಂಬಿಕೆ. ವಿದ್ಯಾರ್ಥಿಗಳು ತಪ್ಪು ಮಾಡಿದರೆ , ಅವರನ್ನು ಕುಳ್ಳಿರಿಸಿಕೊಂಡು ಅನುನಯದ ಮಾತನಾಡಿ ಪರಿವರ್ತನೆಗೆ ಒಳಗಾಗುವಂತೆ ಮಾಡುತ್ತಿದ್ದವರು.  ಅವರು ಅಜ್ಜಂಪುರಕ್ಕೆ ಸಮೀಪವಿರುವ ಶಾಂತಿಸಾಗರದ ಬಳಿಯಲ್ಲಿರುವ ನಲ್ಲೂರಿನಲ್ಲಿ  ೧೯೧೬ರಲ್ಲಿ ಜನಿಸಿದರು. ತಂದೆ ಶ್ರೀನಿವಾಸರಾವ್ , ತಾಯಿ ಪದ್ಮಾವತಿ ಬಾಯಿ. ತಮ್ಮ ತಂದೆಯನ್ನು ಚಿಕ್ಕ ವಯಸ್ಸಿನಲ್ಲೇ ಕಳೆದುಕೊಂಡ ರಾಯರು , ಅವರ ಅಣ್ಣ ಅಶ್ವತ್ಥನಾರಾಯಣ ರಾಯರ ನೆರವಿನಿಂದ ಬೆಂಗಳೂರಿನ ಇಂಟರ್ ಮೀಡಿಯೇಟ್ ಕಾಲೇಜಿನಲ್ಲಿ ವಿಜ್ಞಾನ ಪದವಿಯನ್ನು ಪಡೆದರು. ಅನತಿಕಾಲದಲ್ಲೇ ಅವರ ಅಣ್ಣನೂ ತೀರಿಕೊಂಡಾಗ , ಶಾಲಾ ಮಕ್ಕಳಿಗೆ ಮನೆಪಾಠಮಾಡುತ್ತ , ತಮ್ಮ ವಿದ್ಯಾಭ್ಯಾಸವನ್ನು ಮುಂದುವರೆಸಿ , ಮದನಪಲ್ಲಿಯಲ್ಲಿ ಬಿ.ಟಿ. ಅಧ್ಯಾಪಕ ಪದವಿಯನ್ನು ಪಡೆದರು.೧೯೩೬-೩೭ನೇ ಇಸವಿಯು ಎರಡನೇ ಮಹಾಯುದ್ಧ ನಡೆಯುತ್ತಿದ್ದ ಕಾಲ. ಈ ಸಮಯದಲ್ಲಿ ಗೋವಾದ ಟ್ರಿನಿಟಿ ಆಂಗ...

