ಪೋಸ್ಟ್‌ಗಳು

24. ಶ್ರೀ ಅಜ್ಜಂಪುರ ಲಕ್ಷ್ಮಣಶಾಸ್ತ್ರಿ ಸುಬ್ರಹ್ಮಣ್ಯ ಶಾಸ್ತ್ರಿಗಳು

ಇಮೇಜ್
ಶ್ರೀ ಅ.ಲ.ಸು. ಶಾಸ್ತ್ರಿ ದಂಪತಿಗಳು  ಶ್ರೀ ಶಾಸ್ತ್ರಿಗಳ ಜತೆ ಸಂದರ್ಶನ  ನಮ್ಮೊಡನಿರುವ ಅಜ್ಜಂಪುರದ ಅತ್ಯಂತ ಹಿರಿಯರೆಂದರೆ ಬಹುಶಃ ಶ್ರೀ ಅಜ್ಜಂಪುರ ಲಕ್ಷ್ಮಣಶಾಸ್ತ್ರಿ ಸುಬ್ರಹ್ಮಣ್ಯ ಶಾಸ್ತ್ರಿಗಳು. ಅಗಸ್ಟ್ ೧೦ , ೧೯೧೯ರಲ್ಲಿ ಜನಿಸಿದ ೯೪ರ ಹರೆಯದ ಶಾಸ್ತ್ರಿಗಳು ಮೂಲತಃ ಅಜ್ಜಂಪುರದವರೆನ್ನುವುದು ಇಂದಿನ ತಲೆಮಾರಿಗೆ ತಿಳಿಯದಿರುವ ಸಂಗತಿ. ನಾನು ಅವರನ್ನು ಹಿಂದೊಮ್ಮೆ ನೋಡಿದ್ದೆ ಮತ್ತು ಅವರ ಬಗ್ಗೆ ಕೇಳಿದ್ದೆನಾದರೂ , ಅವರ ಸಾಧನೆಯ ಹಲವು ಮುಖಗಳ ಪರಿಚಯವಿರಲಿಲ್ಲ.  ಕನ್ನಡ ಮತ್ತು ಸಂಸ್ಕೃತ ಸಾಹಿತ್ಯಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ ಈ ವಿದ್ವಾಂಸರನ್ನು ಪರಿಚಯಿಸುವ ಉದ್ದೇಶದಿಂದ ಅವರ ಪುತ್ರ ಬೆಂಗಳೂರಿನಲ್ಲಿ ನೆಲೆಸಿರುವ ಶ್ರೀ ಕುಮಾರ್ ಅವರನ್ನು ಸಂಪರ್ಕಿಸಿದಾಗ ಅವರು ತಮ್ಮ ತಂದೆಯನ್ನು ಕುರಿತಾದ ಮಾಹಿತಿಗಳನ್ನು ನೀಡಿದರು. ಇದಲ್ಲದೆ ನಾನು  ಇತ್ತೀಚೆಗೆ  ಕಡೂರಿಗೆ ತೆರಳಿ  ಶಾ ಸ್ತ್ರಿಗಳನ್ನು ಸಂದರ್ಶಿಸಿದೆ.  ಅದನ್ನಿಲ್ಲಿ ಪ್ರಕಟಿಸಿರುವೆ. ಶ್ರೀ ಅಳಸಿಂಗ ಪ್ರಶಸ್ತಿ  ಶಾಸ್ತ್ರಿಗಳು ತಮ್ಮ ಬಾಲ್ಯವನ್ನು ಮಚ್ಚೇರಿಯ ಸಮೀಪದ ವಗ್ಗನಹಳ್ಳಿ ಎಂಬಲ್ಲಿ ಪ್ರಾಥಮಿಕ ವಿದ್ಯಾಭ್ಯಾಸವನ್ನು ಮುಗಿಸಿ , ಕಡೂರಿನ ಸರಕಾರೀ ಶಾಲೆಯಲ್ಲಿ ಮಾಧ್ಯಮಿಕ ಶಾಲೆಗೆ ಸೇರಿದರು. ಅಂದಿನ ದಿನಗಳಲ್ಲಿ ವೇದಜ್ಞಾನಕ್ಕೆ ತುಂಬ ಮಹತ್ವವಿತ್ತು. ವೇದವಿದರಾದ ಜನರೂ ಹೆಚ್ಚಿದ್ದ ವಾತಾವ...

