ಪೋಸ್ಟ್‌ಗಳು

ಅಜ್ಜಂಪುರದ ಪ್ರಥಮ ದರ್ಜೆ ಕಾಲೇಜಿನ ನೆನಪು

ಇಮೇಜ್
ಅತ್ಮೀಯ ಓದುಗರೇ, ಈ ಸಂಚಿಕೆಯಲ್ಲಿ ಪ್ರಕಟವಾಗಿರುವ ಪ್ರಸ್ತುತ ಲೇಖನ ಅಜ್ಜಂಪುರದ ಪ್ರಥಮ ದರ್ಜೆ ಕಾಲೇಜನ್ನು ಕುರಿತಾಗಿದ್ದು, ಪ್ರಸ್ತುತ ಲೇಖನವನ್ನು ಸರಕಾರೀ ಪ್ರಥಮ ದರ್ಜೆ ಕಾಲೇಜಿನ ಬೆಳ್ಳಿಹಬ್ಬ ಮಹೋತ್ಸವ - 2012-13 ರಲ್ಲಿ ಪ್ರಕಟವಾದ ಅನ್ವೇಷಣೆ ಸ್ಮರಣ ಸಂಚಿಕೆಯಿಂದ ಆರಿಸಲಾಗಿದೆ.  ಅಜ್ಜಂಪುರದಲ್ಲಿ ವಿದ್ಯಾಭ್ಯಾಸಕ್ಕೆ ಒದಗಿದ ಅನುಕೂಲಗಳು, ಹಂತ ಹಂತವಾಗಿ ಬೆಳೆದು ಬಂದ ಬಗೆಗಳು ಹಿಂದಿನ ಲೇಖನಗಳಲ್ಲಿ ಪ್ರಕಟವಾಗಿದೆ. ಇವುಗಳನ್ನು ಒಟ್ಟಾಗಿ ಓದುವಾಗ ಊರಿನಲ್ಲಿ ವಿದ್ಯಾಭ್ಯಾಸದ ಅನುಕೂಲತೆಗಳು ಸಾಗಿಬಂದ ದಾರಿಯನ್ನು ಬಿಚ್ಚಿಡುತ್ತವೆ.  ಪ್ರಸ್ತುತ ಲೇಖನವನ್ನು ಗೆಳೆಯ ಶ್ರೀ ಅಜ್ಜಂಪುರ ಮಲ್ಲಿಕಾರ್ಜುನರು ಸ್ವಪ್ರೇರಣೆಯಿಂದ ನೀಡಿದ್ದಾರೆ. ಇದು ಅನುಕರಣೀಯ ನಡೆ. ನಾನು ಪದೇ ಪದೇ ವಿನಂತಿಸುತ್ತಿರುವಂತೆ, ಓದುಗರು ಅಜ್ಜಂಪುರಕ್ಕೆ ಸಂಬಂಧಿಸಿದ ಯಾವುದೇ ಲೇಖನ, ವಿವರಗಳನ್ನು ಚಿತ್ರಗಳ ಸಹಿತ ಕಳಿಸಲು ಕೋರುತ್ತೇನೆ.   ಬಸವೇಶ್ವರ ಕಲ್ಯಾಣ ಮಂದಿರದ ಕಟ್ಟಡದಲ್ಲಿಯೂ ಕೆಲವು ತಿಂಗಳು ಕಾಲೇಜು ನಡೆಯಿತು.  ಲೇಖಕರು :   ಶ್ರೀ ಅಜ್ಜಂಪುರ ಮಲ್ಲಿಕಾರ್ಜುನ, ಎಮ್.ಎ., (ಎಲ್.ಎಲ್.ಬಿ.)  ಉಪಾಧ್ಯಕ್ಷರು, ಹಳೆಯ ವಿದ್ಯಾರ್ಥಿಗಳ ಸಂಘ  ದೂರವಾಣಿ : ೯೪೮೦೧೫೦೫೪೨  ಈ ಮೇಲ್ : ajjmalli.1971@gmail.com            ¥ÀæwA...