14. ಹವ್ಯಾಸಿ ರಂಗಭೂಮಿ ಕಲಾವಿದ

ಇಮೇಜ್
ಬಿ. ಎಸ್.ರಾಜಾರಾವ್ ಈ ಬ್ಲಾಗ್‌ನ್ನು ಆರಂಭಿಸುವಾಗ ಮನಸ್ಸಿನಲ್ಲಿದ್ದುದು, ಇದು ಅಜ್ಜಂಪುರದವರನ್ನು ಕುರಿತಾಗಿ ಮಾತ್ರ ಇರಬೇಕು. ಈ ನಿಲುವು ಸಂಸ್ಥೆಗಳ ಮಟ್ಟಿಗೆ ಅನ್ವಯವಾದೀತೇ ವಿನಾ ವ್ಯಕ್ತಿಗಳಿಗಲ್ಲವೆನ್ನುವುದು, ಬ್ಲಾಗ್ ಆರಂಭವಾದ  ಸ್ವಲ್ಪ ದಿನಗಳಲ್ಲೇ ಮನವರಿಕೆಯಾಯಿತು. ಏಕೆಂದರೆ, ಕೇವಲ ಸ್ಥಳೀಕರನ್ನು ಮಾತ್ರ ಪ್ರಸ್ತಾಪಿಸುತ್ತೇನೆಂದುಕೊಂಡರೆ, ಅದು ತೀರ ಪರಿಮಿತಿಗೆ ಒಳಪಟ್ಟೀತು.  ಸರ್ಕಾರಿ ನೌಕರಿ, ಉದ್ಯಮಗಳಿಗೆಂದು ಬಂದು ಸೇರಿದವರು ಕಾಲಾಂತರದಲ್ಲಿ ಸ್ಥಳೀಕರೇ ಆಗಿಹೋಗುತ್ತಾರೆ. ಇದು ಎಲ್ಲ ಊರುಗಳಲ್ಲೂ ನಡೆಯುವ ವಾಸ್ತವ. ಇದು ಈ ಕೆಳಗೆ ಪ್ರಸ್ತಾಪಿಸಿರುವ ಶ್ರೀ ರಾಜಾರಾಯರ ವಿಷಯಕ್ಕೂ ಅನ್ವಯಿಸುತ್ತದೆ. ಅವರು ಅಜ್ಜಂಪುರದ ಕೋಟೆಯ ನಿವಾಸಿಯಾಗಿದ್ದರು. ವೃತ್ತಿಯಲ್ಲಿ ಲೋಕೋಪಯೋಗಿ ಇಲಾಖೆಯಲ್ಲಿ ಮೇಸ್ತ್ರಿಯಾಗಿದ್ದರು. ನಿವೃತ್ತಿಯ ನಂತರ ಬೆಂಗಳೂರು ಸೇರಿ, ಅಲ್ಲಿಯೂ ಕೆಲಸಮಾಡುತ್ತಿದ್ದರು. ರಾಜಾರಾಯರದು ಎತ್ತರದ ತೆಳುವಾದ ನಿಲುವು, ಆಕಾರಕ್ಕೂ ಧ್ವನಿಗೂ ಸಂಬಂಧವೇ ಇಲ್ಲದಂಥ ದಪ್ಪವಾದ ಗಂಡು ದನಿ, ಗುಳಿಬಿದ್ದ ಕಣ್ಣುಗಳು , ಬಡತನವೇ ಮೂರ್ತಿವೆತ್ತಂತಿದ್ದರೂ, ಉತ್ಸಾಹದಲ್ಲಿ ಕೊರತೆಯಿರಲಿಲ್ಲ. ಅದೇ ರೀತಿ ಪರೋಪಕಾರದ ಗುಣ ಕೂಡ. ೧೯೬೦ರ ದಶಕದ ಕೊನೆಯಲ್ಲಿ ನಾವು ನಾಲ್ಕಾರು ಗೆಳೆಯರು ಎಸ್.ಎಸ್.ಎಲ್.ಸಿ. ಪರೀಕ್ಷೆ ಮುಗಿಸಿದ್ದೆವು. ಅದು ಡಿಸೆಂಬರ್ ತಿಂಗಳು. ಅದೇ ಸಮಯದಲ್ಲಿ ಅವರ ಇಲಾಖೆಯು ರಸ್ತೆಯನ್ನು ಉಪಯೋಗಿಸುವ ವಾ...