23. ಈರ್ವರು ಹಿರಿಯರು

ಇಮೇಜ್
ಜೋಗಿ ತಿಮ್ಮಯ್ಯ ೧೯೩೦-೪೦ರ   ದಶಕದಲ್ಲಿ   ಅಜ್ಜಂಪುರ ಜೋಗಿ ತಿಮ್ಮಯ್ಯನವರು ಧನಿಕರು. ಲೇವಾದೇವಿಯ ವ್ಯವಹಾರ ಇಟ್ಟಕೊಂಡಿದ್ದರು. ಪ್ರತಿ ವಾರಕ್ಕೆ ನೂರು ರೂಪಾಯಿಗಳಿಗೆ ಹತ್ತು ರೂಪಾಯಿ ಬಡ್ಡಿ ಪಡೆಯುತ್ತಿದ್ದರು. ಆದರೆ ಅದೆಲ್ಲಕ್ಕೂ ಕಾಗದ ಪತ್ರಗಳ ಜಂಜಾಟವಿರುತ್ತಿರಲಿಲ್ಲ. ಕೇವಲ ನಂಬಿಕೆ , ವಿಶ್ವಾಸಗಳೇ ಆಧಾರ. ವ್ಯಕ್ತಿಯ ಪ್ರಾಮಾಣಿಕತೆಯನ್ನು ಸರಿಯಾಗಿ ಗುರುತಿಸಿ ಅವರೊಡನೆ ವ್ಯವಹರಿಸುತ್ತಿದ್ದರು.  ಅವರನ್ನು ರಾಮೇ ತಿಮ್ಮಣ್ಣನೆಂದೂ ಕರೆಯುತ್ತಿದ್ದರು. ಹೆಚ್ಚು ವಿದ್ಯಾಭ್ಯಾಸ ಮಾಡಿರದ ತಿಮ್ಮಯ್ಯನವರಲ್ಲಿ ಜೀವಕಾರುಣ್ಯ ಹೆಚ್ಚಾಗಿತ್ತು. ಎತ್ತುಗಳು , ಹಸುಗಳು ರೈತರ ಜೀವನಾಡಿಯೆಂದು ತಿಳಿದಿದ್ದರು. ಅವುಗಳ ಆರೋಗ್ಯ ಚೆನ್ನಾಗಿದ್ದರೆ , ರೈತನ ಜೀವನವೂ ಹಸನಾಗಿರುತ್ತದೆಂಬುದು ಅವರ ನಂಬಿಕೆ. ಇದಕ್ಕೆಂದೇ ಅಜ್ಜಂಪುರದಲ್ಲಿ ಪಶುವೈದ್ಯ ಶಾಲೆಯನ್ನು ನಿರ್ಮಿಸಲು ಮುಂದಾಗಿ , ಅದರಲ್ಲಿ ಯಶಸ್ವಿಯಾದರು. ಇತ್ತೀಚೆಗೆ ಒಂದು ಚಿತ್ರವನ್ನು ನೋಡಿದೆ. ಅದರಲ್ಲಿ ಜೋಗಿ ತಿಮ್ಮಯ್ಯನವರು ,  ಸುಬ್ರಹ್ಮಣ್ಯಶೆಟ್ಟರು   ಮತ್ತು    ಶೆಟ್ರು ಸಿದ್ದಪ್ಪನವರ   ಭಾವಚಿತ್ರಗಳನ್ನು ಒಟ್ಟಾಗಿ ಜೋಡಿಸಿಟ್ಟಿರುವ ಅರ್ಥಪೂರ್ಣ ಚಿತ್ರವದು. ಅಜ್ಜಂಪುರದ ಬೆಳವಣಿಗೆಗೆ ಪ್ರತ್ಯಕ್ಷ-ಪರೋಕ್ಷವಾಗಿ ನೆರವಾದ ಈ ಮಹನೀಯರನ್ನು ಇಂದಿನ ಪೀಳಿಗೆ ಸ್ಮರಿಸಿಕೊಂಡಿರುವುದು ಔಚಿತ್ಯಪೂರ್ಣವಾಗಿದೆ. ಚಿತ್ರ ಕೃಪೆ :  ...