ನೆನಪಿನಂಗಳದಿಂದ.............

ಇಮೇಜ್
ಆತ್ಮೀಯರೇ,  ಜೂನ್ 30 ನನ್ನ 60ನೇ ಜನ್ಮದಿನ, ಜತೆಗೆ ವೃತ್ತಿ ಜೀವನಕ್ಕೆ ವಿದಾಯ  ಕೂಡ.  ಮುಂದಿನ ವಿಶ್ರಾಂತ ಜೀವನದಲ್ಲಿ ಇ-ಚಟುವಟಿಕೆಗಳಲ್ಲಿ ಇನ್ನಷ್ಟು ಸಕ್ರಿಯನಾಗಿರಲು ಅವಕಾಶ !  ಸದ್ಯಕ್ಕೆ    ಸಕ್ರಿಯವಾಗಿಲ್ಲದ ನನ್ನ ಇನ್ನೊಂದು   ಬ್ಲಾಗ್  "ನಾನು-ನೀವು" - ಇದರಲ್ಲಿ ಮತ್ತಷ್ಟು ತೊಡಗಿಸಿಕೊಳ್ಳುವ ಇರಾದೆಯೂ ಇದೆ. ನಿಮ್ಮ  ಜತೆ ನನ್ನ ಪಯಣ ಮುಂದುವರೆಯುತ್ತಿರಲಿ  !  ವಂದನೆಗಳೊಡನೆ, ಶಂಕರ ಅಜ್ಜಂಪುರ ಈ ಸಂಚಿಕೆಯಲ್ಲಿ ಬರಹಕ್ಕಿಂತ ಹೆಚ್ಚು ಚಿತ್ರ ಸಂಗ್ರಹವಿದೆ. ಆಂಜನೇಯ ದೇವಾಲಯದ ನವೀಕರಣ ಸಂದರ್ಭದಲ್ಲಿ ಮೂಲೆ ಸೇರಿ ಹೋಗಬಹುದಾಗಿದ್ದ  ಈ ಚಿತ್ರಗಳನ್ನು , ಇಂಥ ವಿಷಯಗಳ ಬಗ್ಗೆ ನನ್ನಷ್ಟೇ ಆಸ್ಥೆ ಹೊಂದಿರುವ ದೇವಾಲಯದ ಈಗಿನ ಅರ್ಚಕರಾದ ಬಿ.ಎನ್. ಮಾಧವ ರಾವ್ ಇವರ ಸಹಕಾರದಿಂದ    ನಾನು   ಸಂಗ್ರಹಿಸಿದೆ. ನಂತರ ಇವುಗಳನ್ನು ಗಣಕಯಂತ್ರದಲ್ಲಿ   ಸೂಕ್ತವಾಗಿ   ಪರಿಷ್ಕರಿಸಿ    ಇಲ್ಲಿ ಪ್ರಕಟಿಸಿರುವೆ.   ಅಜ್ಜಂಪುರದ ಕೋಟೆ ಆಂಜನೇಯ ದೇವಾಲಯದಲ್ಲಿ 1980 ರಲ್ಲಿ ನಡೆದ ರಾಮತಾರಕ ಹೋಮ ಮತ್ತು ಅಜ್ಜಂಪುರಕ್ಕೆ ಶೃಂಗೇರಿಯ ಶ್ರೀಗಳು ಭೇಟಿ ನೀಡಿದಾಗಿನ  ಚಿತ್ರಗ ಳು   ಇಲ್ಲಿ ವೆ. ಇದರಲ್ಲಿ ನಿಮ್ಮ ಪರಿಚಿತರು ಅನೇಕರಿರಬಹುದು , ಅವರಲ್ಲಿ ಕೆಲವರು ಈಗ ನಮ್ಮೊಡನೆ ಇಲ್ಲದಿರಬಹು...