13. ಪಟ್ಟಣಗೆರೆ ಸೋದರರು

ಇಮೇಜ್
  ವೆಂಕಟಕೃಷ್ಣಯ್ಯ, ವೆಂಕಟರಾಮಯ್ಯ, ವೆಂಕಟೇಶಯ್ಯ ಮತ್ತು ಹಿರಿಯಣ್ಣಯ್ಯ ಪಟ್ಟಣಗೆರೆ ವೆಂಕಟದಾಸಪ್ಪ ಪಟ್ಟಣಗೆರೆ ವೆಂಕಟದಾಸಪ್ಪ ನವರು ಅಜ್ಜಂಪುರದಲ್ಲಿದ್ದವರು. ಅವರು ಖಾದಿ ಗ್ರಾಮೋದ್ಯೋಗ ಸಂಘದಲ್ಲಿ ಕೆಲಸಮಾಡುತ್ತಿದ್ದವರು. ಅವರ ಪತ್ನಿ ಗೌರಮ್ಮನವರು. ವೆಂಕಟದಾಸಪ್ಪ ದಂಪತಿಗಳ ಜೀವನ ಬಡತನದಿಂದ ಕೂಡಿದ್ದಾದರೂ, ಅದೊಂದು ಕೊರತೆ ಎಂದು ಎನ್ನಿಸದಂತೆ ಬದುಕಿದರು. ಇವರನ್ನು ನಾನು ನೋಡುವಾಗ ಅವರೀರ್ವರೂ ವೃದ್ಧಾಪ್ಯ ತಲುಪಿದ್ದರು.  ಅವರಿಗೆ ೬ ಜನ ಮಕ್ಕಳು. ಅವರೆಂದರೆ ಗಂಡುಮಕ್ಕಳಾದ ವೆಂಕಟಕೃಷ್ಣಯ್ಯ, ವೆಂಕಟರಾಮಯ್ಯ, ವೆಂಕಟೇಶಯ್ಯ ಮತ್ತು ಹಿರಿಯಣ್ಣಯ್ಯ ಹಾಗೂ ಹೆಣ್ಣಮಕ್ಕಳು ವಿಶಾಲಾಕ್ಷಮ್ಮ ಮತ್ತು ರುಕ್ಮಿಣಮ್ಮ.  ಇವರೆಲ್ಲರ ಪ್ರಸ್ತಾಪವೇಕೆಂದರೆ ಇವರೆಲ್ಲರೂ ಸಾಮಾನ್ಯರಲ್ಲಿ ಸಾಮಾನ್ಯರಾಗಿದ್ದರೂ, ಕೆಲವು ಕ್ಷೇತ್ರಗಳಲ್ಲಿ ವಿಶೇಷ ತಿಳುವಳಿಕೆ ಹೊಂದಿದ್ದವರು. ಅವರ ಸಾಧನೆಯನ್ನು ಗುರುತಿಸುವ ಕೆಲಸ ನಡೆಯಲಿಲ್ಲವಾದರೂ, ಅವರೆಲ್ಲರೂ ಮಾನವ ಪ್ರೀತಿ, ಸಾಹಿತ್ಯ ಮತ್ತು ಕಲೆಗಳ ಬಗ್ಗೆ ಅಪಾರ ಅಭಿಮಾನ ಹೊಂದಿದವರು ಮತ್ತು ಜನಾನುರಾಗಿ ವ್ಯಕ್ತಿತ್ವವುಳ್ಳವರು.  ಹಿರಿಯರಾದ ವೆಂಕಟಕೃಷ್ಣಯ್ಯನವರು ತಮ್ಮ ಜೀವಿತದ ಬಹುಕಾಲವನ್ನು ಮೈಸೂರಿನಲ್ಲೇ ಕಳೆದರು. ರಾಮಾಯಣ ಮತ್ತು ಮಹಾಭಾರತಗಳೆರಡೂ ಅವರಿಗೆ ಅತ್ಯಂತ ಪ್ರಿಯವಾದ ವಿಷಯಗಳು. ಈ ಮಹಾಕಾವ್ಯಗಳ ಬಗ್ಗೆ ಅಧ್ಯಯನ ನಡೆಸಿ, ಕೈ ಬರವಣಿಗೆಯಲ್ಲಿ ತಮ್ಮ ಅಧ್ಯಯನವನ್ನು...