22. ಅಜ್ಜಂಪುರದ ಒಂದು ಕೌಟುಂಬಿಕ ಸಮಾವೇಶ

ಇಮೇಜ್
ಆತ್ಮೀಯ ಓದುಗರೆಲ್ಲರಿಗೂ ನೂತನ ವರ್ಷದ ಶುಭಾಶಯಗಳು  ಸರಿಯಾಗಿ ವರ್ಷದ ಹಿಂದೆ ಬೆಂಗಳೂರಿನ ಯಶವಂತಪುರದಲ್ಲಿರುವ ಗಾಯತ್ರೀ ದೇವಾಲಯದಲ್ಲಿ ಅಜ್ಜಂಪುರಕ್ಕೆ ಸೇರಿದ ಹಿರಿಯ ದಂಪತಿಗಳ ಸ್ಮರಣಾರ್ಥ ಕಾರ್ಯಕ್ರಮವೊಂದು ನಡೆಯಿತು. ಅಜ್ಜಂಪುರಕ್ಕೆಂದೇ ಮೀಸಲಾದ ಈ ಬ್ಲಾಗ್‌ನಲ್ಲಿ ಇದರಲ್ಲಿ ಭಾಗವಹಿಸಿದ ಯಾರೂ ಬರೆಯಬಹುದಿತ್ತು. ಅದು ನಡೆದ ಅಲ್ಪಕಾಲದಲ್ಲೇ ಇದರ ವರದಿಯನ್ನು ಪ್ರಕಟಿಸಬಹುದಿತ್ತು. ಆದರೆ ಆ ಕೆಲಸ ನಡೆಯಲಿಲ್ಲವಾಗಿ, ಅದನ್ನಿಲ್ಲಿ ಈಗ ಪ್ರಸ್ತಾಪಿಸುತ್ತಿರುವೆ.  ಇದನ್ನೊಂದು ಆಕ್ಷೇಪವೆಂದು ತಿಳಿಯುವ ಅಗತ್ಯವಿಲ್ಲ. ಊರಿಗೆ ಸಂಬಂಧಿಸಿದಂತೆ, ಇಂಥ ಅನೇಕ ಕಾರ್ಯಕ್ರಮಗಳು ನಡೆಯುತ್ತಿರುತ್ತದೆ. ಅವುಗಳ ಕಿರುವರದಿಗಳು ಬ್ಲಾಗ್‌ನಲ್ಲಿ ಪ್ರಕಟವಾಗುವಂತಾದರೆ, ಬಾಂಧವ್ಯ ವೃದ್ಧಿಯಾಗಲು ಸಹಕಾರಿಯಾಗುತ್ತದೆ ಎನ್ನುವುದಷ್ಟೇ ಆಶಯ.  ಈ ಕಾರ್ಯಕ್ರಮವನ್ನು ಆಯೋಜಿಸಿದವರು, ಅಜ್ಜಂಪುರದ ಶ್ರೀಮತಿ ಪುಟ್ಟಮ್ಮ ಮತ್ತು ಶ್ರೀ ಶಂಕರಭಟ್ಟರ ಕುಟುಂಬದವರು. ಇವರು ಅಜ್ಜಂಪುರದ ಮಾಜಿ ಪುರಸಭಾಧ್ಯಕ್ಷ ಶ್ರೀ ಸೀತಾರಾಮಭಟ್ಟರ ತಂದೆ ತಾಯಿಗಳು.  ಬೆಂಗಳೂರಿನ ಖ್ಯಾತ ಮುದ್ರಣ ಉದ್ಯಮಿ  ಪಯೋನಿಧಿ ಪ್ರಿಂಟರ್ಸ್‌ನ ಮಾಲಿಕರಾದ ಶ್ರೀ ವೆಂಕಟರಾಮಯ್ಯನವರು  ಇವರನ್ನು ಕುರಿತಂತೆ ಕಿರುಪುಸ್ತಕವನ್ನು  ಈ ಸಂದರ್ಭದಲ್ಲಿ ಬಿಡುಗಡೆಮಾಡಿದರು. ಇದರ ಆಯ್ದ ಭಾಗಗಳನ್ನು ಮುಂದೆ ಪ್ರಕಟಿಸುವ ಉದ್ದೇಶವಿದೆ. ಅತ್ಯಂತ ಸ...

