119. ಅಜ್ಜಂಪುರದ ದೇವರಮನೆಗಳು-2
ಆತ್ಮೀಯ ಓದುಗರೇ, ಈ ಸಂಚಿಕೆಯಲ್ಲಿ ಅಪೂರ್ವ ಅವರು ಅಜ್ಜಂಪುರದ ಮತ್ತೊಂದು ದೇವರಮನೆಯನ್ನು ಪರಿಚಯಿಸಿದ್ದಾರೆ. ಈ ಹಿಂದೆಯೂ ಎರಡು ಪ್ರಕಟವಾಗಿವೆ. ಇವು ಹಿಂದಿನಿಂದಲೂ ಅಜ್ಜಂಪುರದಲ್ಲಿ ಇವೆಯಾದರೂ, ಇವುಗಳ ಬಗ್ಗೆ ಜನರ ಗಮನ ಅಷ್ಚಾಗಿ ಹರಿದಂತಿಲ್ಲ. ಏಕೆಂದರೆ ಇವು ಹಿಂದೆ ಇದ್ದ ಸಾಧಾರಣ ಮಣ್ಣಿನ ಮನೆಗಳ ಜೊತೆಗೇ ಇರುತ್ತಿದ್ದುದರಿಂದ, ಇವುಗಳನ್ನು ವಿಶೇಷವೆಂದು ತಿಳಿದವರು ಕಡಿಮೆ. ಈ ವಂಶಾವಳಿಯ ಕಾರಣದಿಂದ ಅಜ್ಜಂಪುರದ ಕೆರೆಗೆ ಪರ್ವತರಾಯನ ಕೆರೆ ಎಂದು ಹೆಸರು ಬಂದಿತೆಂದು ಹೇಳಲಾಗಿದೆ. ಈ ಬಗ್ಗೆ ಹೆಚ್ಚಿನ ವಿವರಗಳು ಲಭ್ಯವಿಲ್ಲ. ಆದರೆ ಒಂದು ತರ್ಕದ ಪ್ರಕಾರ, ವಿಜಯನಗರದ ಅರಸರು ನಾಡಿನ ಹಲವಾರು ದೇವಾಲಯಗಳನ್ನು, ಕೆರೆಗಳನ್ನು ಅಭಿವೃದ್ಧಿಪಡಿಸಿದ ಉದಾಹರಣೆಗಳಿವೆ. ಇದೇ ವಂಶಕ್ಕೆ ಸೇರಿರಬಹುದಾದ ಸಾಮಂತರೋ, ನಾಯಕರಲ್ಲಿ ಓರ್ವನಾಗಿರಬಹುದಾದ ಪರ್ವತರಾಯನಿಂದಲೂ ಇದು ಉಗಮವಾಗಿರಬಹುದು. ಏಕೆಂದರೆ, ಬುಕ್ಕಾಂಬುಧಿಯ ಕೆರೆಗೆ ವಿಜಯನಗರದ ಸಂಸರ್ಗವಿದೆ. ಅಜ್ಜಂಪುರದ ದೇವಾಲಯಗಳ ನವೀಕರಣದಲ್ಲಿ ವಿಜಯನಗರದ ಪಾತ್ರವಿದೆ. ಏನಿದ್ದರೂ, ಇತಿಹಾಸಜ್ಞರು ಸಂಶೋಧಿಸಬೇಕಾಗಿರುವ ಅಂಶವಿದೆಂದು ತಿಳಿಯಬಹುದು. ಆದರೆ ಸಾಂಸ್ಕೃತಿಕ ಮಹತ್ವವುಳ್ಳ ಈ ದೇವರಮನೆಗಳು, ಆಯಾ ಕುಟುಂಬಗಳ, ವರ್ಗಗಳ ಪದ್ಧತಿಯನ್ನು ಜೀವಂತವಾಗಿಟ್ಟಿವೆ. ಸುಧಾರಿಸಿದ ಆರ್ಥಿಕ ಪರಿಸ್ಥಿತಿಯಿಂದಾಗಿ, ಸಮುದಾಯದ ಜನರು ತಮ್ಮ ಕುಲದೈವವನ್ನು ಮರೆಯದೇ, ಅವುಗಳಿದ್ದ ಸ್ಥಳಗಳನ್ನು ನವೀಕರಿಸಿ, ಸಮಾಜದ ಕಾರ್ಯಗಳಿಗೆ