12. ಅಜ್ಜಂಪುರ ಗ್ರಾಮದೇವತೆ ಕಿರಾಳಮ್ಮ - ಐತಿಹ್ಯ - ಸ್ಥಳಪುರಾಣ - ಚರಿತ್ರೆ

ಇಮೇಜ್
ಅಜ್ಜಂಪುರಕ್ಕೆ ಸಂಬಂಧಿಸಿದ ಈ ಬ್ಲಾಗ್ ಗ್ರಾಮದೇವತೆಯಿಂದಲೇ ಆರಂಭವಾಗುವಂತಿದ್ದರೆ ಔಚಿತ್ಯಪೂರ್ಣವಾಗಿರುತ್ತಿತ್ತು. ಪ್ರಸ್ತುತ ಲೇಖನವನ್ನು ಬಹಳ ಹಿಂದೆಯೇ ಗೆಳೆಯ ಮಂಜುನಾಥ ಅಜ್ಜಂಪುರ ಸಿದ್ಧಪಡಿಸಿಟ್ಟಿದ್ದರು. ಆದರೆ ಅದು ದೊರೆತದ್ದು ಈಗ.  ಆರಂಭಕ್ಕೇ ಪ್ರಕಟಿಸಬೇಕಿದ್ದ ಈ ಲೇಖನ ತಡವಾಗಿಯಾದರೂ ಪ್ರಕಟವಾಗುತ್ತಿದೆ.  ನೀವೆಲ್ಲರೂ ಗಮನಿಸಿರಬಹುದಾದಂತೆ ವಿಕಿಪೀಡಿಯಾ ನೀಡಿರುವ ಮಾಹಿತಿಯಲ್ಲಿ ಅಜ್ಜಂಪುರಕ್ಕೆ ಕೇರಳ ಎಂಬ ಹೆಸರಿತ್ತು. ಕೇರಳ, ಕಿರಾಳಿಪುರ ಇತ್ಯಾದಿ ಬದಲಾವಣೆಗಳಾಗಿ, ಈಗಿರುವ "ಅಜ್ಜಂಪುರ" ಎಂಬ ಹೆಸರು ಹೇಗೆ ಬಂದಿತೆಂಬುದರ ಬಗ್ಗೆಯೂ ಈ ಹಿಂದೆ ಅವರೇ ಬರೆದಿರುವ ಲೇಖನವಿದೆ. ಈ ವಿಷಯದ ಬಗ್ಗೆ ಇನ್ನಷ್ಟು ಐತಿಹಾಸಿಕ ಮಾಹಿತಿಗಳು ದೊರೆಯುವಂತಾದರೆ ಕಳಿಸಿಕೊಡಿ.  ಈ ಲೇಖನದ ಜತೆಯಲ್ಲಿ ನಾನು ಸಂಗ್ರಹಿಸಿದ ಕಿರಾಳಮ್ಮ ದೇವಿಯ ಈಗಿರುವ ವಿಗ್ರಹ, ಉತ್ಸವ ಮೂರ್ತಿಯ ಚಿತ್ರಗಳು, ಮಂಜುನಾಥ ಅಜ್ಜಂಪುರ ಇವರು ಇತ್ತೀಚೆಗೆ ತೆಗೆದಿರುವ ಕಿರಾಳಮ್ಮ ದೇವಾಲಯದ ಛಾಯಾಚಿತ್ರಗಳಿವೆ.                                                  ಗರ್ಭ ಗುಡಿಯಲ್ಲಿರುವ ಕಿರಾಳಮ್ಮನ ಮೂಲ ವಿಗ್ರಹ   ಕಿರಾಳಮ್ಮನ ಉತ್ಸವ ಮೂರ್ತಿ  ಅಜ್ಜಂಪು...

11. ಭಗವದ್ಗೀತಾ ಅಧ್ವರ್ಯು

ಇಮೇಜ್
ಅಜ್ಜಂಪುರದ ಶಿವಾನಂದಾಶ್ರಮ  ಮತ್ತು  ಶ್ರೀ ಶಂಕರಾನಂದ ಸ್ವಾಮೀಜಿ   ಅಜ್ಜಂಪುರದ ಶ್ರೀ ಸತ್ಯನಾರಾಯಣ ಶೆಟ್ಟರು ಅಜ್ಜಂಪುರದಲ್ಲಿ ಪ್ರಸಿದ್ಧ ವರ್ತಕರು. ಅವರ ಸಹೋದರ ಶ್ರೀ ಸುಬ್ರಹ್ಮಣ್ಯ ಶೆಟ್ಟರನ್ನು ಹಿಂದಿನ ಸಂಚಿಕೆಗಳಲ್ಲಿ ಪರಿಚಯಿಸಲಾಗಿದೆ.  ಇವರನ್ನು ಕಳೆದ ಡಿಸೆಂಬರ್‌ನಲ್ಲಿ ಅವರ ಅಳಿಯ ಹಾಗೂ ನನ್ನ ಗೆಳೆಯ ರಮಾನಂದರ ಮನೆಯಲ್ಲಿ ಸಂದರ್ಶಿಸಿದೆ. ಅವರಿಗೆ ಈಗ ವಯಸ್ಸು ೯೦. ಅವರ ಅದ್ಭುತ ನೆನಪಿನ ಶಕ್ತಿ ಮತ್ತು ಚಟವಟಿಕೆಗಳಿಗೆ ವಯಸ್ಸು ಅಡ್ಡಿಬಂದಿಲ್ಲ.  ಅಜ್ಜಂಪುರ ಸತ್ಯನಾರಾಯಣ ಶೆಟ್ಟರು ಮತ್ತು ಶಂಕರ ಅಜ್ಜಂಪುರ  ತಮ್ಮ ಅಗಾಧ ನೆನಪಿನ ಸಂಗ್ರಹದಿಂದ ಅಜ್ಜಂಪುರದ ಶಿವಾನಂದಾಶ್ರಮದ ಇತಿಹಾಸವನ್ನು ಕೆಲವೊಮ್ಮೆ ಉತ್ಸಾಹದಿಂದ, ಕೆಲವೊಮ್ಮೆ ಅದರ ಈಗಿನ ದುಸ್ಥಿತಿಗಾಗಿ ಮರುಗಿ ಹೇಳಿರುವ ವಿವರಗಳು ಇಲ್ಲಿವೆ. ಸತ್ಯನಾರಾಯಣ ಶೆಟ್ಟರ ನೆನಪುಗಳ ನಿರಂತರ ಹರಿವಿನೊಡನೆ, ಅವರ ಸೊಗಸಾದ ಮತ್ತು ಶುದ್ಧವಾದ ಕನ್ನಡದ ನಿರೂಪಣೆಯನ್ನು ಧ್ವನಿಮುದ್ರಿಸಿಕೊಂಡು, ಅದನ್ನು ಬರಹರೂಪಕ್ಕೆ ತಂದಿರುವುದಷ್ಟೇ ನಾನು ಮಾಡಿರುವ ಕೆಲಸ.  "ಯಾರಾದರೂ ಈ ಕೆಲಸ ಮಾಡಬೇಕಿತ್ತು, ಅದನ್ನು ನೀವು ಮಾಡುತ್ತಿದ್ದೀರಿ, ಕಂಪ್ಯೂಟರಿನಲ್ಲಿ ದಾಖಲಿಸಿದ್ದು ಯಾವ ಕಾಲಕ್ಕೂ ಇರುತ್ತದೆ ಎಂದು ಹೇಳುವುದನ್ನು ಕೇಳಿದ್ದೇನೆ. ನಿಮ್ಮ ಪ್ರಯತ್ನ ಯಶಸ್ವಿಯಾಗಲಿ" ಎಂದು ತುಂಬುಹೃದಯದಿಂದ ಈ ಹಿರಿಯರು ಹರಸಿದ್ದಾರೆ.  ಈ ಲೇ...