21. ಕತ್ತೆ ಕವಾಡ

ಇಮೇಜ್
ಸೌದೆ ಸಂಕಟಕ್ಕೊಂದು ಪರಿಹಾರ !  ಈಗ ಎಂಥ ಕುಗ್ರಾಮದಲ್ಲೂ ಅಡಿಗೆ ಅನಿಲ ದೊರೆಯುತ್ತಿದೆ, ವಿದ್ಯುತ್ ಶಕ್ತಿಯಿದೆ. ಈ ಹಂತ ತಲುಪುವ ವೇಳೆಗೆ ಉರುವಲಿಗೆಂದು ನಮ್ಮ ಹಿರಿಯರು ಪಡುತ್ತಿದ್ದ ಕಷ್ಟ-ತೊಂದರೆಗಳನ್ನು ಗಮನಿಸಿದರೆ ನಾವಿಂದು ಸುಖವಾಗಿ ಇದ್ದೇವೆ ಎನ್ನಬೇಕು. ನಾಲ್ಕಾರು ದಶಕಗಳ ಹಿಂದೆ ಇಂಧನಕ್ಕೆಂದು ಜನರು ಸೌದೆಯನ್ನು ಬಳಸುವುದು ಅನಿವಾರ್ಯವಾಗಿತ್ತು. ಹಾಗೆ ಅಂದು ಕಾಡನ್ನು ಕಡಿದು ನೆಲಸಮ ಮಾಡಿದ ಪರಿಣಾಮವೇ ಇಂದು ಪರ್ಯಾಯ ವ್ಯವಸ್ಥೆಗಳು ಬರಲು ಕಾರಣವಾಯಿತು. ಬದಲಾವಣೆ ಸ್ವಾಭಾವಿಕ. ಅದನ್ನು ತಡೆಯಲು ಯಾರಿಂದಲೂ ಆಗದು ಎನ್ನುವುದು ಬೇರೆ ಮಾತು.  ಅಜ್ಜಂಪುರದಲ್ಲಿ ೬೦ರ ದಶಕದ ಸುಮಾರಿಗೇ ಸೌದೆಯ ಅಭಾವ ಕಾಣಿಸಿಕೊಂಡಿತ್ತು. ಸೌದೆಯ ಸಗಟು ವ್ಯಾಪಾರ ಮಾಡಲಾಗದ ಬಡಜನ, ರಸ್ತೆಗಳ ಬದಿಗಳಲ್ಲಿ ಇರುತ್ತಿದ್ದ ಸಾಲುಮರಗಳಿಂದ ಉರುವಲನ್ನು ಹೊಂದಿಸಿಕೊಳ್ಳುತ್ತಿದ್ದರು. ಅಜ್ಜಂಪುರದ ಅಮೃತಮಹಲ್ ಫಾರಂನ ರಸ್ತೆಯಲ್ಲಿ ಹುಣಸೆ, ಆಲ, ಅತ್ತಿಯ ಮರಗಳನ್ನು ಉದ್ದಕ್ಕೂ ನೆಟ್ಟು ಬೆಳೆಸಲಾಗಿತ್ತು. ೫೦-೬೦ರ ವಯಸ್ಸಿನ ಆ ಹೆಮ್ಮರಗಳ ಮುರಿದ ರೆಂಬೆ-ಕೊಂಬೆಗಳು ಬಡಜನರ ಅಗತ್ಯಗಳನ್ನು ಪೂರೈಸುತ್ತಿದ್ದವು. ಕಾಲ ಬದಲಾದಂತೆ ಜನಸಂಖ್ಯೆ ಹೆಚ್ಚಾದಂತೆ ಅದೇ ಮರಗಳ ಕಾಂಡಗಳನ್ನು ನಿಧಾನವಾಗಿ ಕೆತ್ತಿ ತೆಗೆಯುವ ಕಾಯಕ ಆರಂಭವಾಯಿತು. ಸ್ವಾಭಾವಿಕವಾಗಿ ಒಣಗಿಹೋದ ಮರಗಳು ಮರೆಯಾಗಿ ಹೋದವು.  ಅಜ್ಜಂಪುರ ಭೌಗೋಳಿಕವಾಗಿ ಬಯಲು ಸೀಮೆಗೆ ಸೇರಿದ ಪ್ರದೇಶ. ಇಂಧ...