ಕುರುಕ್ಷೇತ್ರದಲ್ಲಿ ಕನ್ನಡದ ಭಗವದ್ಗೀತೆ

ಇಮೇಜ್
ಆತ್ಮೀಯ ಓದುಗರೇ, ನಿಮ್ಮ ಪ್ರೋತ್ಸಾಹ ತಿಂಗಳಿಂದ ತಿಂಗಳಿಗೆ ಹೆಚ್ಚುತ್ತಿರುವುದು ಸ್ವಾಭಾವಿಕವಾಗಿ ನನಗೆ ತುಂಬ ಸಂತೋಷ ತಂದಿದೆ. ಓದುಗರ ಸಂಖ್ಯೆ ಹೆಚ್ಚುವುದರೊಂದಿಗೆ ನಿಮ್ಮ ಪ್ರತಿಕ್ರಿಯೆಗಳು ಕಮೆಂಟ್ ಕಲಂ ನಲ್ಲಿ ನಮೂದಾಗಲಿ. ಇದು ಬ್ಲಾಗ್ ಮೌಲ್ಯವನ್ನು ಹೆಚ್ಚಿಸುವುದರೊಂದಿಗೆ ನಿಮ್ಮ ಸಕ್ರಿಯ ಭಾಗವಹಿಸುವಿಕೆ ದಾಖಲಾಗುತ್ತದೆ.  ಈ ವಿಷಯದಲ್ಲಿ ಮೊದಲಿನಿಂದಲೂ ತಾವು ಊರಿನ ಬಗ್ಗೆ ಬರೆದ ಲೇಖನಗಳನ್ನು ಪ್ರಕಟಿಸಲು ಅನುಮತಿ ನೀಡಿ, ಪ್ರೋತ್ಸಾಹ ನೀಡುತ್ತಿರುವ ಪ್ರೀತಿಯ ಗೆಳೆಯ ಮಂಜುನಾಥ ಅಜ್ಜಂಪುರ ಅವರು ಈ ಸಂಚಿಕೆಗಾಗಿ  PÀÄgÀÄPÉëÃvÀæzÀ°è PÀ£ÀßqÀzÀ ¨sÀUÀªÀ¢ÎÃvÉ  ಎಂಬ ಲೇಖನವನ್ನು ಕಳಿಸಿದ್ದಾರೆ. ಗೀತೋಪದೇಶ ಸ್ಥಳದಲ್ಲಿ ಮಂಜುನಾಥ ಅಜ್ಜಂಪುರ  ತಮ್ಮೆಲ್ಲರಲ್ಲಿ  ಈ ಹಿಂದೆಯೂ   ಮನವಿ ಮಾಡಿದಂತೆ, ಅಜ್ಜಂಪುರದಲ್ಲಿ ನಡೆಯುವ ಕಾರ್ಯಕ್ರಮಗಳು, ವ್ಯಕ್ತಿ ಮಾಹಿತಿಗಳನ್ನು ನೀಡಲು ಕೋರುತ್ತಿರುವೆ. ಮಾನ್ಯ ಮಾಡುವಿರೆಂದು ಆಶಿಸುತ್ತೇನೆ. - ಶಂಕರ  ಅಜ್ಜಂಪುರ PÀÄgÀÄPÉëÃvÀæzÀ°è PÀ£ÀßqÀzÀ ¨sÀUÀªÀ¢ÎÃvÉ - ಮಂಜುನಾಥ ಅಜ್ಜಂಪುರ  ಹರ್ಯಾಣಾದಲ್ಲಿ  ಕನ್ನಡದ ಭಗವದ್ಗೀತೆ  ¤ªÀÄä «µÀAiÀÄ £À£ÀUÉ CµÉÆÖAzÀÄ ZÉ£ÁßV w½AiÀÄzÀÄ. ²±ÀĪÁVzÁÝUÀ ªÉÆzÀ®Ä CªÀiÁä JAzÉÆÃ, C¥Áà JAzÉÆÃ ¤ÃªÀÅ vÉÆzÀ®Ä £ÀÄr Dg...