10. ವಿಶಿಷ್ಟ ವನಪಾಲಕ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿ (ಭಾಗ-2)

ಇಮೇಜ್
 ಭಾಗ 2 ಅಜ್ಜಂಪುರ ಕೃಷ್ಣಸ್ವಾಮಿಗಳ ಬಗ್ಗೆ ಎರಡನೆ ಕಂತಿನ ಲೇಖನ ಇಲ್ಲಿ ಪ್ರಕಟವಾಗಿದೆ. ಈ ಸಂಚಿಕೆಯಲ್ಲಿ ಅವರ ಆತ್ಮಕಥೆ "ಬಾಳ ಹರಿವು" ಗ್ರಂಥದಿಂದ ಅಜ್ಜಂಪುರ ಮತ್ತು ಸುತ್ತಮುತ್ತಲ ಪ್ರದೇಶಕ್ಕೆ ಸಂಬಂಧಿಸಿದಂತೆ ಇರುವ ವಿವರಗಳನ್ನು ನೀಡಲಾಗಿದೆ. ಈ ಪುಸ್ತಕವನ್ನು ಓದುತ್ತಿದ್ದರೆ , ಸರಿಸುಮಾರು , ಶತಮಾನದ ಹಿಂದಿನ ಜೀವನಶೈಲಿ ಮತ್ತು ರೂಢಿಗತ ಸಂಪ್ರದಾಯಗಳು , ಶಿಷ್ಟಾಚಾರಗಳ ಪರಿಚಯ ಇಂದಿನ ತಲೆಮಾರಿಗೆ ತಿಳಿಯುವಂತಿದೆ."ಅವರ ಭಾಷಾ ಶೈಲಿ , ನಿರೂಪಣೆಗಳನ್ನು  ಓದುಗರು ಆಸ್ವಾದಿಸುತ್ತಾರೆಂಬ ನಂಬಿಕೆ ನನ್ನದು. ನಾನು ಅವರನ್ನು ಸಂದರ್ಶಿಸಿ , ಬ್ಲಾಗ್‌ನಲ್ಲಿ ಅವರ ಬಗೆಗೆ ಲೇಖನ ಬರೆಯುತ್ತೇನೆಂದು ಹೇಳಿದಾಗ , ಅವರು " ನನ್ನ ಬಗ್ಗೆ ತಾವೇನಾದರೂ ಬರೆಯುವ ಸಂದರ್ಭವಿದ್ದರ ಅದು ಬೇಡ ಎಂಬುದೇ ನನ್ನ ಮನವಿ. ಇದನ್ನು ನಾನು ಸೌಜನ್ಯಕ್ಕಾಗಿ ಬರೆಯುತ್ತಿಲ್ಲ. ದಿಗ್ಗಜರ ಮುಂದೆ , ಸಾಮಾನ್ಯರಲ್ಲಿ ನಾನು ಹತ್ತರಲ್ಲಿ ನಾನು ಒಬ್ಬ , ಬ್ಲಾಗ್‌ನಲ್ಲಿ ಮೂಡಿಬರುವಷ್ಟು ಹಿರಿಮೆಯಿಲ್ಲ " ಎಂದು ಹೇಳಿದ್ದಲ್ಲದೆ , ಪತ್ರವನ್ನೂ ಬರೆದರು. ಹಿಂದಿನ ಸಂಚಿಕೆಯನ್ನು ಓದಿದ ಅನೇಕ ಹಿರಿಯರು ನನಗೆ ಫೋನ್ ಮಾಡಿ , ತೀರ ಅಪರೂಪದ ವ್ಯಕ್ತಿಯನ್ನು , ನಾವು ಕೇವಲ ಕೇಳಿತಿಳಿದಿದ್ದ ಮಹನೀಯರ ಬಗ್ಗೆ ಇಂಥ ಪರಿಚಯಾತ್ಮಕ ಲೇಖನ ಬರೆದುದು , ಅತ್ಯಂತ ಸಮರ್ಪಕ , ಎಂದು ತಿಳಿಸಿದರು. ಇದೀಗ ಮುಂದೆ ಓದಿ. ನಿಮ್ಮ ಪ್ರತಿಕ್ರಿಯೆಗಳನ್ನು ದಾಖಲಿಸಿ. ...