20. ನಮ್ಮ ಅಧ್ಯಾಪಕರು

ಇಮೇಜ್
ಗುರು ಸ್ಮರಣೆ  ಆತ್ಮೀಯ ಓದುಗರೇ, ಎಲ್ಲರಿಗೂ ಐವತ್ತೇಳನೆಯ ಕನ್ನಡ ರಾಜ್ಯೋತ್ಸವದ ಶುಭಾಶಯಗಳು. ಅಜ್ಜಂಪುರದ ಪ್ರೌಢಶಾಲೆಯ ಬಗ್ಗೆ ಕಳೆದ ತಿಂಗಳು ಒಂದು ಲೇಖನ ಪ್ರಕಟವಾಗಿದೆ. ಇದೇ ಸರಣಿಯಲ್ಲಿ ಮುಂದುವರೆಯುತ್ತ, ೧೯೬೭-೬೯ ಸುಮಾರಿನಲ್ಲಿ ಆ ಶಾಲೆಯಲ್ಲಿದ್ದ ಕೆಲ ಅಧ್ಯಾಪಕರು ಮತ್ತು ಅವರ ವಿಶೇಷತೆಗಳ ಬಗ್ಗೆ ಒಂದು ಚಿಕ್ಕ ನೆನಪು ಇಲ್ಲಿದೆ.  ಅಜ್ಜಂಪುರದ ಪ್ರೌಢಶಾಲೆಗೆ ಆಗಿದ್ದ ಹೆಸರು ಶೆಟ್ರ ಸಿದ್ಧಪ್ಪ ತಾಲೂಕ್ ಬೋರ್ಡ್ ಹೈಸ್ಕೂಲ್. ಇದನ್ನು ಸಂಕ್ಷಿಪ್ತವಾಗಿ ಎಸ್.ಎಸ್.ಟಿ.ಬಿ. ಹೈಸ್ಕೂಲ್ ಎಂದು ಕರೆಯಲಾಗುತ್ತಿತ್ತು. ಈ ಶಾಲೆಗೆ ಆಧಾರವಾಗಿ ನಿಂತ ಶೆಟ್ರ ಸಿದ್ಧಪ್ಪನವರ ಬಗೆಗೂ ಈ ಹಿಂದೆ ಈ ಬ್ಲಾಗ್‌ನಲ್ಲಿ ಲೇಖನವೊಂದು ಪ್ರಕಟವಾಗಿದೆ. ಅಂತೆಯೇ ಶಾಲೆಯ ತಮ್ಮ ಸೇವಾವಧಿಯನ್ನು ಇಲ್ಲಿಯೇ ಪೂರ್ಣಗೊಳಿಸಿ ನಿವೃತ್ತರಾದ ಮುಖ್ಯೋಪಾಧ್ಯಾಯರಾಗಿದ್ದ ಎನ್. ಎಸ್. ಅನಂತರಾಯರ ಕುರಿತಾದ ಲೇಖನವೂ ಪ್ರಕಟಗೊಂಡಿದೆ. ಹಿಂದಿನ ಸಂಚಿಕೆಗಳನ್ನು ಗಮನಿಸಿರದ ಓದುಗರಿಗೆಂದು ಈ ಮಾಹಿತಿ. ಈ ಕಾಲಘಟ್ಟದಲ್ಲಿ ಅನಂತರಾಯರ ಸಹೋಪಾಧ್ಯಾಯ ರಾಗಿದ್ದವರ ಕುರಿತಾದ ನೆನಪುಗಳು ಇಲ್ಲಿದೆ.  ಕನ್ನಡ ಪಂಡಿತರೆಂಬ ಪ್ರತ್ಯೇಕ ಭಾಷಾ ಅಧ್ಯಾಪಕರು ಈಗಿನ ಶಿಕ್ಷಣ ವ್ಯವಸ್ಥೆಯಲ್ಲಿ ಮಾಯವಾಗಿದ್ದಾರೆ . ಆಗ ಕನ್ನಡದ ಬೋಧನೆಗೆಂದು ಇದ್ದವರು ಎಂ.ಬಿ. ಪಾರ್ಥಸಾರಥಿ ಅಯ್ಯಂಗಾರ್ಯರು. ನಾವು ಈ ಶಾಲೆಯಲ್ಲಿ ಓದುತ್ತಿದ್ದಾಗ, ಬಿ.ಎಂ.ಶ್ರೀ. ಪ್ರೊ.ಹಿರಿಯ...

19. ಕಲಾ ಸೇವಾ ಸಂಘ, ಅಜ್ಜಂಪುರ

ಇಮೇಜ್
ಕಲಾಮಾತೆ ಎಲ್ಲರನ್ನೂ ಕೈ ಬೀಸಿ ಕರೆಯುತ್ತಾಳೆ. ಆದರೆ ಕೆಲವರನ್ನು ಮಾತ್ರ ಎತ್ತಿಕೊಳ್ಳುತ್ತಾಳೆ.   - ಅ.ನ.ಕೃ. ವ್ಯಕ್ತಿಗಳಿಗೆ ಸಂಬಂಧಿಸಿದಂತೆ ಅಂದು ಅನಕೃ ಹೇಳಿದ್ದ ಈ ಮಾತು ಒಂದು ಊರಿನ ಮಟ್ಟಿಗೆ ನಿಜವಾಗಿದ್ದರ ಉದಾಹರಣೆಯು ಅಜ್ಜಂಪುರಕ್ಕೆ ಸರಿಯಾಗಿ ಹೊಂದಿ ಕೊಳ್ಳುತ್ತದೆ. ಏಕೆಂದರೆ ೧೯೩೫ರ ಹಿಂದಕ್ಕೆ ನಮ್ಮೂರಿನಲ್ಲಿ ರಂಗಚಟುವಟಿಕೆಗಳು ನಡೆದ ದಾಖಲೆಗಳಿಲ್ಲ. ಹೇಳಿಕೊಳ್ಳುವಂತಹ ಕಲಾಭಿರುಚಿಯ ವಾತಾವರಣ ವಾಗಲೀ, ಅದಕ್ಕೆ ಪೂರಕವಾದ ಅವಕಾಶಗಳಾಗಲೀ ಇಲ್ಲದಿದ್ದ ಕಾಲವದು. ಆಗ ಊರು ಈಗಿರುವುದಕ್ಕಿಂತ ಚಿಕ್ಕದಾಗಿದ್ದುದೂ ಸ್ವಾಭಾವಿಕ. ಇಂಥ ಹಿನ್ನೆಲೆಯಲ್ಲಿ ಅಜ್ಜಂಪುರದ ಕಲಾ ಸೇವಾ ಸಂಘದ ಆರಂಭದ ದಿನಗಳಿಂದ ಹಿಡಿದು ಇಂದಿನವರೆಗೆ ಪ್ರತ್ಯಕ್ಷಸಾಕ್ಷಿಯಾಗಿದ್ದು, ಅದರ ಉನ್ನತಿಗೆ ದುಡಿದ ಅಜ್ಜಂಪುರದ ಹಿರಿಯ ವರ್ತಕ, ಕಲಾಭಿಮಾನಿ ಶ್ರೀ ಸತ್ಯನಾರಾಯಣ ಶೆಟ್ಟರ ನಿರೂಪಣೆ ಇಲ್ಲಿದೆ. ೯೧ ವರ್ಷಗಳ ಹಿರಿಯರಾದ ಅವರ ನೆನಪಿನ ಬುತ್ತಿಯಲ್ಲಿ ಊರಿಗೆ ಸಂಬಂಧಿಸಿದ ಹಲವಾರು ಸಂಗತಿಗಳಿವೆ. ತಾವು ಕಂಡ ಜನರು, ಭಾಗವಹಿಸಿದ ಕಾರ್ಯಕ್ರಮಗಳು, ಅವರ ನೆನಪಿನಲ್ಲಿ ಸಂಗ್ರಹಿತವಾಗಿವೆ. ಉತ್ತಮ ನಿರೂಪಕರಾಗಿರುವ ಅವರ ಸಂದರ್ಶನದ ಭಾಗವನ್ನು ಅವರದೇ ನುಡಿಯಲ್ಲಿ ಸಂಗ್ರಹಿಸಿ ಇಲ್ಲಿ ನೀಡಲಾಗಿದೆ. ಅವರ ಧ್ವನಿಯನ್ನು ಮುದ್ರಣಮಾಡಿ ಒದಗಿಸಿದ ಗೆಳೆಯ ರಮಾನಂದರಿಗೆ  ಕೃತಜ್ಞತೆಗಳು.    ಚಿತ್ರ-ಲೇಖನ :   ಶಂಕರ ಅಜ್ಜಂಪುರ  ...