26. ಶ್ರೀ ಸತ್ಯನಾರಾಯಣ ಶೆಟ್ಟರ ಇನ್ನಷ್ಟು ನೆನಪುಗಳ ಸಂಗ್ರಹ

ಅಜ್ಜಂಪುರದ ಬಗ್ಗೆ ಶ್ರೀ ಸತ್ಯನಾರಾಯಣ ಶೆಟ್ಟರ ಇನ್ನಷ್ಟು ನೆನಪುಗಳ ಸಂಗ್ರಹ ಇಲ್ಲಿದೆ. ಇತ್ತೀಚೆಗೆ ಅವರು ನೀಡಿರುವ ವಿವಿಧ   ಮಾಹಿತಿಗಳನ್ನು ಆಧರಿಸಿದ   ಈ ಬರಹವನ್ನು   ನಿಮ್ಮ ಓದಿಗಾಗಿ ಇಲ್ಲಿ ನೀಡಿದ್ದೇನೆ.   ಸಮಾಜದಲ್ಲಿ ಎಲ್ಲ ಕಾಲಕ್ಕೂ ಒಳ್ಳೆಯವರು ಕೆಟ್ಟವರು ಇರುತ್ತಾರೆ.   ವಿವಿಧ   ಜಾತಿ , ಜನಾಂಗಗಳಲ್ಲಿ ದುಷ್ಟರು ಇಲ್ಲವೆಂದಲ್ಲ. ಅದನ್ನು ಆಯಾ ಸಮಾಜದವರು ಹೇಳಿಕೊಳ್ಳುವ ಮನೋಧರ್ಮ ತೋರಬೇಕಷ್ಟೆ. ಒಳಿತಿನಂತೆ ಕೆಡುಕನ್ನೂ ಹೇಳಿಕೊಳ್ಳುವುದು ರೂಢಿಯಾಗಬೇಕು. ಬ್ರಾಹ್ಮಣರಲ್ಲಿ ಈ   ಕೆಳಗಿನ   ಈರ್ವರನ್ನು ಕುರಿತಾಗಿನ ಪ್ರಸ್ತಾಪ ಆಗೀಗ ಬಂದುಹೋಗುವುದುಂಟು.    ಅಜ್ಜಂಪುರದ ಕೆಲವು ಮಹನೀಯರನ್ನು ನೆನಪಿಸಿಕೊಂಡಿರುವಂತೆ ಕುಖ್ಯಾತರನ್ನೂ  ಈ ಭಾಗದಲ್ಲಿ  ನೆನಪಿಸಿಕೊಂಡಿದ್ದೇನೆ.   ಅವರು ಅಂದಿಗೆ ಕುಖ್ಯಾತರಾದರೂ , ಇಂದು ನಡೆಯುತ್ತಿರುವ ಅಪರಾಧಗಳ ಮುಂದೆ ಅವರದೇನೂ ಅಲ್ಲ. ಹಾಗೆಂದು ಕ್ಷಮಾರ್ಹವೂ ಅಲ್ಲ. ಸೊಕ್ಕೆ ಗಿರಿಯಪ್ಪನೆಂಬಾತನು ಜಾತಿಯಿಂದ ಬ್ರಾಹ್ಮಣ. ಕೇವಲ ಜಾತಿಯಿಂದ ಶ್ರೇಷ್ಟತೆ ಬರುವುದಿಲ್ಲವಷ್ಟೆ. ವ್ಯಕ್ತಿಯ ನಡವಳಿಕೆಯನ್ನು ಜನರು ಮೆಚ್ಚುವರೇ ವಿನಾ ಅವನ ಕುಲ-ಅಂತಸ್ತುಗಳನ್ನಲ್ಲ. ಗಿರಿಯಪ್ಪನು ದುಷ್ಟಸಹವಾಸಕ್ಕೆ ಬಿದ್ದುದರ ಪರಿಣಾಮವಾಗಿ ಮದ್ಯವ್ಯಸನ , ದುಂಡಾವರ್ತಿಗಳನ್ನು ಬೆಳೆಸಿಕೊಂಡಿದ್ದ. ಪೇಟೆಯ ಬೀದಿಯಲ್ಲಿ ಸುತ್ತುತ್ತ ಅಂಗಡಿ...