09. ವಿಶಿಷ್ಟ ವನಪಾಲಕ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿ

ಇಮೇಜ್
ಹಿಂದಿನ ಸಂಚಿಕೆಯಲ್ಲಿ ಪ್ರಸ್ತಾಪಿಸಿದ್ದಂತೆ, ಈ ಸಂಚಿಕೆಯಲ್ಲಿ ನಿವೃತ್ತ ಅರಣ್ಯಮುಖ್ಯಾಧಿಕಾರಿ ಶ್ರೀ ಅಜ್ಜಂಪುರ ಕೃಷ್ಣಸ್ವಾಮಿಗಳ ಪರಿಚಯ ಲೇಖನ ಇಲ್ಲಿದೆ . ಅವರ ಸಾಧನೆ , ಸಾಮಾಜಿಕ ಕಾಳಜಿಗಳನ್ನು ಬಿಂಬಿಸುವ ಹಲವಾರು ಅಂಶಗಳನ್ನು ನೀವು ಇಲ್ಲಿ ಗುರುತಿಸಬಹುದು . ಅವರ ಹಿರಿಯರು ಕಳೆದ ಶತಮಾನದ ಆದಿಭಾಗದಲ್ಲಿ ಅಜ್ಜಂಪುರದ ನಿವಾಸಿಗಳಾಗಿದ್ದವರು . ಕಾಲಾಂತರದಲ್ಲಿ ಈ ಕುಟುಂಬದ ಸದಸ್ಯರು ರಾಜ್ಯದ , ದೇಶದ ಹಾಗೂ ವಿಶ್ವದ ಅನೇಕ ಎಡೆಗಳಿಗೆ ತೆರಳಿ ಸಾಧನೆ ಮಾಡಿದರು . ಈ ಎಲ್ಲ ಹಂತಗಳಲ್ಲೂ ತಮ್ಮ ಹುಟ್ಟೂರಿನ ಬಗೆಗಿನ ಅಭಿಮಾನವನ್ನು ಅವರಾರೂ ಮರೆಯಲಿಲ್ಲವೆನ್ನುವುದು ವಿಶೇಷ . ಸರಳ , ಸಜ್ಜನಿಕೆಯ ಜತೆಜತೆಗೇ , ತಮಗನ್ನಿಸಿದುದನ್ನು ನಿರ್ಭಿಡೆಯಿಂದ ಹೇಳುವ , ಅರಣ್ಯ , ಪರಿಸರ ಮತ್ತು ಮಾನವೀಯತೆಗಳ ಬಗ್ಗೆ ಕಳಕಳಿಹೊಂದಿರುವ ೮೭ರ ಹರೆಯದ ಅಜ್ಜಂಪುರ ಕೃಷ್ಣಸ್ವಾಮಿಗಳು ಉತ್ತಮ ಅಭಿರುಚಿಯ ಪ್ರತೀಕ . ಅವರನ್ನು ಬೆಂಗಳೂರಿನ ಬಿ . ಟಿ . ಎಂ . ಲೇಔಟ್‌ನ ಅವರ ನಿವಾಸಕ್ಕೆ ಹೋಗಿ ಸಂದರ್ಶಿಸಿದೆ . ಅವರು ನೀಡಿರುವ ಅಪರೂಪದ ಛಾಯಾಚಿತ್ರಗಳು , ಲೇಖನಗಳು ಕಳೆದು ಹೋದ ಕಾಲದ ಸಿರಿಯನ್ನು ನೆನಪಿಸುತ್ತವೆ . " ಅನುಭವದ ಬೆಂಬಲ ಇರುವಷ್ಟು ದೂರಕ್ಕೆ ನನಗೆ ನೆನಪಾದುದನ್ನೆಲ್ಲ ನನ್ನ ಬರಹಗಳಲ್ಲಿ ದಾಖಲಿಸಿದ್ದೇನೆ . ಇವು ಯುವ ಪೀಳಿಗೆಗೆ ಮಾದರಿಯಾದೀತು ಎಂಬ ಆಶಯ ನನ್ನದು , ಅವರು ಅದನ್ನು ಸದುಪಯೋಗ ಮಾಡಿಕೊಂಡರೆ ನನ್ನ ಬರಹ ಸಾರ್ಥಕವಾದಂತೆ . ಈ ಬರಹಗಳಲ...