18. ನಮ್ಮ ಶಾಲೆ

ಇಮೇಜ್
ಅಜ್ಜಂಪುರದ  ಆರ್.ಇ.ಎ. ಪ್ರೌಢಶಾಲೆಯಿಂದ ಶೆಟ್ರು ಸಿದ್ದಪ್ಪನವರ  ಸರಕಾರೀ ಪದವೀ ಪೂರ್ವಕಾಲೇಜಿನವರೆಗೆ -ಅಪೂರ್ವ ಈ ಲೇಖನವನ್ನು ಮಿತ್ರ ಜಿ.ಬಿ. ಅಪ್ಪಾಜಿ (ಅಪೂರ್ವ)ಯವರು ಅಜ್ಜಂಪುರದ ಶೆಟ್ಟರ ಸಿದ್ಧಪ್ಪ ಪ್ರೌಢಶಾಲೆಯ  ಸ್ವರ್ಣಮಹೋತ್ಸವದ ಸಂದರ್ಭದಲ್ಲಿ ರಚಿಸಿದರು. ಇದನ್ನು ಬರೆಯುವ ಕಾಲಕ್ಕೆ ಅವರು ಅನೇಕರಿಂದ ಮಾಹಿತಿಗಳನ್ನು ಪಡೆದು,  ಬಹಳ ಶ್ರಮವಹಿಸಿ ಸಿದ್ಧಪಡಿಸಿದರು. ಕಾರಣಾಂತರಗಳಿಂದ ಆ ಉತ್ಸವ ನಡೆಯಲಿಲ್ಲ. ಅದು ಇಲ್ಲಿ ಪ್ರಕಟವಾಗುತ್ತಿದೆ.  ಈ ಪ್ರೌಢಶಾಲೆಗೆ ಮಹತ್ವದ ದಾನಿಗಳಾಗಿದ್ದ ಶ್ರೀ ಶೆಟ್ಟರ ಸಿದ್ಧಪ್ಪನವರ ಬಗ್ಗೆ ಈಗಾಗಲೇ ಒಂದು ಲೇಖನ  ಪ್ರಕಟಗೊಂಡಿರುವುದನ್ನು ತಾವೆಲ್ಲರೂ ಗಮನಿಸಿರಬಹುದು. ಪ್ರಸ್ತುತ ಲೇಖನದಲ್ಲಿ ಶಾಲೆಯ ಇತಿಹಾಸವನ್ನು ವಿಸ್ತಾರವಾಗಿ  ವಿವರಿಸಲಾಗಿದೆ. ಈ ಶಾಲೆಯ ವಿದ್ಯಾರ್ಥಿಗಳು ಈಗ ದೇಶ ವಿದೇಶಗಳಲ್ಲಿ ಹರಡಿದ್ದಾರೆ. ಅವರು ತಮ್ಮ ಶಾಲೆಯ  ಇತಿಹಾಸವನ್ನು ಮನಗಾಣಲಿ, ಹಳೆಯ ನೆನಪುಗಳು ಮರುಕಳಿಸಲಿ ಎಂಬ ಸದಾಶಯದಿಂದ ಬರೆದಿರುವ ಈ ಲೇಖನಕ್ಕೆ  ನಿಮ್ಮೆಲ್ಲರಿಂದ ಪ್ರತಿಕ್ರಿಯೆಗಳು ಬರುವಂತಾಗಲಿ. ಅಂತೆಯೇ ಎಸ್.ಎಸ್.ಟಿ.ಬಿ. ಹೈಸ್ಕೂಲ್ ಎಂದು ಜನಪ್ರಿಯವಾಗಿದ್ದ  ಅದೀಗ ಪ್ರಥಮ ದರ್ಜೆಯ ಕಾಲೇಜು ಆಗಿ ಪರಿವರ್ತಿತವಾಗಿದೆ.   ನಿಮ್...