24. ಶ್ರೀ ಅಜ್ಜಂಪುರ ಲಕ್ಷ್ಮಣಶಾಸ್ತ್ರಿ ಸುಬ್ರಹ್ಮಣ್ಯ ಶಾಸ್ತ್ರಿಗಳು

ಇಮೇಜ್
ಶ್ರೀ ಅ.ಲ.ಸು. ಶಾಸ್ತ್ರಿ ದಂಪತಿಗಳು  ಶ್ರೀ ಶಾಸ್ತ್ರಿಗಳ ಜತೆ ಸಂದರ್ಶನ  ನಮ್ಮೊಡನಿರುವ ಅಜ್ಜಂಪುರದ ಅತ್ಯಂತ ಹಿರಿಯರೆಂದರೆ ಬಹುಶಃ ಶ್ರೀ ಅಜ್ಜಂಪುರ ಲಕ್ಷ್ಮಣಶಾಸ್ತ್ರಿ ಸುಬ್ರಹ್ಮಣ್ಯ ಶಾಸ್ತ್ರಿಗಳು. ಅಗಸ್ಟ್ ೧೦ , ೧೯೧೯ರಲ್ಲಿ ಜನಿಸಿದ ೯೪ರ ಹರೆಯದ ಶಾಸ್ತ್ರಿಗಳು ಮೂಲತಃ ಅಜ್ಜಂಪುರದವರೆನ್ನುವುದು ಇಂದಿನ ತಲೆಮಾರಿಗೆ ತಿಳಿಯದಿರುವ ಸಂಗತಿ. ನಾನು ಅವರನ್ನು ಹಿಂದೊಮ್ಮೆ ನೋಡಿದ್ದೆ ಮತ್ತು ಅವರ ಬಗ್ಗೆ ಕೇಳಿದ್ದೆನಾದರೂ , ಅವರ ಸಾಧನೆಯ ಹಲವು ಮುಖಗಳ ಪರಿಚಯವಿರಲಿಲ್ಲ.  ಕನ್ನಡ ಮತ್ತು ಸಂಸ್ಕೃತ ಸಾಹಿತ್ಯಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಈ ವಿದ್ವಾಂಸರನ್ನು ಪರಿಚಯಿಸುವ ಉದ್ದೇಶದಿಂದ ಅವರ ಪುತ್ರ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀ ಕುಮಾರ್ ಅವರನ್ನು ಸಂಪರ್ಕಿಸಿದಾಗ ಅವರು ತಮ್ಮ ತಂದೆಯನ್ನು ಕುರಿತಾದ ಮಾಹಿತಿಗಳನ್ನು ನೀಡಿದರು. ಇದಲ್ಲದೆ ನಾನು  ಇತ್ತೀಚೆಗೆ  ಕಡೂರಿಗೆ ತೆರಳಿ  ಶಾ ಸ್ತ್ರಿಗಳನ್ನು ಸಂದರ್ಶಿಸಿದೆ.  ಅದನ್ನಿಲ್ಲಿ ಪ್ರಕಟಿಸಿರುವೆ. ಶ್ರೀ ಅಳಸಿಂಗ ಪ್ರಶಸ್ತಿ  ಶಾಸ್ತ್ರಿಗಳು ತಮ್ಮ ಬಾಲ್ಯವನ್ನು ಮಚ್ಚೇರಿಯ ಸಮೀಪದ ವಗ್ಗನಹಳ್ಳಿ ಎಂಬಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ , ಕಡೂರಿನ ಸರಕಾರೀ ಶಾಲೆಯಲ್ಲಿ ಮಾಧ್ಯಮಿಕ ಶಾಲೆಗೆ ಸೇರಿದರು. ಅಂದಿನ ದಿನಗಳಲ್ಲಿ ವೇದಜ್ಞಾನಕ್ಕೆ ತುಂಬ ಮಹತ್ವವಿತ್ತು. ವೇದವಿದರಾದ ಜನರೂ ಹೆಚ್ಚಿದ್ದ ವಾತಾವ...