08. ಸಾಹಸಿ ಕನ್ನಡಿಗ - ಅಜ್ಜಂಪುರ ಸರ್ಕಸ್ ಸುಬ್ಬರಾವ್

ಇಮೇಜ್
    ಹಿರಿಯ   ಪತ್ರಕರ್ತ   ಗರುಡನಗಿರಿ   ನಾಗರಾಜರು   ಅಜ್ಜಂಪುರದವರೇನೂ   ಅಲ್ಲ .   ಆದರೆ   ಅವರು   ನಾಡು - ನುಡಿಯ   ಬಗ್ಗೆ   ತಳೆದ   ವಿಶಾಲ   ದೃಷ್ಟಿಕೋನ   ಎಲ್ಲರೂ   ಅನುಸರಿಸುವಂಥದು .   ಅವರೊಂದು   ಸಂದರ್ಶನದಲ್ಲಿ   ಹೇಳಿದ್ದರು   : "   ಕರ್ನಾಟಕದಲ್ಲಿ   27000   ಕ್ಕೂ   ಹೆಚ್ಚು   ಹಳ್ಳಿಗಳಿವೆ .   ನಾನು   ಕನಿಷ್ಠ   20000   ಹಳ್ಳಿಗಳನ್ನಾದರೂ   ಸುತ್ತಿರುವೆ .   ಅಲ್ಲಿನ   ವಿಶೇಷಗಳು ,   ಜನ ,   ಸಂಸ್ಕೃತಿಗಳ   ಬಗ್ಗೆ   ಅಧ್ಯಯನ   ಮಾಡುವ   ಅವಕಾಶಗಳನ್ನು   ಅರಸಿಹೋದೆ .   ಹೀಗಾಗಿ   ನಮ್ಮದೇ   ಪ್ರದೇಶಗಳ   ವೈವಿಧ್ಯ ,   ಪ್ರತಿಭೆಗಳು   ಕಣ್ಣಿಗೆ   ಕಾಣುವಂತಾಯಿತು .   ಇದು   ಪತ್ರಕರ್ತರಿಗೆ   ಅತ್ಯವಶ್ಯ .   ಕುಳಿತಲ್ಲೇ   ವರದಿ   ಸಿದ್ಧಪಡಿಸುವ   ಕ್ರಮ   ಸೂಕ್ತವಲ್ಲ ."   ಅವರ   ಅಧ್ಯಯನಶೀಲತೆಯಿಂದಾಗಿಯೇ   ಕನ್ನಡಿಗರು   ಮರೆತುಬಿಡಬಹುದಾಗಿದ್ದ   ಸರ್ಕಸ್   ಸುಬ್ಬರಾಯರ   ಸಾಹಸಗಾಥೆ   ...