17. ಸಾಂಪ್ರದಾಯಿಕ ಹಾಡುಗಳ ಸಂಗ್ರಾಹಕಿ

ಇಮೇಜ್
ಅಜ್ಜಂಪುರ ಅಚ್ಚಮ್ಮ ಸೀತಾರಾಮ ಭಟ್ ಅವರು ಅಜ್ಜಂಪುರದವರು. ೧೯-೦೪-೧೯೨೫ರಲ್ಲಿ ಜನಿಸಿದರು. ತಂದೆ ಶಂಕರಪ್ಪ. ಅವರು ಸ್ಕೌಟ್ ಮಾಸ್ತರರು. ಅಚ್ಚಮ್ಮನವರು ಎರಡು ವರ್ಷದವರಿದ್ದಾಗಲೇ ತೀರಿಕೊಂಡರು. ಅಂದಿನ ಕೂಡು ಕುಟುಂಬದ ವ್ಯವಸ್ಥೆಯಲ್ಲಿ ತಂದೆಯಿಲ್ಲದೆ ಬೆಳೆದರೂ, ಅವರಿಗೆ ತಂದೆಯ ಪ್ರೀತಿಯ ವಿನಾ, ಇನ್ನಾವ ತೊಂದರೆಗಳೂ ಕಾಡಲಿಲ್ಲ. ಅದು ಬಾಲ್ಯ ವಿವಾಹದ ಕಾಲ. ತಮ್ಮ ೧೨ನೇ ವಯಸ್ಸಿನಲ್ಲಿ ಹಿರೇಮಗಳೂರಿನ ಸಂಸ್ಕೃತ ವಿದ್ವಾಂಸರಾಗಿದ್ದ ಸೀತಾರಾಮಭಟ್ಟರನ್ನು ವಿವಾಹವಾದರು. ಅಂದಿನ ಸಂಪ್ರದಾಯಸ್ಥ ಬ್ರಾಹ್ಮಣ ಕುಟುಂಬಗಳಲ್ಲಿ ದೈನಂದಿನ ಕೆಲಸ-ಕಾರ್ಯಗಳ ಜತೆಗೇ, ಸಾಹಿತ್ಯ, ಸಂಗೀತಗಳ ಅಭ್ಯಾಸಕ್ರಮವನ್ನು ರೂಢಿಸುತ್ತಿದ್ದರು. ಮುಂದೆ  ಅದು ವ್ಯಕ್ತಿತ್ವ ವಿಕಸನಕ್ಕೆ ದಾರಿ ಮಾಡಿಕೊಡುತ್ತಿತ್ತು. ಅಚ್ಚಮ್ಮನವರು ತಮ್ಮ ತಾಯಿ ವೇಂಕಟಲಕ್ಷ್ಮಮ್ಮ, ಅಜ್ಜಿ ಬನಶಂಕರಮ್ಮ, ಸೋದರತ್ತೆ ಗೌರಮ್ಮ ಮುಂತಾದ ಹಿರಿಯರೊಡನೆ ಕುಳಿತು, ಅವರು ಹಾಡುತ್ತಿದ್ದ ಸಂಪ್ರದಾಯದ ಹಾಡುಗಳನ್ನು ಅಭ್ಯಾಸಮಾಡಿದರು. ವಿವಾಹ, ಉಪನಯನ, ಗೌರೀ ಹಬ್ಬ, ಗಣಪತಿ ಹಬ್ಬ, ದೀವಳಿಗೆ, ಸಂಕ್ರಾಂತಿ ಮುಂತಾದ ಸಂದರ್ಭಗಳಲ್ಲಿ, ಅವುಗಳಿಗೆ ಸಂಬಂಧಿಸಿದ ಹಾಡುಗಳನ್ನು ಹಿಂದಿನವರು ರಚಿಸಿದ್ದಾರೆ. ಅವುಗಳನ್ನು ಸೂಕ್ತ ಸಮಯದಲ್ಲಿ ಹಾಡುತ್ತಿದ್ದಾಗ, ಆಯಾ ಹಬ್ಬ, ಉತ್ಸವಗಳ ಆಚರಣೆಯ ಹಿಂದಿನ ಉದ್ದೇಶ, ಸಂಭ್ರಮಗಳು ಆ ಹಾಡುಗಳಲ್ಲಿ ಪ್ರತಿಧ್ವನಿಸುತ್ತಿದ್ದವು. ಅವು ಯಾವುವೂ ಶಾಸ್ತ್ರೀಯ ಸಂಗೀತದ ಚೌಕಟ್ಟಿಗೆ ಒ...