23. ಈರ್ವರು ಹಿರಿಯರು

ಇಮೇಜ್
ಜೋಗಿ ತಿಮ್ಮಯ್ಯ ೧೯೩೦-೪೦ರ   ದಶಕದಲ್ಲಿ   ಅಜ್ಜಂಪುರ ಜೋಗಿ ತಿಮ್ಮಯ್ಯನವರು ಧನಿಕರು. ಲೇವಾದೇವಿಯ ವ್ಯವಹಾರ ಇಟ್ಟಕೊಂಡಿದ್ದರು. ಪ್ರತಿ ವಾರಕ್ಕೆ ನೂರು ರೂಪಾಯಿಗಳಿಗೆ ಹತ್ತು ರೂಪಾಯಿ ಬಡ್ಡಿ ಪಡೆಯುತ್ತಿದ್ದರು. ಆದರೆ ಅದೆಲ್ಲಕ್ಕೂ ಕಾಗದ ಪತ್ರಗಳ ಜಂಜಾಟವಿರುತ್ತಿರಲಿಲ್ಲ. ಕೇವಲ ನಂಬಿಕೆ , ವಿಶ್ವಾಸಗಳೇ ಆಧಾರ. ವ್ಯಕ್ತಿಯ ಪ್ರಾಮಾಣಿಕತೆಯನ್ನು ಸರಿಯಾಗಿ ಗುರುತಿಸಿ ಅವರೊಡನೆ ವ್ಯವಹರಿಸುತ್ತಿದ್ದರು.  ಅವರನ್ನು ರಾಮೇ ತಿಮ್ಮಣ್ಣನೆಂದೂ ಕರೆಯುತ್ತಿದ್ದರು. ಹೆಚ್ಚು ವಿದ್ಯಾಭ್ಯಾಸ ಮಾಡಿರದ ತಿಮ್ಮಯ್ಯನವರಲ್ಲಿ ಜೀವಕಾರುಣ್ಯ ಹೆಚ್ಚಾಗಿತ್ತು. ಎತ್ತುಗಳು , ಹಸುಗಳು ರೈತರ ಜೀವನಾಡಿಯೆಂದು ತಿಳಿದಿದ್ದರು. ಅವುಗಳ ಆರೋಗ್ಯ ಚೆನ್ನಾಗಿದ್ದರೆ , ರೈತನ ಜೀವನವೂ ಹಸನಾಗಿರುತ್ತದೆಂಬುದು ಅವರ ನಂಬಿಕೆ. ಇದಕ್ಕೆಂದೇ ಅಜ್ಜಂಪುರದಲ್ಲಿ ಪಶುವೈದ್ಯ ಶಾಲೆಯನ್ನು ನಿರ್ಮಿಸಲು ಮುಂದಾಗಿ , ಅದರಲ್ಲಿ ಯಶಸ್ವಿಯಾದರು. ಇತ್ತೀಚೆಗೆ ಒಂದು ಚಿತ್ರವನ್ನು ನೋಡಿದೆ. ಅದರಲ್ಲಿ ಜೋಗಿ ತಿಮ್ಮಯ್ಯನವರು ,  ಸುಬ್ರಹ್ಮಣ್ಯಶೆಟ್ಟರು   ಮತ್ತು    ಶೆಟ್ರು ಸಿದ್ದಪ್ಪನವರ   ಭಾವಚಿತ್ರಗಳನ್ನು ಒಟ್ಟಾಗಿ ಜೋಡಿಸಿಟ್ಟಿರುವ ಅರ್ಥಪೂರ್ಣ ಚಿತ್ರವದು. ಅಜ್ಜಂಪುರದ ಬೆಳವಣಿಗೆಗೆ ಪ್ರತ್ಯಕ್ಷ-ಪರೋಕ್ಷವಾಗಿ ನೆರವಾದ ಈ ಮಹನೀಯರನ್ನು ಇಂದಿನ ಪೀಳಿಗೆ ಸ್ಮರಿಸಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ. ಚಿತ್ರ ಕೃಪೆ :  ...