16. ಕುಸಿಯುತ್ತಿರುವ ಅಮೃತ ಸೌಧ

ಇಮೇಜ್
ಅಜ್ಜಂಪುರದ  ಅಮೃತಮಹಲ್  ಪಶು ಸಂವರ್ಧನಾ ಕೇಂದ್ರ    ಇತಿಹಾಸ ಮತ್ತು ವಾಸ್ತವ ಅಜ್ಜಂಪುರದಲ್ಲಿರುವ ಅಮೃತ ಮಹಲ್  ಪಶು  ಸಂವರ್ಧನಾ   ಕೇಂದ್ರವು ನಮ್ಮ ದೇಶದ ಸಂದರ್ಭದಲ್ಲಿ ವಿಶಿಷ್ಟವಾದುದು.  ಅಜ್ಜಂಪುರದ ಅಮೃತಮಹಲ್ ಪಶು ಸಂವರ್ಧನಾ ಕೇಂದ್ರದ ಮುಖ್ಯಸ್ಥರಾಗಿ ಕಾರ್ಯ ನಿರ್ವಹಿಸಿದ ಡಾ. ಟಿ.ಎಸ್. ಕೃಷ್ಣಮೂರ್ತಿ, (ನಿವೃತ್ತ ಜಂಟಿ ನಿರ್ದೇಶಕರು, ಪಶುಪಾಲನಾ ಇಲಾಖೆ) ಗಳನ್ನು ಕಳೆದ ಡಿಸೆಂಬರ್ ನಲ್ಲಿ ಬೆಂಗಳೂರಿನ ಮತ್ತೀಕೆರೆಯ ಅವರ ನಿವಾಸದಲ್ಲಿ ಸಂದರ್ಶಿಸಿ, ಸಂಗ್ರಹಿಸಿದ ಮಾಹಿತಿಗಳನ್ನು ಇಲ್ಲಿ ನೀಡಿದ್ದೇನೆ. ಅವರು ತಮ್ಮ ಅಧಿಕಾರಾವಧಿಯಲ್ಲಿ ಕಾರ್ಯಾಲಯದಲ್ಲಿ ಕೆಲಸಮಾಡುತ್ತಿದ್ದಂತೆಯೇ, ಊರಿನ ಪ್ರಗತಿ ಮತ್ತು ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಭಾಗವಹಿಸುತ್ತಿದ್ದರು. ತಮ್ಮ ಕಾರ್ಯಕ್ಷೇತ್ರದಲ್ಲಿ ಹೊಂದಿರುವ ಪರಿಣತಿಯು ವೃತ್ತಿಯ ಅವಶ್ಯಕತೆ ಇರಬಹುದಾದರೂ,  ತಮ್ಮ ಇಲಾಖೆಯು,  ರೈತರೊಡನೆ ಹೊಂದಿದ್ದ   ಸಂಬಂಧವು  ಸಾಮಾಜಿಕ ಆರೋಗ್ಯಕ್ಕೆ ಪೂರಕವಾಗಿ ಹೇಗಿತ್ತೆಂಬುದನ್ನು ನಿರೂಪಿಸಿದರು. ರೈತರಿಂದ ಇಲಾಖೆಯು ಕಲಿಯುವುದಷ್ಟೇ ಅಲ್ಲ, ರೈತರು ಈ ಇಲಾಖೆ ತಮ್ಮದೆಂಬ ಭಾವನೆ ಬೆಳೆಯಲು, ಹಿಂದಿನ ಸರಕಾರಗಳ ನೀತಿಯಿತ್ತು, ಅವುಗಳಲ್ಲಿ ಅಡಗಿದ ವಿಶಾಲ ಭಾವನೆಯನ್ನು ಅವರಿಗೆ ಮನವರಿಕೆ ಮಾಡಿಸಲು, ತಮ್ಮ ಆಡಳಿತಾವಧಿಯಲ್ಲಿ ಹೇಗೆಲ್ಲ ಕೆಲಸಮಾಡಲಾಯಿತೆಂದು ವಿವರಿಸಿದ...